ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಘಾತಕಾರಿ ಯೋಜನೆ

Last Updated 18 ಮೇ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ಯೋಜನೆಗೆ ಸುಮಾರು 2 ಲಕ್ಷ ಮರಗಳನ್ನು ಕಡಿಯಬೇಕಾಗುತ್ತದೆ  ಎಂಬ ಸುದ್ದಿ ಆಘಾತಕಾರಿಯಾಗಿದೆ.

ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರದಲ್ಲಿ ಇಂತಹ ಯೋಜನೆಗಳ ಅಗತ್ಯವೇನು ಎಂಬುದು ಸ್ಪಷ್ಟವಾಗಿಲ್ಲ. 1998ರಲ್ಲಿ ಬಳ್ಳಾರಿ, ಹೊಸಪೇಟೆ ಪ್ರದೇಶದ ಗಣಿಗಳಿಂದ ಕಬ್ಬಿಣದ ಅದಿರನ್ನು ಕರಾವಳಿಯ ಬಂದರುಗಳಿಗೆ ಸಾಗಿಸಲು ಈ ಯೋಜನೆ ಅಗತ್ಯ ಎಂದು ಹೇಳಲಾಗಿತ್ತು. ಈಗ ಗಣಿಗಳು (‘ಎ’ ಕೆಟಗಿರಿ ಹೊರತುಪಡಿಸಿ) ಬಹುತೇಕ ಸ್ಥಗಿತಗೊಂಡಿವೆ. ಈ ವಿಷಯವನ್ನು ಗಮನಿಸದೆ ಇಪ್ಪತ್ತು ವರ್ಷದ ಹಿಂದೆ ರೂಪಿಸಿದ  ಯೋಜನೆಯನ್ನು ಈಗ ಜಾರಿಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿರುವುದು ಹಾಸ್ಯಾಸ್ಪದ. ಕರ್ನಾಟಕವನ್ನು ಮರುಭೂಮಿಯಾಗಿಸುವಂತಹ ಇಂತಹ ಯೋಜನೆಗಳನ್ನು ಕೈಬಿಡುವುದು ಸೂಕ್ತ ಎನಿಸುತ್ತದೆ.

–ಮಧುಶ್ರೀ, ಹರಪನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT