ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀನ ವಿನ್ಯಾಸದ ಟಿಶ್ಯೂ ಹೋಲ್ಡರ್‌

Last Updated 18 ಮೇ 2017, 19:30 IST
ಅಕ್ಷರ ಗಾತ್ರ

ಟಿಶ್ಯೂ ಹಿಡಿದ ಮಹಿಳೆ
ಸುಂದರವಾದ ಮಹಿಳೆಯ ಚಿತ್ರವಿರುವ ಈ ಟಿಶ್ಯೂ ಹೋಲ್ಡರನ್ನು  ಮನೆಯ ಹಾಲ್‌ನ ಟೇಬಲ್‌ ಮೇಲೆ ಇರಿಸಿದರೆ ಅಂದವಾಗಿ ಕಾಣುತ್ತದೆ.
ಬೆಲೆ: ₹ 2,600, ಲಭ್ಯ: www.eazelly.com

ದೋಣಿಯ ಆಕಾರ
ಟಿಶ್ಯೂ ಮತ್ತು ಟೂತ್‌ ಪಿಕ್‌  ಎರಡೂ ಇಡಲು ಅವಕಾಶ ಒದಗಿಸಿರುವ ಈ ಟಿಶ್ಯೂ ಹೋಲ್ಡರ್‌ ದೋಣಿಯಾಕಾರದಲ್ಲಿದೆ. ನೀಲಿ ಬಣ್ಣದಲ್ಲಿರುವ ಇದು ಸಮುದ್ರದ ಸೌಂದರ್ಯವನ್ನು ನೆನಪಿಸುತ್ತದೆ. ಬೆಲೆ: ₹890. www.pepperfry.com

ಟಿಶ್ಯೂ ಹಿಡಿದ ಗೂಬೆಗಳು
ಒಂದೇ ನೋಟದಲ್ಲಿಯೇ ಮನಸೆಳೆಯುವ ಇದರ ವಿನ್ಯಾಸ ಆಕರ್ಷಕವಾಗಿದೆ. ಜೋಡಿ ಗೂಬೆಗಳು ಇದರ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
ಬೆಲೆ: ₹ 999. www.indiacircus.com

ಸಾಂಪ್ರದಾಯಿಕ ಸಮ್ಮಿಳಿತ
ನವಿಲಿನಿಂದ ಪ್ರೇರಣೆ ಪಡೆದು ಇದನ್ನು ವಿನ್ಯಾಸಗೊಳಿಸಲಾಗಿದೆ. ನವಿಲಿನ ತರಹವೇ ಕಾಣುವ ಇದರ ಬೆಲೆ 999. ಡೈನಿಂಗ್‌ ಟೇಬಲ್‌ ಮೇಲೆ ಇರಿಸಿದರೆ ಚೆನ್ನಾಗಿ ಕಾಣುತ್ತದೆ. ಬೆಲೆ: ₹ 335.  www.flipkart.com
 

ವಿಭಿನ್ನ ವಿನ್ಯಾಸ
ಕಪ್‌ ಕೇಕ್‌ ಮಾದರಿಯ ತರಹವೇ ಇರುವ ಈ ಟಿಶ್ಯೂ ಹೋಲ್ಡರ್‌ ನೀಲಿ ಬಣ್ಣದಲ್ಲಿದೆ. ಪ್ಲಾಸ್ಟಿಕ್‌ನ ಇದನ್ನು ಮಕ್ಕಳ ಕೋಣೆಯಲ್ಲಿ ಇರಿಸಬಹುದು. ಮಕ್ಕಳ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಬಹುದು. ಬೆಲೆ: ₹ 399. ಲಭ್ಯ: www.flipkart.com

ಹಾಸಿಗೆಯ ಹೋಲಿಕೆ
ಹಾಸಿಗೆಯನ್ನೇ ಹೋಲುವಂತಹ ಈ ಟಿಶ್ಯೂ ಹೋಲ್ಡರ್‌ ಕಬ್ಬಿಣ ಮತ್ತು ಮರಗಳಿಂದ ಮಾಡಲಾಗಿದೆ. ಚಹಾದ ಟೇಬಲ್‌, ಕಂಪ್ಯೂಟರ್‌ ಟೇಬಲ್‌ಗಳ ಮೇಲೆ ಇರಿಸಬಹುದು.  ಒಣ ಬಟ್ಟೆಯಿಂದ ಇದನ್ನು  ಒರೆಸಬೇಕು.
ಬೆಲೆ: ₹ 459. www.amazon.in

ಕಲಾತ್ಮಕ ವಿನ್ಯಾಸ
ಧೋಕ್ರಾ ಕಲೆಯಿಂದ ಪ್ರೇರಣೆ ಪಡೆದಿರುವ ಇದು ನೋಡಲು ಬಹು ಆಕರ್ಷಕವಾಗಿದೆ.
ಬೆಲೆ: ₹ 1200. www.engrave.in

ಮರದ ಹೋಲ್ಡರ್‌
ಸರಳವಾಗಿರುವ ಈ ಟಿಶ್ಯೂ ಹೋಲ್ಡರ್‌ಗೆ ಆರು ತಿಂಗಳ ವ್ಯಾರೆಂಟಿ ಇದೆ. ಬೆಲೆ: ₹ 699.ಲಭ್ಯ: www.homeshop18.com

ಚಿಟ್ಟೆ ಹಿಡಿದ ಟಿಶ್ಯೂ
ಚಿಟ್ಟೆಗಳಿಂದ ಪ್ರೇರಣೆ ಪಡೆದು ಸೃಷ್ಟಿಯಾದ ಈ ಟಿಶ್ಯೂ ಹೋಲ್ಡರ್‌ ನಾಲ್ಕು ಬಣ್ಣಗಳಲ್ಲಿ ಲಭ್ಯವಿವೆ. ಬೆಲೆ: ₹550.  www.sweetcouch.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT