ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫಿ: 20 ಸಾವಿರ ಎಂಜಿನಿಯರುಗಳ ನೇಮಕ ನಿರ್ಧಾರ

Last Updated 18 ಮೇ 2017, 18:53 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಕ್ಯಾಂಪಸ್‌ ನೇಮಕಾತಿಯಲ್ಲಿ  20 ಸಾವಿರ ಎಂಜಿನಿಯರುಗಳನ್ನು ನೇಮಕ ಮಾಡಿಕೊಳ್ಳಲು ಇನ್ಫೊಸಿಸ್‌ ಉದ್ದೇಶಿಸಿದೆ.

ಸಂಸ್ಥೆಯ  ವಾರ್ಷಿಕ ಕ್ಯಾಂಪಸ್‌ ನೇಮಕಾತಿ ಸೆಪ್ಟೆಂಬರ್‌ ತಿಂಗಳಿನಿಂದ ಆರಂಭಗೊಳ್ಳುತ್ತದೆ. ಮುಂದಿನ ವರ್ಷವೂ ಇದೇ ಮಟ್ಟದ ನೇಮಕಾತಿ ನಡೆಯಲಿದೆ. ನಾಲ್ಕು ವರ್ಷಗಳಿಂದ ಈ ಮಟ್ಟ ಕಾಯ್ದುಕೊಂಡು ಬರಲಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಕೆಲ ಪ್ರಮುಖ ಸಾಫ್ಟ್‌ವೇರ್‌ ಸಂಸ್ಥೆಗಳು ಉದ್ಯೋಗ ಕಡಿತ ಮಾಡುತ್ತಿವೆ ಎಂದು ವರದಿಯಾಗುತ್ತಿರುವ ಬೆನ್ನಲ್ಲೇ, ಇನ್ಫೊಸಿಸ್‌ನ  ಈ ನಿರ್ಧಾರ ಪ್ರಕಟಗೊಂಡಿದೆ. ಅಮೆರಿಕದಲ್ಲಿಯೂ ಮುಂದಿನ ಎರಡು ವರ್ಷಗಳಲ್ಲಿ 10 ಸಾವಿರ ತಂತ್ರಜ್ಞರನ್ನು ನೇಮಿಸಿಕೊಳ್ಳುವುದಾಗಿ ಸಂಸ್ಥೆ ಈಗಾಗಲೇ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT