ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೂ ಹಲವು ದಾರಿ..

ಅಕ್ಷರ ಗಾತ್ರ

ಹುಬ್ಬಳ್ಳಿ: ಪಿಯುಸಿ ಆರ್ಟ್ಸ್ ಹಾಗೂ ಕಾಮರ್ಸ್ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ವೃತ್ತಿ ಶಿಕ್ಷಣದಲ್ಲಿ ಸಾಕಷ್ಟು ಅವಕಾಶಗಳಿವೆ. ಶಿಕ್ಷಕರು, ಪೋಷಕರೊಂದಿಗೆ ಚರ್ಚಿಸಿ, ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬಹುದು.

ವಾಣಿಜ್ಯ ವಿಭಾಗ: ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳು ಬ್ಯಾಂಕಿಂಗ್, ವಾಣಿಜ್ಯ, ವ್ಯವಹಾರ, ಲೆಕ್ಕಪತ್ರ, ವಿಮೆ, ಸಹಕಾರ ಕ್ಷೇತ್ರ, ಉಳಿತಾಯ, ಬಂಡವಾಳ ಹೂಡಿಕೆ, ನಿರ್ವಹಣೆ, ಹಣಕಾಸು, ಕಂಪೆನಿ ಸೆಕ್ರೆಟರಿ ಇತ್ಯಾದಿ ವಿಭಾಗಗಳಿಗೆ ಸಂಬಂಧಿಸಿದ ಕೋರ್ಸ್‌ ಅಥವಾ ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ, ಬಿ.ಕಾಂ–ಎಲ್‌.ಎಲ್.ಬಿ ಇತ್ಯಾದಿ ಪದವಿಗಳಿಗೆ ಸೇರಬಹುದು.

ಕಲಾ ವಿಭಾಗ: ಪಿಯು ಕಲಾ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳು ಭಾಷೆ, ಭಾಷಾ ವಿಜ್ಞಾನ, ಸಾಹಿತ್ಯ, ಇತಿಹಾಸ, ಪ್ರಾಕ್ತನಶಾಸ್ತ್ರ, ಸಮಾಜಶಾಸ್ತ್ರ, ಸಮಾಜ ಕಾರ್ಯ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ತತ್ವಶಾಸ್ತ್ರ, ಭೂಗೋಳ, ಮಾನವಿಕ ಶಾಸ್ತ್ರ, ಸಾರ್ವಜನಿಕ ಆಡಳಿತ, ಮನೋವಿಜ್ಞಾನ, ಪತ್ರಿಕೋದ್ಯಮ ಮತ್ತು ಸಂವಹನ, ಗ್ರಂಥಾಲಯ ವಿಜ್ಞಾನ... ಈ ಯಾವುದೇ ವಿಷಯದ ಕಾಂಬಿನೇಷನ್‌ ಆಯ್ದುಕೊಂಡು ಕಲಾ ಪದವಿ ಪಡೆಯಬಹುದು. ಬಿ.ಎ–ಎಲ್.ಎಲ್.ಬಿ, ಬಿ.ಎ–ಇಡಿ, ಡಿ.ಇಡಿ... ಇತ್ಯಾದಿ ಕೋರ್ಸ್‌ಗಳಿಗೆ ಸೇರಬಹುದು.

ಇತರ ಕೋರ್ಸ್‌ಗಳು:  ಕಲೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಗೃಹವಿಜ್ಞಾನ, ಕೃಷಿ, ತೋಟಗಾರಿಕೆ, ಲಲಿತಕಲೆ, ಫ್ಯಾಷನ್ ಡಿಸೈನಿಂಗ್, ಬಹುಮಾಧ್ಯಮ ತರಬೇತಿ, ಚಲನಚಿತ್ರ ನಿರ್ಮಾಣ, ಅನಿಮೇಶನ್, ಆಭರಣ ವಿನ್ಯಾಸ, ಪತ್ರಿಕೋದ್ಯಮ, ಫೋಟೊ ಜರ್ನಲಿಸಂ, ಜಾಹೀರಾತು ನಿರ್ಮಾಣ, ಸಾರ್ವಜನಿಕ ಸಂಪರ್ಕ, ಪ್ರವಾಸೋದ್ಯಮ, ಹೋಟೆಲ್‌ ಮ್ಯಾನೇಜ್‌ಮೆಂಟ್, ವಿಪತ್ತು ನಿರ್ವಹಣೆ, ಬ್ಯೂಟಿಶಿಯನ್, ಫ್ಯಾಷನ್ ಡಿಸೈನಿಂಗ್, ಸಂಗೀತ, ಪ್ರದರ್ಶಕ ಕಲೆ, ಆಹಾರ ಸಂಸ್ಕರಣೆ, ಮತ್ಸ್ಯೋದ್ಯಮ, ಕೌಶಲ ನಿರ್ವಹಣೆ, ಕಂಪ್ಯೂಟರ್ ತರಬೇತಿ... ಇತ್ಯಾದಿ ವೃತ್ತಿಪರ ಕೋರ್ಸ್‌ಗಳಿಗೂ ಸೇರಬಹುದು.

***

ಅನುತ್ತೀರ್ಣ ಆದವರಿಗೂ ಅವಕಾಶ!
ಪಿಯು ಫೇಲಾದವರಿಗೂ ಸಾಕಷ್ಟು ಅವಕಾಶಗಳಿವೆ. ಡೇರಿ ತಂತ್ರಜ್ಞಾನ, ಎರೆಹುಳು ಗೊಬ್ಬರ ತಯಾರಿಕೆ, ತೋಟಗಾರಿಕಾ ತರಬೇತಿ, ಬೇಕರಿ ಉತ್ಪನ್ನಗಳ ತಯಾರಿ, ಆಹಾರ ತಯಾರಿಕೆ, ಹೊಲಿಗೆ, ಎಂಬ್ರಾಯಿಡರಿ, ಫ್ಯಾಬ್ರಿಕ್ ಪೇಂಟಿಂಗ್, ಫೋಟೊಗ್ರಫಿ, ವಿಡಿಯೊಗ್ರಫಿ, ವಸ್ತ್ರವಿನ್ಯಾಸ, ಬೈಕ್, ಆಟೊ, ಕಾರು ಹಾಗೂ ಬೃಹತ್ ವಾಹನಗಳ ರಿಪೇರಿ, ಎಲೆಕ್ಟ್ರಾನಿಕ್ ಉಪಕರಣಗಳ ರಿಪೇರಿ, ಹಾರ್ಡ್‌ವೇರ್– ಸಾಫ್ಟ್‌ವೇರ್‌ ನೆಟ್‌ವರ್ಕಿಂಗ್, ಕಂಪ್ಯೂಟರ್ ತರಬೇತಿ... ಹೀಗೆ ಹಲವಾರು ಕೋರ್ಸ್‌ಗಳಿಗೆ ಪಿಯು ಫೇಲಾದವರು ಕೂಡ ಸೇರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT