ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಘ ಬಂತು ಮೇಘ...

Last Updated 18 ಮೇ 2017, 19:30 IST
ಅಕ್ಷರ ಗಾತ್ರ
ದುಂಡು ಮುಖ, ಚೂಪು ಗಿಣಿಮೂಗು, ಮಂದಹಾಸ ಸದಾ ನೆಲೆಸಿರುವ ಹೊಳಪಿನ ತುಟಿಗಳು, ದಟ್ಟವಾಗಿ ಹರಡಿಕೊಂಡಿರುವ ತುಂಟ ಕೇಶರಾಶಿ... ಸಾಂಪ್ರದಾಯಿಕ ಮತ್ತು ಆಧುನಿಕ ಎರಡೂ ಪೋಷಾಕಿಗೂ ಸಲ್ಲುವ ಕಾಯ ಮೇಘಶ್ರೀ ಅವರದು.
 
ಮೂಲತಃ ತೀರ್ಥಹಳ್ಳಿಯವರಾದರೂ ಮೇಘಶ್ರೀ ಓದಿದ್ದು ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿಯೇ. ಬಾಲ್ಯದಿಂದಲೇ ಸಾಂಸ್ಕೃತಿಕ ಚಟುವಟಿಕೆಗಳ ಗಾಳಿಯನ್ನು ಉಸಿರಾಡುತ್ತಲೇ ಬಂದ ಅವರಿಗೆ ಹೈಸ್ಕೂಲಿನಲ್ಲಿದ್ದಾಗ ರಂಗಭೂಮಿಯ ಗಂಧವೂ ದೊರಕಿತು.
 
ಎಚ್‌.ಎ.ಎಲ್‌.ನವರ ರಂಗತಂಡದ ಮೂಲಕ ರಂಗಭೂಮಿಯಲ್ಲಿ ತೊಡಗಿಕೊಂಡ ಅವರು ಅನೇಕ ನಾಟಕಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದರು. ಹಾಗೆ ಅಭಿನಯಿಸುತ್ತಲೇ ಕ್ಯಾಮೆರಾ ಕಡೆಗೂ ಆಕರ್ಷಿತರಾದರು. ಸ್ವಪ್ನದೊಂದು ಕರೆಯಂತೆ ಮಾಡೆಲಿಂಗ್‌ ಕೈಬೀಸಿ ಸೆಳೆಯಿತು. 
 
ಮಾಡೆಲಿಂಗ್‌ನಲ್ಲಿ ತೊಡಗಿಕೊಂಡಿದ್ದಾಗಲೇ ಅವರ ಫೋಟೊ ನೋಡಿದ ರೋನಾಲ್ಡ್‌ ರಾಜ್‌ ಎಸ್‌. ವಿಲಿಯಮ್ಸ್‌ ತಮ್ಮ ನಿರ್ದೇಶನದ ‘ಕಾಕಿ’ ಎಂಬ ತೆಲುಗು ಚಿತ್ರಕ್ಕೆ ನಾಯಕಿಯಾಗಿ ನಟಿಸಲು ಅವಕಾಶ ನೀಡಿದರು. ಹೀಗೆ ತೆಲುಗಿನ ಮೂಲಕ ಚಿತ್ರಜಗತ್ತಿಗೆ ಪದಾರ್ಪಣೆ ಮಾಡಿದ ಮೇಘಶ್ರೀ ಅವರಿಗೆ ಈ ಸಿನಿಮಾದಲ್ಲಿನ ಅಭಿನಯ ಇನ್ನೂ ಕೆಲವು ಅವಕಾಶಗಳನ್ನು ನೀಡಿತು. ‘ಅನಗನಗ ಒಕ ಚಿತ್ರಂ’ ಅವರ ಎರಡನೇ ತೆಲುಗು ಚಿತ್ರ.
 
ಮೇಘಶ್ರೀ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟ ಸಿನಿಮಾ ‘ಓ ಮೈ ಗಾಡ್‌’. ಅವರು ನಟಿಸಿರುವ ‘ಆಕ್ಸಿಜನ್‌’ ಇನ್ನೇನು ತೆರೆಕಾಣಲು ಸಜ್ಜಾಗಿದೆ.
ಬೇರೆ ಭಾಷೆ–ಪರಿಸರದಲ್ಲಿ ವೃತ್ತಿ ಬದುಕನ್ನು ಆರಂಭಿಸುವುದು ಅವರಿಗೆ ತ್ರಾಸದಾಯಕ ಅನಿಸಿಲ್ಲ. ಅದಕ್ಕೆ ಕಾರಣ ಅವರಿಗೆ ರಂಗಭೂಮಿಯಲ್ಲಿ ಸಿಕ್ಕ ನಟನಾ ಸಂಸ್ಕಾರ.
 
‘ಮೊದಲ ಸಲ ಕ್ಯಾಮೆರಾ ಎದುರಿಸಿದಾಗ ಭಯವೇನೂ ಆಗಿಲ್ಲ. ಆಗಲೇ ರಂಗಭೂಮಿಯಲ್ಲಿ ಸಾಕಷ್ಟು ನಾಟಕಗಳಲ್ಲಿ ನಟಿಸಿದ್ದೆ. ಆದ್ದರಿಂದ ಅಭಿನಯದ ಕುರಿತು ಆತಂಕವೇನೂ ಇರಲಿಲ್ಲ. ಭಾಷೆ ಬೇರೆಯಾಗಿದ್ದು ಆರಂಭದಲ್ಲಿ ಸ್ವಲ್ಪ ತೊಂದರೆ ಎನಿಸಿದ್ದು ನಿಜ. ನನಗೆ ತೆಲುಗು ಬರುತ್ತಿರಲಿಲ್ಲ. ಆದರೆ ಆರು ತಿಂಗಳಲ್ಲಿ ತೆಲುಗು ಮಾತನಾಡಲು ಕಲಿತುಕೊಂಡೆ. ‘ಓ ಮೈ ಗಾಡ್‌’ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ನಾನೇ ಡಬ್‌ ಕೂಡ ಮಾಡಿದೆ’ ಎಂದು ವಿಶ್ವಾಸದಿಂದ ಅವರು ಹೇಳುತ್ತಾರೆ.
 
ತೆಲುಗಿನಲ್ಲಿ ಸಾಕಷ್ಟು ಅವಕಾಶಗಳು ಸಿಗುತ್ತಿದ್ದರೂ ಅವರಿಗೆ ತನ್ನ ಮಾತೃಭಾಷೆಯಲ್ಲಿ ಗುರ್ತಿಸಿಕೊಳ್ಳಬೇಕು, ನನ್ನ ನೆಲದಲ್ಲಿಯೇ ನೆಲೆಯೂರಿ ಬೆಳೆಯಬೇಕು ಎಂಬ ತುಡಿತವಂತೂ ಇತ್ತು. ಆದರೆ ಅದಕ್ಕೆ ತಕ್ಕ ಅವಕಾಶ ಕೂಡಿಬಂದಿರಲಿಲ್ಲ. 
 
ಮೇಘಶ್ರೀ ಅವರ ಒಳಗಿನ ಕನ್ನಡದಲ್ಲಿ ನಟಿಸುವ ಹಸಿವನ್ನು ಮೊದಲು ತೀರಿಸಿದ್ದು ಸುಖೇಶ್‌ ನಾಯಕ್‌. ಸುಖೇಶ್‌ ಅವರಿಗೆ ತಮ್ಮ ನಿರ್ದೇಶನದ ‘ಕೃಷ್ಣ ತುಳಸಿ’ ಸಿನಿಮಾದ ಪಾತ್ರಕ್ಕೆ ಮೇಘಶ್ರೀ ಅವರು ಹೇಳಿ ಮಾಡಿಸಿದಂತಿದ್ದಾರೆ ಎನಿಸಿತ್ತು. ಆದ್ದರಿಂದಲೇ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ಮೇಘಶ್ರೀ ಅವರನ್ನು ಚೆನ್ನೈಗೆ ಹೋಗಿ ಭೇಟಿ ಮಾಡಿ ಕಥೆ ಹೇಳಿದರು. 
 
ಒಳ್ಳೆಯ ಕಥೆ, ಅದರಲ್ಲಿ ತಮಗೊಂದು ಸಮರ್ಥ ಪಾತ್ರ ಸಿಕ್ಕಿರುವುದರ ಜೊತೆಗೆ ಈ ಸಿನಿಮಾದಲ್ಲಿ ನಟಿಸಲು ಮೇಘಶ್ರೀಗೆ ಇನ್ನೊಂದು ಪ್ರಬಲ ಕಾರಣವೂ ದೊರಕಿತ್ತು. ಅದು ‘ಕೃಷ್ಣ ತುಳಸಿ’ಯು ನಾಯಕನಾಗಿ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ನಟಿಸುತ್ತಿದ್ದಾರೆ ಎನ್ನುವುದು.
 
ಸರಿಯಾದ ಸಮಯಕ್ಕೆ, ಸರಿಯಾದ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟಿರುವುದು ಮೇಘಶ್ರೀಗೆ ಸಂತೋಷ ತಂದಿದೆ. ಇಲ್ಲಿಯೇ ನೆಲೆಯೂರಲು ಸಾಧ್ಯ ಎನ್ನುವಂಥ ವಿಶ್ವಾಸವೂ ಬಂದಿದೆ. ಇದಕ್ಕೆ ಪೂರಕ ಎನ್ನುವಂತೆ ‘ಕೃಷ್ಣ ತುಳಸಿ’ ಸಿನಿಮಾದ ಚಿತ್ರೀಕರಣ ನಡೆಯುತ್ತಿರುವಾಗಲೇ ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ ‘ಮಾರ್ಚ್‌ 22’ ಸಿನಿಮಾ ಆಡಿಷನ್‌ನಲ್ಲಿ ಭಾಗವಹಿಸಿ ಆಯ್ಕೆಯಾಗಿದ್ದಾರೆ. ಇದೀಗ ‘ಮಾರ್ಚ್‌ 22’ ಚಿತ್ರೀಕರಣವೂ ಮುಗಿದಿದೆ. ‘ಕೃಷ್ಣ ತುಳಸಿ’ ಚಿತ್ರದ ಒಂದೆರಡು ದಿನದ ಶೂಟಿಂಗ್ ಅಷ್ಟೇ ಉಳಿದುಕೊಂಡಿದೆ.
 
ಈ ನಡುವೆಯೇ ಅವರಿಗೆ ‘ದಶರಥ’ ಸಿನಿಮಾದಲ್ಲಿಯೂ ರವಿಚಂದ್ರನ್‌ ಅವರ ಮಗಳಾಗಿ ನಟಿಸಲು ಅವಕಾಶ ಸಿಕ್ಕಿರುವುದು ಉತ್ಸಾಹವನ್ನು ಇಮ್ಮಡಿಸಿದೆ. ಈ ಮೂರು ಚಿತ್ರಗಳಿಂದಲೂ ಸಾಕಷ್ಟು ಕಲಿತುಕೊಂಡಿದ್ದಾರೆ ಸಹ.
 
‘ಕನ್ನಡ ನನ್ನ ಭಾಷೆ. ಇಲ್ಲಿಯ ಚಿತ್ರಗಳಲ್ಲಿ ನಟಿಸಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಕೃಷ್ಣತುಳಸಿ ಈ ಕನಸನ್ನು ನನಸಾಗಿಸಿತು’ ಎನ್ನುವ ಅವರು ಸಹನಟ ಸಂಚಾರಿ ವಿಜಯ್‌ ಅವರ ಸಹಕಾರವನ್ನು ಶ್ಲಾಘಿಸಲು ಮರೆಯುವುದಿಲ್ಲ.
 
‘ವಿಜಯ್‌ ಅವರು ತುಂಬ ಸರಳ ಮನುಷ್ಯ. ಅವರಂಥ ಪ್ರತಿಭಾವಂತ ನಟರ ಜತೆ ನಟಿಸುವುದು ಹೇಗೆ ಎಂಬ ಆತಂಕ ಇತ್ತು. ಆದರೆ ಅವರ ಸಹಕಾರ ಮತ್ತು ಸರಳತೆ ಆ ಆತಂಕವನ್ನು ಹೋಗಲಾಡಿಸಿತು. ಅವರಿಂದ ಅಭಿನಯದ ಕುರಿತು ಸಾಕಷ್ಟು ಕಲಿತುಕೊಂಡಿದ್ದೇನೆ’ ಎನ್ನುವ ಅವರಿಗೆ ಇದುವರೆಗೆ ಕನ್ನಡದಲ್ಲಿ ಸಾಂಪ್ರದಾಯಿಕ ಪಾತ್ರಗಳೇ ಬಂದಿವೆ.
 
‘ಮಾರ್ಚ್‌ 22’ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಘಾಟಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.‘ಇದುವರೆಗೆ ನನಗೆ ಬಂದಿರುವ ಪಾತ್ರಗಳೆಲ್ಲವೂ ಸಾಂಪ್ರದಾಯಿಕ ಪಾತ್ರಗಳೇ. ಹಾಗಂತ ಅಂಥ ಪಾತ್ರಗಳನ್ನು ಮಾತ್ರ ಮಾಡುತ್ತೇನೆ ಎಂದೇನಿಲ್ಲ.
 
ಎಲ್ಲ ರೀತಿಯ ಪಾತ್ರಗಳಲ್ಲಿಯೂ ನಟಿಸಬೇಕು ಎನ್ನುವುದು ನನ್ನ ಅಭಿಲಾಷೆ’ ಎನ್ನುವ ಮೇಘಶ್ರೀ ಅವರಿಗೆ, ‘ಆರುಂಧತಿ’ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ, ‘ಆಪ್ತಮಿತ್ರ’ ಚಿತ್ರದಲ್ಲಿ ಸೌಂದರ್ಯಾ ಮಾಡಿದಂಥ ಪಾತ್ರಗಳಲ್ಲಿ ನಟಿಸಬೇಕು ಎಂಬ ಕನಸೂ ಇದೆ. 
 
‘ಕನ್ನಡವೇ ನನ್ನ ಮೊದಲ ಆದ್ಯತೆ’ ಎಂದು ದೃಢವಾಗಿ ನುಡಿಯುತ್ತಾರೆ ಮೇಘಶ್ರೀ. ಸದ್ಯ ಬಿ.ಎ. ಪದವಿ ವಿದ್ಯಾರ್ಥಿನಿಯಾಗಿರುವ ಅವರಿಗೆ ಶಿಕ್ಷಣದ ಕಡೆಗೂ ಗಮನ ಕೊಡಬೇಕಾಗಿದೆ. ‘ಪರೀಕ್ಷೆಗಳಿರುತ್ತವೆ. ಅವುಗಳ ನಡುವೆಯೇ ಸಿನಿಮಾ ಮಾಡಬೇಕು. ಅಲ್ಲಿ ಕನ್ನಡ ಸಿನಿಮಾಗಳಿಗೇ ಮೊದಲ ಆದ್ಯತೆ. ಸಮಯ ಸಿಕ್ಕರೆ, ಒಳ್ಳೆಯ ಅವಕಾಶ ಬಂದರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತೇನೆ’ ಎನ್ನುತ್ತಾರೆ ಮೇಘಶ್ರೀ.
 
‘ಕ್ಯಾಮೆರಾ ಮುಂದೆ ಅಭಿನಯಿಸುತ್ತಿದ್ದೇವೆ ಎಂದು ಯಾರಿಗೂ ಅನಿಸಬಾರದು. ಹಾಗೆ ಸಹಜವಾಗಿ ವರ್ತಿಸುವುದೇ ಶ್ರೇಷ್ಠ ಅಭಿನಯದ ವ್ಯಾಖ್ಯಾನ’ ಎಂದು ನಂಬಿರುವ ಅವರ ಬಟ್ಟಲುಗಣ್ಣುಗಳಲ್ಲಿ ‘ಚಂದನವನ’ದ ನೆಲ–ಗಾಳಿಯ ಸತ್ವ ಹೀರಿಕೊಂಡು ಆಕಾಶದೆತ್ತರದ ತಾರಾಲೋಕ ಮುಟ್ಟುವ ಮಹತ್ವಾಕಾಂಕ್ಷೆ ಎದ್ದು ಕಾಣುತ್ತದೆ. 
 
ಸರಿಯಾದ ಸಮಯಕ್ಕೆ, ಸರಿಯಾದ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟಿರುವುದು ಮೇಘಶ್ರೀಗೆ ಸಂತೋಷ ತಂದಿದೆ. ಇಲ್ಲಿಯೇ ನೆಲೆಯೂರಲು ಸಾಧ್ಯ ಎನ್ನುವಂಥ ವಿಶ್ವಾಸವೂ ಬಂದಿದೆ. ಇದಕ್ಕೆ ಪೂರಕ ಎನ್ನುವಂತೆ ‘ಕೃಷ್ಣ ತುಳಸಿ’ ಸಿನಿಮಾದ ಚಿತ್ರೀಕರಣ ನಡೆಯುತ್ತಿರುವಾಗಲೇ ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ ‘ಮಾರ್ಚ್‌ 22’ ಸಿನಿಮಾ ಆಡಿಷನ್‌ನಲ್ಲಿ ಭಾಗವಹಿಸಿ ಆಯ್ಕೆಯಾಗಿದ್ದಾರೆ. ಇದೀಗ ‘ಮಾರ್ಚ್‌ 22’ ಚಿತ್ರೀಕರಣವೂ ಮುಗಿದಿದೆ. ‘ಕೃಷ್ಣ ತುಳಸಿ’ ಚಿತ್ರದ ಒಂದೆರಡು ದಿನದ ಶೂಟಿಂಗ್ ಅಷ್ಟೇ ಉಳಿದುಕೊಂಡಿದೆ.

ಈ ನಡುವೆಯೇ ಅವರಿಗೆ ‘ದಶರಥ’ ಸಿನಿಮಾದಲ್ಲಿಯೂ ರವಿಚಂದ್ರನ್‌ ಅವರ ಮಗಳಾಗಿ ನಟಿಸಲು ಅವಕಾಶ ಸಿಕ್ಕಿರುವುದು ಉತ್ಸಾಹವನ್ನು ಇಮ್ಮಡಿಸಿದೆ. ಈ ಮೂರು ಚಿತ್ರಗಳಿಂದಲೂ ಸಾಕಷ್ಟು ಕಲಿತುಕೊಂಡಿದ್ದಾರೆ ಸಹ.

‘ಕನ್ನಡ ನನ್ನ ಭಾಷೆ. ಇಲ್ಲಿಯ ಚಿತ್ರಗಳಲ್ಲಿ ನಟಿಸಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಕೃಷ್ಣತುಳಸಿ ಈ ಕನಸನ್ನು ನನಸಾಗಿಸಿತು’ ಎನ್ನುವ ಅವರು ಸಹನಟ ಸಂಚಾರಿ ವಿಜಯ್‌ ಅವರ ಸಹಕಾರವನ್ನು ಶ್ಲಾಘಿಸಲು ಮರೆಯುವುದಿಲ್ಲ.

‘ವಿಜಯ್‌ ಅವರು ತುಂಬ ಸರಳ ಮನುಷ್ಯ. ಅವರಂಥ ಪ್ರತಿಭಾವಂತ ನಟರ ಜತೆ ನಟಿಸುವುದು ಹೇಗೆ ಎಂಬ ಆತಂಕ ಇತ್ತು. ಆದರೆ ಅವರ ಸಹಕಾರ ಮತ್ತು ಸರಳತೆ ಆ ಆತಂಕವನ್ನು ಹೋಗಲಾಡಿಸಿತು. ಅವರಿಂದ ಅಭಿನಯದ ಕುರಿತು ಸಾಕಷ್ಟು ಕಲಿತುಕೊಂಡಿದ್ದೇನೆ’ ಎನ್ನುವ ಅವರಿಗೆ ಇದುವರೆಗೆ ಕನ್ನಡದಲ್ಲಿ ಸಾಂಪ್ರದಾಯಿಕ ಪಾತ್ರಗಳೇ ಬಂದಿವೆ.

‘ಮಾರ್ಚ್‌ 22’ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಘಾಟಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ‘ಇದುವರೆಗೆ ನನಗೆ ಬಂದಿರುವ ಪಾತ್ರಗಳೆಲ್ಲವೂ ಸಾಂಪ್ರದಾಯಿಕ ಪಾತ್ರಗಳೇ. ಹಾಗಂತ ಅಂಥ ಪಾತ್ರಗಳನ್ನು ಮಾತ್ರ ಮಾಡುತ್ತೇನೆ ಎಂದೇನಿಲ್ಲ.

ಎಲ್ಲ ರೀತಿಯ ಪಾತ್ರಗಳಲ್ಲಿಯೂ ನಟಿಸಬೇಕು ಎನ್ನುವುದು ನನ್ನ ಅಭಿಲಾಷೆ’ ಎನ್ನುವ ಮೇಘಶ್ರೀ ಅವರಿಗೆ, ‘ಆರುಂಧತಿ’ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ, ‘ಆಪ್ತಮಿತ್ರ’ ಚಿತ್ರದಲ್ಲಿ ಸೌಂದರ್ಯಾ ಮಾಡಿದಂಥ ಪಾತ್ರಗಳಲ್ಲಿ ನಟಿಸಬೇಕು ಎಂಬ ಕನಸೂ ಇದೆ.

‘ಕನ್ನಡವೇ ನನ್ನ ಮೊದಲ ಆದ್ಯತೆ’ ಎಂದು ದೃಢವಾಗಿ ನುಡಿಯುತ್ತಾರೆ ಮೇಘಶ್ರೀ. ಸದ್ಯ ಬಿ.ಎ. ಪದವಿ ವಿದ್ಯಾರ್ಥಿನಿಯಾಗಿರುವ ಅವರಿಗೆ ಶಿಕ್ಷಣದ ಕಡೆಗೂ ಗಮನ ಕೊಡಬೇಕಾಗಿದೆ. ‘ಪರೀಕ್ಷೆಗಳಿರುತ್ತವೆ. ಅವುಗಳ ನಡುವೆಯೇ ಸಿನಿಮಾ ಮಾಡಬೇಕು. ಅಲ್ಲಿ ಕನ್ನಡ ಸಿನಿಮಾಗಳಿಗೇ ಮೊದಲ ಆದ್ಯತೆ. ಸಮಯ ಸಿಕ್ಕರೆ, ಒಳ್ಳೆಯ ಅವಕಾಶ ಬಂದರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತೇನೆ’ ಎನ್ನುತ್ತಾರೆ ಮೇಘಶ್ರೀ.

‘ಕ್ಯಾಮೆರಾ ಮುಂದೆ ಅಭಿನಯಿಸುತ್ತಿದ್ದೇವೆ ಎಂದು ಯಾರಿಗೂ ಅನಿಸಬಾರದು. ಹಾಗೆ ಸಹಜವಾಗಿ ವರ್ತಿಸುವುದೇ ಶ್ರೇಷ್ಠ ಅಭಿನಯದ ವ್ಯಾಖ್ಯಾನ’ ಎಂದು ನಂಬಿರುವ ಅವರ ಬಟ್ಟಲುಗಣ್ಣುಗಳಲ್ಲಿ ‘ಚಂದನವನ’ದ ನೆಲ–ಗಾಳಿಯ ಸತ್ವ ಹೀರಿಕೊಂಡು ಆಕಾಶದೆತ್ತರದ ತಾರಾಲೋಕ ಮುಟ್ಟುವ ಮಹತ್ವಾಕಾಂಕ್ಷೆ ಎದ್ದು ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT