ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾನತೆ ಸಾರಿದ ಹರಿಕಾರ ಬಸವಣ್ಣ

Last Updated 18 ಮೇ 2017, 6:09 IST
ಅಕ್ಷರ ಗಾತ್ರ

ಉಡುಪಿ: ಜಗಜ್ಯೋತಿ ಬಸವಣ್ಣನವರು ದೇಶದಲ್ಲಿದ್ದ ಅಸ್ಪೃಶ್ಯತೆಯನ್ನು ನಿವಾರಿಸಿ ಸಮಾನತೆಗೆ ಅಡಿಪಾಯ ಹಾಕಿದರು ಎಂದು ಕರ್ನಾಟಕ ವಿದ್ಯುತ್ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕಿ (ಹೈಡಲ್‌) ಜಿ. ರತ್ನಮ್ಮ ಹೇಳಿದರು.

ಕರ್ನಾಟಕ ವಿದ್ಯುತ್ ನಿಗಮ ಹೊಸಂಗಡಿಯ ಎನರ್ಜಿ ಕ್ಲಬ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜ್ಜಳ ರಾಜನ ಆಸ್ಥಾನದ ಮಂತ್ರಿಯಾಗಿ ಆತನ ಮಾರ್ಗದರ್ಶನದಲ್ಲಿ ಸಮಾನತೆಯನ್ನು ಕಂಡುಕೊಂಡರು. ಸಮಾಜದ ಕಟ್ಟ ಕಡೆಯ ಜನಾಂಗವನ್ನು ಮೇಲ್ವರ್ಗ ದದೊಂದಿಗೆ ವಿಲೀನಗೊಳಿಸಲು ಪ್ರಯತ್ನಿ ಸಿದರು ಎಂದರು.

ನಿಗಮದ ನಿವೃತ್ತ ಕಚೇರಿ ವ್ಯವಸ್ಥಾಪಕ ಅಂಬ್ರಯ್ಯ ಮಠ ಅವರು ಮಾತನಾಡಿ. ಬಸವಣ್ಣ ಅವರು ಜಾತಿ, ಮತ ಭೇದ ತೊಡೆದು ಹಾಕಿ ಎಲ್ಲಾ ಜನಾಂಗ ವನ್ನು ಒಂದುಗೂಡಿಸುವಲ್ಲಿ ಮಹಾನ್ ಪಾತ್ರ ವಹಿಸಿದ ಧೀಮಂತ ಪುರುಷ. ಮಾನವ ಕುಲಕ್ಕೆ ಅವರು ಮಾನವತಾ ಸಂದೇಶ ನೀಡಿ ಹೋದರು. ದಲಿತರಿಗೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡಲು ಅವರು ಪ್ರೇರಣೆಯಾದರು. ಮಹಿಳೆಯರಿಗೆ ಸ್ವಾತಂತ್ರ್ಯ ಮತ್ತು ಸಮಾನತೆ ನೀಡಲು ಶ್ರಮಿಸಿದ ವಿಶ್ವದ ಮೊದಲ ವ್ಯಕ್ತಿ ಎಂದರು.

ಸೂಪರಿಂಟೆಂಡೆಂಟ್ ಎಂಜಿನಿಯರ್ ಉದಯ ನಾಯ್ಕ ಮಾತನಾಡಿ, ‘ನಾವು ಮಾಡುವ ಕಾಯಕದಲ್ಲೇ ದೇವ ರನ್ನು ನೋಡಬೇಕು ಎಂದು ವಚನದ ಮೂಲಕ ಜನರಿಗೆ ತಿಳಿ ಹೇಳಿದರು’ ಎಂದರು.

ತಾನು ಸವರ್ಣೀಯ ಕುಲದವನಾ ದರು ಮನುಜಕುಲ ಒಂದೇ ಬಸವಣ್ಣ ಪ್ರತಿಪಾದಿಸಿದರು, ಸಮಾನತೆ, ಕಾಯಕ, ದಾಸೋಹ ಇವೆಲ್ಲ ತತ್ವವನ್ನು ಆಚರಿಸುವ ಎಲ್ಲರೂ ಶಿವಶರಣರು ಎಂದು ಅವರು ಹೇಳಿದರು ಎಂದು ವೈದ್ಯಕೀಯ ಅಧೀಕ್ಷಕಿ ಡಾ. ವಿಜಯ ಲಕ್ಷ್ಮೀ ಹೇಳಿದರು.

ಗಾಯತ್ರಿ ದೇವಿ ಪ್ರಾರ್ಥಿಸಿದರು, ಸದಾಶಿವ ಸ್ವಾಗತಿಸಿದರು. ಸಂದೇಶ್ ಕುಮಾರ್ ಪರಿಚಯಿಸಿದರು. ರೇಖಾ ತಿಮ್ಮಪ್ಪ ಕಾರ್ಯಕ್ರಮ ನಿರೂಪಿಸಿದರು.

**

ಬಸವಣ್ಣನವರು ಅನುಭವ ಮಂಟಪ ಕಟ್ಟಿ ಆ ವೇದಿಕೆಯಿಂದ ಇಡೀ ಮನುಕುಲಕ್ಕೆ ಮಾನವತಾ ಸಂದೇಶ ಸಾರಿದರು.
-ಜಿ. ರತ್ನಮ್ಮ,
ಕೆಪಿಸಿ ಕಾರ್ಯನಿರ್ವಾಹಕ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT