ಟ್ರಂಪ್‌ಗೆ ರಷ್ಯಾ ನೆರವು ವಿವಾದ

ತನಿಖೆಗೆ ವಿಶೇಷ ವಕೀಲರ ನೇಮಕ

ತನಿಖೆ ನಡೆಸುತ್ತಿದ್ದ ಎಫ್‌ಬಿಐ ನಿರ್ದೇಶಕ ಜೇಮ್ಸ್‌ ಕೋಮಿ ಅವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಟ್ರಂಪ್‌ ಹರಿಹಾಯ್ದಿದ್ದ ಕಾರಣ ಅವರನ್ನು ಕಳೆದ ವಾರ ವಜಾಗೊಳಿಸಲಾಗಿತ್ತು. ಈ ಬೆನ್ನಲ್ಲೇ ಈಗ ಆಟಾರ್ನಿ ಜನರಲ್‌ ಅವರು ರಾಬರ್ಟ್‌ ಅವರನ್ನು ನೇಮಿಸಿದ್ದಾರೆ.

ರಾಬರ್ಟ್‌

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಪರವಾಗಿ ರಷ್ಯಾ ವಹಿಸಿರುವ ಪಾತ್ರದ ಕುರಿತು ತನಿಖೆ ನಡೆಸಲು ತನಿಖಾ ದಳ ‘ಎಫ್‌ಬಿಐ’ನ  ಮಾಜಿ ನಿರ್ದೇಶಕ ರಾಬರ್ಟ್‌ ಮುಲ್ಲೇರ್‌ ಅವರನ್ನು ವಿಶೇಷ ವಕೀಲರನ್ನಾಗಿ ನೇಮಕ ಮಾಡಲಾಗಿದೆ.

ಈ ವಿಷಯದಲ್ಲಿ ತನಿಖೆ ನಡೆಸುತ್ತಿದ್ದ ಎಫ್‌ಬಿಐ ನಿರ್ದೇಶಕ ಜೇಮ್ಸ್‌ ಕೋಮಿ ಅವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಟ್ರಂಪ್‌ ಹರಿಹಾಯ್ದಿದ್ದ ಕಾರಣ ಅವರನ್ನು ಕಳೆದ ವಾರ ವಜಾಗೊಳಿಸಲಾಗಿತ್ತು. ಈ ಬೆನ್ನಲ್ಲೇ ಈಗ ಆಟಾರ್ನಿ ಜನರಲ್‌ ಅವರು ರಾಬರ್ಟ್‌ ಅವರನ್ನು ನೇಮಿಸಿದ್ದಾರೆ.

‘ದಕ್ಷ ವಕೀಲರಾಗಿರುವ ರಾಬರ್ಟ್‌ ಅವರು ಈ ತನಿಖೆಯನ್ನು ರಾಜಕೀಯದ ಒತ್ತಡವಿಲ್ಲದೇ, ಪಾರದರ್ಶಕವಾಗಿ ನಡೆಸುವ ನಂಬಿಕೆ ಇದೆ’ ಎಂದು ಸಂಸದ ರಿಚರ್ಡ್‌ ಬುರ್ಡ್‌ ಅಭಿಪ್ರಾಯ ಪಟ್ಟಿದ್ದಾರೆ.

ಟ್ರಂಪ್‌ ಪ್ರತಿಕ್ರಿಯೆ: ರಾಬರ್ಟ್‌ ಅವರ ನೇಮಕದ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್‌ ಅವರು, ‘ರಾಜಕೀಯ ದ್ವೇಷ ಸಾಧನೆಗಾಗಿ ಈ ತನಿಖೆ ನಡೆಯುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನನ್ನ ವಿರುದ್ಧ ಯಾರೇ ಏನೇ ಪಿತೂರಿ ಮಾಡಲಿ, ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಮೇಲಿರುವ ಆರೋಪಗಳೆಲ್ಲಾ ನಿರಾಧಾರ ಎಂದು ಈ ತನಿಖೆಯಿಂದ ಎಲ್ಲರಿಗೂ ಶೀಘ್ರದಲ್ಲಿಯೇ ಗೊತ್ತಾಗಲಿದೆ. ಆ ವಿಶ್ವಾಸ ನನಗಿದೆ’ ಎಂದಿದ್ದಾರೆ.

‘ಈ ತನಿಖೆ ಶೀಘ್ರ ಮುಗಿಯಲಿ ಎನ್ನುವುದೇ ನನ್ನ ಆಕಾಂಕ್ಷೆ. ನಾನು ನಿರಪರಾಧಿ ಎಂದು ಬೇಗನೇ ಸಾಬೀತಾಗಲಿ ಎಂದು ನಾನೂ ಕಾಯುತ್ತಿದ್ದೇನೆ. ಅದೇನೇ ಇದ್ದರೂ ದೇಶದ ಜನರ ಸೇವೆಯನ್ನು ನಾನು ಮುಂದುವರಿಸಿಕೊಂಡು ಹೋಗಲು ಈ ತನಿಖೆ ನನಗೆ ಅಡ್ಡಗಾಲು ಹಾಕಲಾರದು’ ಎಂದಿದ್ದಾರೆ.

ಮಾಧ್ಯಮಗಳ ವಿರುದ್ಧ ಟ್ರಂಪ್‌ ಕಿಡಿ
ವಾಷಿಂಗ್ಟನ್‌:
ಸದಾ ಒಂದಿಲ್ಲೊಂದು ವಿವಾದಕ್ಕೆ ಸಿಲುಕುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈಗ ಈ ಸಿಟ್ಟನ್ನು ನೇರವಾಗಿ ಮಾಧ್ಯಮಗಳ ಮೇಲೆ ಹಾಕಿದ್ದಾರೆ.

ಮಾಧ್ಯಮಗಳು ತಮಗೆ ಮಾಡಿರುವಷ್ಟು ಅನ್ಯಾಯ ದೇಶದ ಇತಿಹಾಸದಲ್ಲಿ ಬೇರಾವ ರಾಜಕಾರಣಿಗೂ ಮಾಡಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ. ‘ನನ್ನನ್ನು ಮಾಧ್ಯಮಗಳು ತೀರಾ ಕೆಟ್ಟದಾಗಿ ನಡೆಸಿಕೊಳ್ಳುತ್ತಿವೆ.  ಆದರೆ ಇದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಇಂಥ ನಕಾರಾತ್ಮಕ ಟೀಕೆಗಳು ಇದ್ದರೇನೇ ವ್ಯಕ್ತಿ ಬಲಶಾಲಿ ಆಗುವುದು. ಆದ್ದರಿಂದಲೇ ನಾನು ಜಯ ಸಾಧಿಸಿರುವುದು’ ಎಂದು ಇಲ್ಲಿಯ ‘ಕೋಟ್ಸ್‌ ಗಾರ್ಡ್‌ ಅಕಾಡೆಮಿ’ಯ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.

‘ನಾವು ಒಳ್ಳೆತನದಿಂದ ಕೆಲಸ ಮಾಡಿದಷ್ಟೂ ನಕಾರಾತ್ಮಕ ಟೀಕೆಗಳು ಕೇಳಿಬರುವುದು ಸಹಜ.  ಇಂಥ ಟೀಕೆಗಳಿಗೆ ಕಿವಿಗೊಡದೆ ಹೋರಾಟ ಮುಂದುವರಿಸಬೇಕು. ಇದನ್ನೇ ನಾನೂ ಮಾಡುತ್ತಿದ್ದೇನೆ. ಅಷ್ಟಕ್ಕೂ ನಾನು ಮಾಧ್ಯಮಗಳಿಗಾಗಿ ಚುನಾಯಿತನಾಗಿಲ್ಲ. ಜನರಿಗಾಗಿ ನಾನು ಇದ್ದೇನೆ. ಅವರಿಗಾಗಿ ಕೆಲಸ ಮುಂದುವರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಮುಖ್ಯಾಂಶಗಳು

* ‘ಎಫ್‌ಬಿಐ’ನ  ಮಾಜಿ ನಿರ್ದೇಶಕ ರಾಬರ್ಟ್‌ ಮುಲ್ಲೇರ್‌ ನೇಮಕ
* ತನಿಖೆ ಶೀಘ್ರ ಪೂರ್ಣ: ಅಧ್ಯಕ್ಷರ ಆಶಯ
* ದೇಶ ಸೇವೆಗೆ ತನಿಖೆ ಅಡ್ಡಿಯಾಗದು: ಟ್ರಂಪ್‌

Comments
ಈ ವಿಭಾಗದಿಂದ ಇನ್ನಷ್ಟು
ಎಚ್‌1ಬಿ ವೀಸಾ ನಿಯಮ ಕಠಿಣ: ಭಾರತದ ಐ.ಟಿ. ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ

ವಿದೇಶ
ಎಚ್‌1ಬಿ ವೀಸಾ ನಿಯಮ ಕಠಿಣ: ಭಾರತದ ಐ.ಟಿ. ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ

24 Feb, 2018

ಮಾಲೆ
ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಸಲ್ಲದು: ಭಾರತಕ್ಕೆ ಮಾಲ್ಡೀವ್ಸ್‌ ಎಚ್ಚರಿಕೆ

ತನ್ನ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಭಾರತಕ್ಕೆ ಮಾಲ್ಡೀವ್ಸ್‌ ಎಚ್ಚರಿಕೆ ನೀಡಿದೆ.

24 Feb, 2018

ವಿದೇಶ
ಅವನಿ ಚತುರ್ವೇದಿಗೆ ಅಭಿನಂದನೆ

ಮಿಗ್‌–21 ಯುದ್ಧ ವಿಮಾನವನ್ನು ಏಕಾಂಗಿಯಾಗಿ ಚಲಾಯಿಸಿದ ಕೀರ್ತಿಗೆ ಪಾತ್ರರಾದ ಅವನಿ ಚತುರ್ವೇದಿ ಅವರನ್ನು ಅಮೆರಿಕದ ಸಂಸದೆ ಮಾರ್ಥಾ ಮ್ಯಾಕ್‌ಸ್ಯಾಲಿ ಅಭಿನಂದಿಸಿದ್ದಾರೆ.

24 Feb, 2018

ಸಿಡ್ನಿ
ಆಸ್ಟ್ರೇಲಿಯಾ ಉಪ ಪ್ರಧಾನಿ ಬರ್ನಬಿ ಜಾಯ್ಸ್ ರಾಜೀನಾಮೆ

ಲೈಂಗಿಕ ಕಿರುಕುಳ ಆರೋಪ ಎದುರಿಸು ತ್ತಿದ್ದ ಆಸ್ಟ್ರೇಲಿಯಾ ಉಪಪ್ರಧಾನಿ ಬರ್ನಬಿ ಜಾಯ್ಸ್ ರಾಜೀನಾಮೆ ನೀಡುವುದಾಗಿ ಶುಕ್ರವಾರ ಹೇಳಿದ್ದಾರೆ.

24 Feb, 2018
ಸಿರಿಯಾದಲ್ಲಿ ಮುಂದುವರಿದ ದಾಳಿ: 400 ಸಾವು

ಡುಮಾ
ಸಿರಿಯಾದಲ್ಲಿ ಮುಂದುವರಿದ ದಾಳಿ: 400 ಸಾವು

24 Feb, 2018