ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ವಿಜ್ಞಾನಿ ಶ್ರೀನಿವಾಸ್‌ ಕುಲಕರ್ಣಿಗೆ ಡ್ಯಾನ್‌ ಡೇವಿಡ್‌ ಪ್ರಶಸ್ತಿ

Last Updated 18 ಮೇ 2017, 19:30 IST
ಅಕ್ಷರ ಗಾತ್ರ

ಟೆಲ್‌ ಅವೀವ್, ಇಸ್ರೇಲ್‌: ಖಗೋಳವಿಜ್ಞಾನ ಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಕೊಡುಗೆಗಾಗಿ ಭಾರತದ ವಿಜ್ಞಾನಿ ಶ್ರೀನಿವಾಸ್‌ ಕುಲಕರ್ಣಿ ಅವರು  ಪ್ರತಿಷ್ಠಿತ ಡ್ಯಾನ್‌ ಡೇವಿಡ್  ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಶ್ರೀನಿವಾಸ್‌ ಅವರು ಬೆಳೆದದ್ದು, ಓದಿದ್ದು ಕರ್ನಾಟಕದ ಹುಬ್ಬಳ್ಳಿಯಲ್ಲಿ. ಇವರು ಇನ್ಫೊಸಿಸ್‌ ಪ್ರತಿಷ್ಠಾನದ ಸುಧಾಮೂರ್ತಿ ಅವರ ಸಹೋದರ. ಈಗ ಅವರು ಅಮೆರಿಕದ ಪಸಡೆನಾದಲ್ಲಿರುವ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಖಗೋಳಭೌತವಿಜ್ಞಾನ ಮತ್ತು ಗ್ರಹ ವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

ಪ್ರಶಸ್ತಿಯು ₹ 6.48 ಕೋಟಿ ನಗದು ಒಳಗೊಂಡಿದೆ. ಇದೇ 21ರಂದು ಅವೀವ್‌ ವಿಶ್ವವಿದ್ಯಾಲಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಡ್ಯಾನ್‌ ಡೇವಿಡ್‌ ಪ್ರಶಸ್ತಿಯನ್ನು ಪ್ರತಿ ವರ್ಷ ವಿಶ್ವದಾದ್ಯಂತ ವಿಜ್ಞಾನದಲ್ಲಿ, ಮಾನವಿಕ ವಿಭಾಗದಲ್ಲಿ ಹಾಗೂ ಮಾನವೀಯ ನೆಲೆಯಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವುದು.

ಈ ಸಲ ಕುಲಕರ್ಣಿ ಅವರೊಂದಿಗೆ ವಾರ್ಸಾ ವಿಶ್ವವಿದ್ಯಾನಿಲಯದ ಆಂಡ್ರೆಜ್ ಉಡಾಸ್ಕಿ ಮತ್ತು ನಾಸಾದ ನೀಲ್ ಗೆರೆಲ್ಸ್ ಅವರು ಪ್ರಶಸ್ತಿ ಹಂಚಿಕೊಂಡಿದ್ದಾರೆ.

ಅಂತರರಾಷ್ಟ್ರೀಯ ವ್ಯಾಪಾರೋದ್ಯಮಿ ಡ್ಯಾನ್‌ ಡೇವಿಡ್‌ ಅವರು ಈ ಪ್ರಶಸ್ತಿ ಸ್ಥಾಪಿಸಿದ್ದರು.

ಹದಿನಾರು ವರ್ಷಗಳಿಂದ ವಿವಿಧ ಕ್ಷೇತ್ರಗಳ ಗಣ್ಯರಿಗೆ ಈ ಪ್ರಶಸ್ತಿ ನೀಡುತ್ತಿದ್ದು ಈ ಹಿಂದೆ ಭಾರತದ ಅಮಿತಾವ್‌ ಘೋಷ್‌, ಜುಬಿನ್‌ ಮೆಹ್ತಾ ಮತ್ತು ಸಿಎನ್‌ಆರ್‌ ರಾವ್‌ ಅವರು ಈ ಪ್ರಶಸ್ತಿ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT