ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಖದಲ್ಲಿ ಮನೆಯ ಮಾಡಿ

Last Updated 18 ಮೇ 2017, 19:30 IST
ಅಕ್ಷರ ಗಾತ್ರ
ಪ್ರಕೃತಿಯಿಂದ ಪ್ರೇರಣೆಗೊಂಡು ಹಲವು ಕಟ್ಟಡಗಳು ರೂಪು ತಳೆದಿವೆ. ಅವುಗಳ ಪೈಕಿ ವಿಶೇಷ ಎನ್ನಿಸುವುದು ‘ನಾಟಿಲಸ್‌ ಹೌಸ್‌’. ಸಮುದ್ರದ ಸೊಬಗಿನಿಂದ ಸ್ಫೂರ್ತಿ ಪಡೆದು, ವಾಸ್ತುಶಿಲ್ಪಿಯ ಕೆತ್ತನೆಯಿಂದ ಜೀವಂತಗೊಂಡ ಈ ಕಟ್ಟಡ ಇರುವುದು ಮೆಕ್ಸಿಕೊದಲ್ಲಿ.
 
ಇದು ವಾಸ್ತುಶಿಲ್ಪಿ ಜಾವಿಯರ್‌ ಸೆನೊಶಿಯನ್‌ ಅವರ ಕನಸು. ಥೇಟ್‌ ಶಂಖದ ರೀತಿಯಲ್ಲಿಯೇ ಇರುವ ಈ ಮನೆ ಹಲವು ಬಣ್ಣಗಳಿಂದ ಕಂಗೊಳಿಸುತ್ತದೆ. ಆಧುನಿಕ ಮತ್ತು ಸಮಕಾಲೀನ ವಿನ್ಯಾಸಗಳ ಸಮ್ಮಿಳಿತವನ್ನು ಈ ಕಟ್ಟಡದಲ್ಲಿ ಕಾಣಬಹುದು.
 
ಪ್ರಕೃತಿಯ ಸಹಜ ಸೌಂದರ್ಯವನ್ನು ಪ್ರತಿಬಿಂಬಿಸುವ ಈ ಮನೆಯಲ್ಲಿ ಮೂರು ಮಂದಿ ವಾಸವಿದ್ದಾರೆ. ಒಳಾಂಗಣ ವಿನ್ಯಾಸವೂ ಸೊಗಸಾಗಿದೆ. ಗಿಡಗಳು, ವರ್ಣಮಯವಾದ ಗಾಜಿನ ಅಲಂಕಾರಿಕ ವಸ್ತುಗಳು, ವಿಭಿನ್ನ ವಿನ್ಯಾಸದ ಮರದ ಪೀಠೋಪಕರಣಗಳನ್ನು ಎಷ್ಟು ನೋಡಿದರೂ ಸಾಲದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT