ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶು ಆಸ್ಪತ್ರೆಗಳಲ್ಲಿ ದೊರಕದ ಸೇವೆ

Last Updated 18 ಮೇ 2017, 6:57 IST
ಅಕ್ಷರ ಗಾತ್ರ

ಬಳ್ಳಾರಿ: ಮೀರಾ ಸಕ್ಸೆನಾ ನೇತೃತ್ವದ ಉನ್ನತಾಧಿಕಾರ ಸಮಿತಿಯ ಶಿಫಾರಸು ಗಳನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಪಶುವೈದ್ಯರು, ಪಶುವೈದ್ಯ ಕೀಯ ಪರೀಕ್ಷಕರು ಮತ್ತು ಸಹಾಯಕರು ನಗರದಲ್ಲಿ ನಡೆಸುತ್ತಿರುವ ಅನಿರ್ದಿಷ್ಟ ಅವಧಿಯ ಮುಷ್ಕರ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲೆಯಲ್ಲಿ ಪಶು ಚಿಕಿತ್ಸೆ ಸೌಕರ್ಯ ಸ್ಥಗಿತಗೊಂಡಿದೆ.

ಜಿಲ್ಲಾ ಕೇಂದ್ರದಲ್ಲಿರುವ ಪಾಲಿ ಕ್ಲಿನಿಕ್, ತಾಲ್ಲೂಕು ಮತ್ತು ಹೋಬಳಿ ಮಟ್ಟದ ಪಶು ಆಸ್ಪತ್ರೆಗಳು, ಪಶು ಚಿಕಿತ್ಸಾಲಯಗಳು, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಹಾಗೂ ಸಂಚಾರಿ ಪಶು ಚಿಕಿತ್ಸಾಲಯಗಳ ಸೇವೆಗೆ ಅಡ್ಡಿ ಉಂಟಾಗಿದೆ. ಜಾನುವಾರುಗಳನ್ನು ಎಂದಿನಂತೆ ಆಸ್ಪತ್ರೆ, ಚಿಕಿತ್ಸಾಲಯಗಳಿಗೆ ಕರೆತರುತ್ತಿರುವ ರೈತರು ವಾಪಸಾಗುತ್ತಿದ್ದಾರೆ.

ಜಿಲ್ಲಾ ಕೇಂದ್ರವಾದ ನಗರದಲ್ಲಿರುವ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕರ ಕಚೇರಿ ಆವರಣದಲ್ಲೇ ಪಾಲಿಕ್ಲಿನಿಕ್‌ ಇದೆ. ರೇಡಿಯೋಪಾರ್ಕ್‌ ಸಮೀಪದಲ್ಲಿ ಪಶು ಚಿಕಿತ್ಸಾಲಯವಿದೆ. ಇಲ್ಲಿಯೂ ಸೇರಿದಂತೆ ಜಿಲ್ಲೆಯಲ್ಲಿ ಎಲ್ಲಿಯೂ ಪಶು ವೈದ್ಯರು, ಪರಿವೀಕ್ಷಕರು ಮತ್ತು ಸಹಾಯಕರು ಲಭ್ಯವಿಲ್ಲ. ಸಂಚಾರಿ ಪಶು ಚಿಕಿತ್ಸಾಲಯ ಗಳೂ ಸ್ಥಗಿತಗೊಂಡಿರುವು ದರಿಂದ ಪಶುಗಳಿಗೆ ಚಿಕಿತ್ಸೆ ಇಲ್ಲವಾಗಿದೆ.

ಜಾನುವಾರು ಅಧಿಕಾರಿ ಇಲ್ಲ: ಇಲಾಖೆಯಲ್ಲಿ ಈಗ ಇರುವ ನೇಮಕಾತಿ ವೃಂದದ ಪ್ರಕಾರ ವೈದ್ಯರದು ಎ ದರ್ಜೆ ಹುದ್ದೆ. ಜಾನುವಾರು ಅಧಿಕಾರಿಗಳದು ಬಿ ದರ್ಜೆ ಹುದ್ದೆ.

ಈ ಹುದ್ದೆಗಳು ಜಿಲ್ಲೆಯಲ್ಲಿ 9 ಇದ್ದು, ಒಂದು ಮಾತ್ರ ಭರ್ತಿಯಾಗಿದೆ. ಅವರು ಕೂಡ ಉಪನಿರ್ದೇಶಕರ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಇಲಾಖೆಯ ಮೂಲಗಳು ‘ಪ್ರಜಾ ವಾಣಿ’ಗೆ ತಿಳಿಸಿವೆ.

ಪದೋನ್ನತಿ ಇಲ್ಲ: ‘ವೃಂದ ನೇಮ ಕಾತಿಯ ಪರಿಷ್ಕೃತ ಅಧಿಸೂಚನೆ ಪ್ರಕಟ ವಾಗದೇ ಇರುವುದರಿಂದ ಪದೋನ್ನತಿ ಕನಸಿನ ಮಾತಾಗಿದೆ.

ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಪಶು ವೈದ್ಯಾಧಿಕಾರಿ ಯಾಗಿ ಸೇವೆ ಸಲ್ಲಿಸುತ್ತಿದ್ದರೂ ಹಿರಿಯ ಪಶುವೈದ್ಯಾಧಿ ಕಾರಿಯಾಗಿ ಪದೋನ್ನತಿ ದೊರಕಿಲ್ಲ’ ಎಂದು ಪಶು ವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಟಿ.ಶಶಿಧರ ವಿಷಾದಿಸಿದರು.

‘ಅಧಿಸೂಚನೆ ಪ್ರಕಟವಾದರೆ, ಸೇವೆ ಆರಂಭಿಸಿ 6 ವರ್ಷ ಪೂರೈಸಿದವರಿಗೆ ಹಿರಿಯ ಪಶುವೈದ್ಯಾಧಿಕಾರಿ ಹುದ್ದೆಗೆ ಪದೋನ್ನತಿ ದೊರಕುತ್ತದೆ. 13 ವರ್ಷ ಪೂರೈಸಿದರೆ ಮುಖ್ಯ ಪಶುವೈದ್ಯಾಧಿಕಾರಿ ಯಾಗಬಹುದು. ಈ ಅವಕಾಶದ ಸಲುವಾಗಿಯೇ ಮುಷ್ಕರ ವನ್ನು ಹಮ್ಮಿ ಕೊಳ್ಳಲಾಗಿದೆ. ಆದರೆ ಸರ್ಕಾರ ಮಾತ್ರ ಕಿವುಡಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

**

‘ಸಮಸ್ಯೆ ಬಗ್ಗೆ ರೈತರಿಗೆ ಮನವರಿಕೆ’

ಮುಷ್ಕರದ ಪರಿಣಾಮಗಳ ಕುರಿತು ರೈತರಿಗೆ ಮನವರಿಕೆ ಮಾಡಿದ ಬಳಿಕವೇ ಮುಷ್ಕರವನ್ನು ಆರಂಭಿಸಲಾಗಿದೆ ಎಂದು ಪಶು ವೈದ್ಯಕೀಯ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಟಿ.ಶಶಿಧರ ಪ್ರತಿ ಕ್ರಿಯಿಸಿದ್ದಾರೆ. ಅಂತಿಮ ಅಧಿಸೂಚನೆ ಪ್ರಕಟಿಸಲು ಆಗ್ರಹಿಸಿ ಏಪ್ರಿಲ್‌ನಲ್ಲಿ ಕಾಲು ಬಾಯಿ ರೋಗ ಜ್ವರ ಲಸಿಕಾ ಅಭಿಯಾನಕ್ಕೆ ಬಹಿಷ್ಕಾರ ಹಾಕ ಲಾಗಿತ್ತು. ಆದರೆ ಇಲಾಖೆಯ ಸಚಿವರು ಭರವಸೆ ನೀಡಿದ್ದರಿಂದ ಬಹಿಷ್ಕಾರವನ್ನು ವಾಪಸ್‌ ಪಡೆದು ಅಭಿಯಾನದಲ್ಲಿ  ಪಾಲ್ಗೊಂಡಿ ದ್ದೆವು. ಆದರೆ ಬೇಡಿಕೆ ಈಡೇರದೇ ಇರುವುದರಿಂದ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದರು.

**
‘ಒಕ್ಕೂಟದ ವೈದ್ಯರ ಸೇವೆಗೆ ಮನವಿ’

ತುರ್ತು ಸಂದರ್ಭಗಳಲ್ಲಿ ರಾಯಚೂರು ಬಳ್ಳಾರಿ ಕೊಪ್ಪಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ವೈದ್ಯರ ಸೇವೆಯನ್ನು ನೀಡುವಂತೆ ಕೋರಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಲಾಗಿದೆ ಎಂದು ಇಲಾಖೆಯ ಉಪನಿರ್ದೇಶಕ ಡಿ.ಎಲ್‌.ಪರಮೇಶ್ವರ ನಾಯಕ್‌ ತಿಳಿಸಿದ್ದಾರೆ.

**

ಮುಷ್ಕರವನ್ನು ನಿಲ್ಲಿಸುವಂತೆ ವೈದ್ಯ ಸಿಬ್ಬಂದಿಗೆ ಮನವಿ ಮಾಡಲಾಗಿದೆ. ಆದರೆ ಅವರು ಅದಕ್ಕೆ ಒಪ್ಪಿಲ್ಲ. ಪರ್ಯಾಯ ವ್ಯವಸ್ಥೆ ಮಾಡುವುದೂ ಅಸಾಧ್ಯ.
-ಡಿ.ಎಲ್‌.ಪರಮೇಶ್ವರ ನಾಯಕ್‌, ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT