ಐಪಿಎಲ್‌

ಮಳೆ ಬರದಿದ್ದರೆ ಗೆಲ್ಲುತ್ತಿದ್ದೆವು: ಮುತ್ತಯ್ಯ

ಬುಧವಾರದ ಎಲಿಮಿನೇಟರ್ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ  ಮೊದಲು ಬ್ಯಾಟ್ ಮಾಡಿ 7 ವಿಕೆಟ್ ನಷ್ಟಕ್ಕೆ 128 ರನ್‌ ಕಲೆಹಾಕಿತ್ತು.

ಮಳೆ ಬರದಿದ್ದರೆ ಗೆಲ್ಲುತ್ತಿದ್ದೆವು: ಮುತ್ತಯ್ಯ

ಬೆಂಗಳೂರು:  ‘ಪಂದ್ಯಕ್ಕೆ ಮಳೆ ಅಡ್ಡಿಯಾಗದಿದ್ದರೆ ನಮ್ಮ ತಂಡಕ್ಕೆ ಗೆಲ್ಲುವ ಅವಕಾಶ ಇತ್ತು’ ಎಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ಕೋಚ್‌ ಮುತ್ತಯ್ಯ ಮುರಳೀಧರನ್ ಹೇಳಿದ್ದಾರೆ.

ಬುಧವಾರದ ಎಲಿಮಿನೇಟರ್ ಐಪಿಎಲ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ  ಮೊದಲು ಬ್ಯಾಟ್ ಮಾಡಿ 7 ವಿಕೆಟ್ ನಷ್ಟಕ್ಕೆ 128 ರನ್‌ ಕಲೆಹಾಕಿತ್ತು. ಮಳೆಯ ಕಾರಣ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ 6 ಓವರ್‌ಗಳಲ್ಲಿ 48ರನ್‌ಗಳ ಪರಿಷ್ಕೃತ ಗುರಿ ನೀಡಲಾಗಿತ್ತು.  ಕೆಕೆಆರ್‌ 5.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

‘ಬೆಂಗಳೂರಿನ ಅಂಗಳದಲ್ಲಿ ಈ ವರ್ಷ ಹೆಚ್ಚು ಸ್ಕೋರ್‌ ದಾಖಲಾಗಿಲ್ಲ. ಈ ನಿಟ್ಟಿನಲ್ಲಿ 130 ಕಡಿಮೆ ಮೊತ್ತವೇನು ಅಲ್ಲ.  ಪೂರ್ಣ 20 ಓವರ್ ಆಡಲು ಸಿಕ್ಕಿದ್ದರೆ ಪಂದ್ಯ ಗೆಲ್ಲುವ ಸಾಧ್ಯತೆ ಇತ್ತು’ ಎಂದು ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಟಿಯಲ್ಲಿ ಮುರಳೀಧರನ್ ಹೇಳಿದ್ದಾರೆ.

‘ನಮ್ಮ ತಂಡ ಮೊದಲು ಬ್ಯಾಟ್ ಮಾಡಿದ್ದರಿಂದ ಇನ್ನೂ ಹೆಚ್ಚು ರನ್ ಕಲೆಹಾಕುವ ಅವಕಾಶ ಇತ್ತು. ಆದರೆ ಕೆಕೆಆರ್ ಬೌಲರ್‌ಗಳು ಉತ್ತಮ ಸಾಮರ್ಥ್ಯ ತೋರಿದರು. ಇದು ನಮ್ಮ ದುರಾದೃಷ್ಟ. ಮಳೆ ಬಂದಿದ್ದರಿಂದ ಯಾರನ್ನು ದೂರಲು ಸಾಧ್ಯವಿಲ್ಲ. ಈ ಋತುವಿನಲ್ಲಿ ನಮ್ಮ ತಂಡದ ಆಟ ತೃಪ್ತಿ ನೀಡಿದೆ’ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು

ಟೆನಿಸ್ ಟೂರ್ನಿ
ಮುಸ್ತಫಾ–ಭುವನ್ ಪೈಪೋಟಿ

ಟಾಪ್‌ಸ್ಪಿನ್‌ ಅಕಾಡೆಮಿಯಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಮುಸ್ತಫಾ 6–2, 7–6ರಲ್ಲಿ ಅಗ್ರಶ್ರೇಯಾಂಕದ ಪಶ್ಚಿಮ ಬಂಗಾಳದ ಕೇಶವ್ ಗೋಯಲ್‌ಗೆ ಆಘಾತ ನೀಡಿದರು. ...

24 Nov, 2017
ವಿಶ್ರಾಂತಿಗೆ ಆಸ್ಪದವಿಲ್ಲದ ವೇಳಾಪಟ್ಟಿ: ಕೊಹ್ಲಿ ಕಿಡಿ

ನಿರಂತರ ಸರಣಿಗಳು
ವಿಶ್ರಾಂತಿಗೆ ಆಸ್ಪದವಿಲ್ಲದ ವೇಳಾಪಟ್ಟಿ: ಕೊಹ್ಲಿ ಕಿಡಿ

24 Nov, 2017
ರೌಂಡ್ ರಾಬಿನ್‌ನಲ್ಲಿ ಪಂಕಜ್‌ ಕ್ಲೀನ್ ಸ್ವೀಪ್‌

ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್‌
ರೌಂಡ್ ರಾಬಿನ್‌ನಲ್ಲಿ ಪಂಕಜ್‌ ಕ್ಲೀನ್ ಸ್ವೀಪ್‌

24 Nov, 2017
ಆರ್ಮಿ ಪಬ್ಲಿಕ್ ಶಾಲೆಗೆ ದೋನಿ ಭೇಟಿ

ಕ್ರೀಡೆಯ ಮಹತ್ವ
ಆರ್ಮಿ ಪಬ್ಲಿಕ್ ಶಾಲೆಗೆ ದೋನಿ ಭೇಟಿ

24 Nov, 2017
ಪಶ್ಚಿಮ ಬಂಗಾಳ ತಂಡಕ್ಕೆ ಸಮಗ್ರ ಪ್ರಶಸ್ತಿ

ಅಂತರರಾಷ್ಟ್ರೀಯ ಯೋಗೋತ್ಸವ
ಪಶ್ಚಿಮ ಬಂಗಾಳ ತಂಡಕ್ಕೆ ಸಮಗ್ರ ಪ್ರಶಸ್ತಿ

24 Nov, 2017