ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ ನಗರಸಭೆ 8 ವಾರ್ಡ್ ಹೆಚ್ಚಳ

Last Updated 18 ಮೇ 2017, 9:24 IST
ಅಕ್ಷರ ಗಾತ್ರ

ಶಹಾಪುರ: ನಗರಸಭೆಯ ಸ್ಥಳೀಯ ಸಂಸ್ಥೆಗಳ 2011ರ ಜನಗಣತಿ ಅನ್ವಯ ಭೌಗೋಳಿಕ ಸಾಮಿಪ್ಯ, ಅಗತ್ಯ ಸೌಲಭ್ಯ, ರಸ್ತೆ ಸಂಪರ್ಕ ಈ ಎಲ್ಲಾ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆಡಳಿತಾತ್ಮಕ ಹಿತದೃಷ್ಟಿಯಿಂದ ಕ್ಷೇತ್ರ ಪುನರ್ ವಿಂಗಡಣೆಯ ಕರಡು ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಡಾ.ಅವಿನಾಶ ಮೆನನ್ ರಾಜೇಂದ್ರನ್ ಹೊರಡಿಸಿದ್ದಾರೆ.

ಸದ್ಯ 23 ವಾರ್ಡ್‌ಗಳಿದ್ದು, ಅಧಿಸೂಚನೆಯಿಂದ 8 ವಾರ್ಡ್‌ಗಳು ಹೊಸದಾಗಿ ಸೇರ್ಪಡೆಯಾಗಲಿವೆ. ಇದರಿಂದ ವಾರ್ಡ್‌ಗಳ ಸಂಖ್ಯೆ 31ಕ್ಕೆ ಏರಲಿದೆ.

ಅಧಿಸೂಚನೆ ಏಪ್ರಿಲ್ 25ರಂದು ಪ್ರಕಟಗೊಂಡಿದ್ದು, ಯಾವುದೇ ತಕರಾರು ಇದ್ದಲ್ಲಿ  15 ದಿನಗಳಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿತ್ತು.

ವಾರ್ಡ್ ವ್ಯಾಪ್ತಿಗೆ ಒಳಪಡುವ ಪ್ರಾದೇಶಿಕ ಕ್ಷೇತ್ರದ ಹೆಸರು ಈ ಕೆಳಗಿನಂತೆ ಇವೆ.

1ನೇ ವಾರ್ಡ್: ಆಶ್ರಯ ಕಾಲೊನಿ, ಐಡಿಎಸ್ಎಂಟಿ, ಎನ್.ಜಿ.ಒ ಕಾಲೊನಿ, ಫಿಲ್ಟರ್ ಬೆಡ್. 

2ನೇ ವಾರ್ಡ್: ಬಾಪುಗೌಡ ನಗರ, ಶರಣಬಸವೇಶ್ವರ ನಗರ, ಲಕ್ಷ್ಮಿನಗರ, ಬುದ್ಧನಗರ. 

3ನೇ ವಾರ್ಡ್: ದೇವಿನಗರ, ಹಳೆ ಬಸ್ ನಿಲ್ದಾಣ, ಆರಬೋಳ ಲೇಔಟ್, ಸಿ.ಬಿ.ಕಾಲೊನಿ, ಗೋಪಾಲರಾವ ಲೇ ಔಟ್.

4ನೇ ವಾರ್ಡ್: ಸಂಗಮೇಶ್ವರ ನಗರ, ಇಂದಿರಾ ನಗರ. 

5ನೇ ವಾರ್ಡ್: ಕುಂಬಾರ ಓಣಿ, ಜೆಟ್ಟೆರ ಓಣಿ, ಘಂಟೆಪ್ಪ ಓಣಿ. 

6ನೇ ವಾರ್ಡ್: ಸಾಳೆರ ಓಣಿ, ಸೈದರ ಓಣಿ. 

7ನೇ ವಾರ್ಡ್: ಅಫಜಲಖಾನ ಮಜ್ಜಿದ, ಫಕೀರೇಶ್ವರ ಮಠ, ತಳವಾರ ಓಣಿ ಅರ್ಧಭಾಗ. 

8ನೇ ವಾರ್ಡ್: ಡಿಗ್ರಿ ಕಾಲೇಜು, ಕೆ.ಇ.ಬಿ. ಶಿರವಾಳ ಲೇ ಔಟ್, ಸಂಗಮ್ಮ ದೇಸಾಯಿ ಲೇಔಟ್, ಸಿದ್ದಲಿಂಗೇಶ್ವರ ಬೆಟ್ಟ.

9ನೇ ವಾರ್ಡ್: ತಳವಾರ ಓಣಿ ಅರ್ಧ ಭಾಗ, ಖುರೇಶಿ ಓಣಿ, ಫಕೀರೇಶ್ವರ ಲೇಔಟ್, ಸಂಗಮ್ಮ ದೇಸಾಯಿ ಲೇಔಟ್, ಜಾಲಗಾರ ಓಣಿ.

10ನೇ ವಾರ್ಡ್: ಚಿಂಚೋಳಿ ಓಣಿ, ಟಂಕಸಾಲ ಓಣಿ, ಗಾಧಿಚೌಕ್‌, ಚಾಮುಂಡೇಶ್ವರಿ ನಗರ. 

11ನೇ ವಾರ್ಡ್: ಆನೇಗುಂದಿ ಓಣಿ. 

12ನೇ ವಾರ್ಡ್: ತಾಜಗಾರ ಓಣಿ, ಆರಬೋಳ ಓಣಿ. 

13ನೇ ವಾರ್ಡ್: ವಿದ್ಯಾನಗರ.

14ನೇ ವಾರ್ಡ್: ಶಹಾ ಲೇ ಔಟ್, ಮುಸ್ತಾಫ್ ಕಾಲೊನಿ, ಗುತ್ತಿಪೇಟ ಭಾಗ. 

15ನೇ ವಾರ್ಡ್: ಗುತ್ತಿಪೇಟ ಶರಾಫ್ ಬಜಾರ,

16ನೇ ವಾರ್ಡ್: ಗುತ್ತಿಪೇಟ ಹರಿಜನ ವಾಡ್ ಕಾಳಮ್ಮ ಕಟ್ಟಿ. 

17ನೇ ವಾರ್ಡ್: ದರ್ಬಾನ್‌ ಬೇಸ್, ತುಳೇರ ಓಣಿ, ಗಂಗಾನಗರ. 

18ನೇ ವಾರ್ಡ್: ತುಳೇರ ಓಣಿ, ಉಪ್ಪಾರ ಓಣಿ, ಮಲ್ಲಾ ಓಣಿ, ಕಟಗರ ಓಣಿ, ಭಾಗವಾನ ಓಣಿ, ತೋಟಿಗಾರ ಓಣಿ. 

19ನೇ ವಾರ್ಡ್: ಜಮಖಂಡಿ ಓಣಿ, ಬ್ರಾಹ್ಮಣರ ಓಣಿ, ಕುರುಬರ ಓಣಿ, ಖಾವಸ್ಪೂರ ಭಾಗ. 

20ನೇ ವಾರ್ಡ್: ಮಮದಾಪುರ, ಎಸ್.ವಿ. ಲೇ ಔಟ್, ಸಂತೋಷ ದೇಸಾಯಿ ಲೇ ಔಟ್, ಕಡವಡಿ ಓಣಿ, ಜಂಗಳಿ ಲೇ ಔಟ್. 

21ನೇ ವಾರ್ಡ್: ಮಮತಾ ಕಾಲೊನಿ, ಕೈಗಾರಿಕೆ ಪ್ರದೇಶ, ರಾಕಂಗೇರಾ. 

22ನೇ ವಾರ್ಡ್: ಹೊಸ ಬಸ್ ನಿಲ್ದಾಣ, ಕುಂಚಕೊರವರ ಓಣಿ, ಹಳಿಪೇಟ ಹರಿಜನ ವಾಡ್. 

23ನೇ ವಾರ್ಡ್: ಕುರುಬರ ಓಣಿ, ಸಿಕ್ಕಲಗಾರ ಓಣಿ, ಖಾಜಿ ಲೇ ಔಟ್. 

24ನೇ ವಾರ್ಡ್: ಅದಿಲಪೂರ, ಅಗಸರ ಓಣಿ, ಭಗವಾನ ಓಣಿ.

25ನೇ ವಾರ್ಡ್: ಚೌಡಯ್ಯ ಮಠ ಏರಿಯಾ, ಅಪ್ಪೋರ ಓಣಿ, ಅರಗೇರ ಓಣಿ, ಸುರಪುರ ಓಣಿ, ವದರಬಾವಿ ಓಣಿ. 

26ನೇ ವಾರ್ಡ್: ಚಂಡುನವರ ಓಣಿ, ಯಾದವ ಲೇ ಔಟ್, ದೇಸಾಯಿ ಲೇ ಔಟ್, ಪಾಲಕಮ್ಮನ ಗುಡಿ ಓಣಿ. 

27ನೇ ವಾರ್ಡ್: ಸೌದರ ಓಣಿ, ಮ್ಯಾಕಲ್‌ ದೊಡ್ಡಿ ಓಣಿ, ಗಾಂಚಿ ರೋಡ, ಕುರುವರ ಓಣಿ, ದೇಸಾಯಿ ಓಣಿ. 

28ನೇ ವಾರ್ಡ್: ಆವಂಟಿಗೇರ ಓಣಿ, ಹೊಟ್ಟೆರ ಓಣಿ, ಹರಿಜನ ವಾಡ್.

29ನೇ ವಾರ್ಡ್: ಜನತಾ ಕಾಲೊನಿ, ಹೊಸ ಕೋರ್ಟ್ ಏರಿಯಾ, ಮಡಿವಾಳೇಶ್ವರ ನಗರ. 

30ನೇ ವಾರ್ಡ್: ಬಸವೇಶ್ವರ ನಗರ. 

31ನೇ ವಾರ್ಡ್: ಘೇವರಚಂದ ಲೇ ಔಟ್, ಹಳೆ ಹೌಸಿಂಗ್ ಬೋರ್ಡ್ ಕಾಲೊನಿ, ಗಂಜ್‌ ಏರಿಯಾ, ಬಸವೇಶ್ವರ ನಗರವನ್ನು ಸೇರ್ಪಡೆಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT