ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮ; ಜಾಗೃತಿ ನಡಿಗೆ

Last Updated 18 ಮೇ 2017, 6:08 IST
ಅಕ್ಷರ ಗಾತ್ರ

ಬ್ರಹ್ಮಾವರ: ಉಡುಪಿ ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ್ ಅಭಿಯಾನ, ವಾರಂಬಳ್ಳಿ, ಚಾಂತಾರು ಮತ್ತು ಹಂದಾಡಿ ಗ್ರಾಮ ಪಂಚಾಯಿತಿ ಜಂಟಿ ಆಶ್ರಯದಲ್ಲಿ 21ಕರ್ನಾಟಕ ಬೆಟಾಲಿ  ಯನ್‌ನ ಎನ್‌.ಸಿ.ಸಿ ಕೆಡೆಟ್‌ಗಳಿಂದ ತ್ಯಾಜ್ಯ ವಿಂಗಡಣೆ ಮತ್ತು ನಿರ್ವಹಣೆ, ಪ್ಲಾಸ್ಟಿಕ್‌ ಬಳಕೆಯ ದುಷ್ಪರಿಣಾಮದ ಬಗ್ಗೆ ಬ್ರಹ್ಮಾವರ ನಗರದಲ್ಲಿ ಜಾಗೃತಿ ನಡಿಗೆ ಕಾರ್ಯಕ್ರಮ ಬುಧವಾರ ನಡೆಯಿತು.

ವಾರಂಬಳ್ಳಿ ಪಂಚಾಯಿತಿ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಮಾತನಾಡಿ, ದೇಶದಲ್ಲಿ ಪ್ಲಾಸ್ಟಿಕ್‌ ನಿಷೇಧ ಆದರೂ ಇದರ ಬಳಕೆ ನಿಂತಿಲ್ಲ, ಪ್ಲಾಸ್ಟಿಕ್‌ನಿಂದ ಆಗುವ ದುಷ್ಪರಿಣಾಮದ ಬಗ್ಗೆ ಗ್ರಾಹಕ ಮತ್ತು ಅಂಗಡಿ ಮಾಲೀಕರಿಗೆ ಅರಿವು ಮೂಡಿಸುವ ಕಾರ್ಯ ನಿರಂತರ ಪ್ರಕ್ರಿಯೆ ಆಗಬೇಕು. ಹೀಗೆ ಆದಲ್ಲಿ ಮಾತ್ರ ಪ್ಲಾಸ್ಟಿಕ್ ಮುಕ್ತವಾಗಲು ಸಾಧ್ಯ ಎಂದರು.

ಸ್ವಚ್ಛ ಭಾರತ್ ಮಿಷನ್‌ನ ಸುಧೀರ್ ಮಾತನಾಡಿ ‘ಮನೆಯಲ್ಲಿ ಸಂಗ್ರಹ ಮಾಡುವ ತ್ಯಾಜ್ಯವನ್ನು ಸೂಕ್ತ ವಿಲೇವಾರಿ ಮಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದಲ್ಲಿ ತ್ಯಾಜ್ಯ ಸಮಸ್ಯೆಗೂ ಪರಿಹಾರ ಸಿಗುತ್ತದೆ’ ಎಂದು ಹೇಳಿದರು.

ಬ್ರಹ್ಮಾವರದ ಎಸ್.ಎಂ.ಎಸ್ ನಲ್ಲಿ ನಡೆಯುತ್ತಿರುವ 21ಕರ್ನಾಟಕ ಬೆಟಾಲಿಯನ್‌ನ ಎನ್‌.ಸಿ.ಸಿ ಕೆಡೆಟ್‌ಗಳ ವಾರ್ಷಿಕ ಶಿಬಿರದಲ್ಲಿ ಭಾಗವಹಿಸಿದ್ದ ನೂರಕ್ಕೂ ಹೆಚ್ಚು ಕೆಡೆಟ್‌ಗಳು ಬ್ರಹ್ಮಾವರ ಸುತ್ತಮುತ್ತಲಿನ ಅಂಗಡಿಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಬದಲಿಗೆ ಬಟ್ಟೆ ಬ್ಯಾಗ್‌ಗಳನ್ನು ಉಪಯೋಗಿಸುವಂತೆ ಮನವಿ ಮಾಡಿದರು. ಇದಲ್ಲದೇ ಗ್ರಾಹಕರಲ್ಲಿದ್ದ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ತೆಗೆದುಕೊಂಡು ಕಾಗದ, ಬಟ್ಟೆ ಬ್ಯಾಗ್‌ಗಳನ್ನು ನೀಡಿ ಪ್ಲಾಸ್ಟಿಕ್‌ನಿಂದಾಗುವು ದುಷ್ಟಪರಿ ಣಾಮದ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ಕುಸುಮ ಪೂಜಾರಿ, ವಾರಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್‌ಚಂದ್ರ, ಚಾಂತಾರಿನ ಸರಸ್ವತಿ, ಹಂದಾಡಿಯ ಪ್ರತಿಮಾ ಶೆಟ್ಟಿ, ಸ್ವಚ್ಛ್ ಭಾರತ್ ಮಿಷನ್‌ನ ರಘುನಾಥ್, ಎನ್‌.ಸಿ.ಸಿ ಮುಖ್ಯಸ್ಥರಾದ ಕರ್ನಲ್ ರಮಾನಾಥ ಶೆಟ್ಟಿ, ಕರ್ನಲ್ ಸಾಜು ಮ್ಯಾಥ್ಯೂ, ಭಾಸ್ಕರ್, ಪಿಡಿಓ ಜೇಮ್ಸ್ ಡಿಸಿಲ್ವ, ಶ್ರುತಿ, ವಂದನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT