ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಸರಿಪಡಿಸಿ

Last Updated 18 ಮೇ 2017, 19:30 IST
ಅಕ್ಷರ ಗಾತ್ರ

ನಟರಾಜ್ ಹುಳಿಯಾರ್ ಅವರ  ‘ಬುದ್ಧ: ಕನ್ನಡ ನಾಡಿನ ಕುತೂಹಲಕರ ವ್ಯಾಖ್ಯಾನಗಳು’ (ಪ್ರ.ವಾ., ಮೇ 10) ಅಂಕಣ ಬರಹದಲ್ಲಿ ಕನ್ನಡನಾಡಿನಲ್ಲಿ ಬುದ್ಧ ಧಮ್ಮ ಮತ್ತು  ಸಾಹಿತ್ಯವನ್ನು ಕುರಿತು ಸೊಗಸಾಗಿ ಚರ್ಚಿಸಿದ್ದಾರೆ.

ಇದರಲ್ಲಿ,  ‘ಕರೀಗೌಡ ಬೀಚನಹಳ್ಳಿ ಅವರು ಕಾನೂರು ಹೆಗ್ಗಡಿತಿಯ  ನಾಯಕ ಹೂವಯ್ಯ ಹಿಂದೂ ಧರ್ಮವನ್ನು ಅರ್ಥಾತ್ ಜಾತಿಯಾಧರಿತ ಬ್ರಾಹ್ಮಣ ಧರ್ಮವನ್ನು ತಿರಸ್ಕರಿಸಿ ಸರ್ವಸಮಾನತೆಯ ಬುದ್ಧ ಧಮ್ಮವನ್ನು ಸ್ವೀಕರಿಸುತ್ತಾನೆ. ಡಾ. ಬಾಬಾಸಾಹೇಬ ಅಂಬೇಡ್ಕರ್ 1956ರಲ್ಲಿ  ಹಿಂದೂ ಧರ್ಮವನ್ನು ಪರಿತ್ಯಜಿಸಿ ಬುದ್ಧ ಧಮ್ಮವನ್ನು ಅಂಗೀಕರಿಸುತ್ತಾರೆ’ ಎಂದು ಹೇಳಿರುವುದಾಗಿ ನಟರಾಜ್ ಉಲ್ಲೇಖಿಸಿದ್ದಾರೆ.

ಆದರೆ ನನಗೆ ತಿಳಿದಂತೆ ಈ ಮಾತು ವಿಮರ್ಶಕ ಕೆ.ಎಸ್ ಭಗವಾನ್ ಅವರ ‘ಕುವೆಂಪು ಯುಗ’ ಕೃತಿಯಲ್ಲಿ ಬಂದಿದೆ (2007, ಪುಟ 80). ಇದಕ್ಕೂ ಮೊದಲು ಭಗವಾನ್ ಅವರು 1980ರ ಮೇ 20ರಂದು ‘ಕಾನೂರು ಹೆಗ್ಗಡಿತಿ ಮತ್ತು ಬಂಡಾಯ’ ಎಂಬ ವಿಮರ್ಶಾ ಲೇಖನದಲ್ಲೂ ಈ ವಿಷಯವನ್ನು ಪ್ರಾಸ್ತಾಪಿಸಿದ್ದರು. ಈ ಅಂಶವನ್ನು ನಟರಾಜ್ ಮತ್ತು ಓದುಗರು ಗಮನಿಸಬೇಕಾಗಿ ವಿನಂತಿ.

–ಗಣೇಶ್ ಕೆ.ಎಸ್., ನಾಗಮಂಗಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT