ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ನಿರ್ಮಾಣಕ್ಕೆ ನೀರು, ಗಾರೆ ಬೇಕಿಲ್ಲ, ಅಂಟು ಸಾಕು!

Last Updated 18 ಮೇ 2017, 18:55 IST
ಅಕ್ಷರ ಗಾತ್ರ

ಬೆಂಗಳೂರು: ಪರಿಸರ ಸ್ನೇಹಿ ಕಟ್ಟಡ ಸಾಮಗ್ರಿ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ವಿಯೆನ್ನಾದ ಜಾಗತಿಕ ಕಂಪೆನಿ ವೀನೆರ್‌ಬರ್ಗರ್ ಮರಳು ಮತ್ತು ನೀರು ರಹಿತ ಕಟ್ಟಡ ನಿರ್ಮಾಣ ತಂತ್ರಜ್ಞಾನ  ಅಭಿವೃದ್ಧಿಪಡಿಸಿದೆ.

ವೀನೆರ್‌ಬರ್ಗರ್ ಅಭಿವೃದ್ಧಿಪಡಿಸಿರುವ ‘ಪೋರೋಥರ್ಮ್ ಡ್ರೈ ಫಿಕ್ಸ್’  ಹೆಸರಿನ  ನೈಸರ್ಗಿಕ ಅಂಟನ್ನು  ಗಾರೆ(ಸಿಮೆಂಟ್‌) ಬದಲು ಬಳಸಬಹುದು. ಇಟ್ಟಿಗೆಗಳ ನಡುವೆ  ಒಣ ಗಾರೆಯಂತೆ ಕೆಲಸ ಮಾಡುವ ಈ ಅಂಟು 24 ಗಂಟೆಗಳಲ್ಲಿ ಸಿಮೆಂಟ್‌ಗಿಂತ ಹೆಚ್ಚು ಗಟ್ಟಿಯಾಗಿ ಇಟ್ಟಿಗೆಗಳನ್ನು ಅಂಟಿಸುತ್ತದೆ.

ಸಿಮೆಂಟ್‌ ಮತ್ತು ನೀರಿನ ಅಗತ್ಯವಿರುವುದಿಲ್ಲ ಎಂದು ವೀನೆರ್‌ಬರ್ಗರ್ ವ್ಯವಸ್ಥಾಪಕ ನಿರ್ದೇಶಕ  ಮೊನ್ನಂದ ಅಪ್ಪಯ್ಯ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ನೀರು, ಮರಳಿನ ಅಭಾವ ಎದುರಿಸುತ್ತಿರುವ ನಗರಗಳಿಗೆ ಈ ತಂತ್ರಜ್ಞಾನ  ಹೇಳಿ ಮಾಡಿಸಿದಂತಿದೆ. ಅಂಟು ಪರಿಣಾಮಕಾರಿ ಕೆಲಸ ಮಾಡಲು ಸೂಕ್ತವಾದ ಇಟ್ಟಿಗೆಗಳನ್ನೂ ಕಂಪೆನಿ ಪೂರೈಸುತ್ತದೆ’ ಎಂದು ಅವರು ತಿಳಿಸಿದರು.

ಉಷ್ಣ ನಿರೋಧಕದಂತೆಯೂ ಕೆಲಸ ಮಾಡುವ ಅಂಟು ಸಣ್ಣ ಟ್ಯೂಬ್‌ನಿಂದ ಕ್ಯಾನ್‌ಗಳಲ್ಲಿ ಲಭ್ಯವಿದೆ. ಗ್ರಾಹಕರ ಬೇಡಿಕೆಗೆ ಅನುಸಾರ ಪೂರೈಸಲಾಗುವುದು ಎಂದರು. ಕುಣಿಗಲ್‌ ಬಳಿಯ ಘಟಕದಲ್ಲಿ ಇಟ್ಟಿಗೆ, ಅಂಟು ತಯಾರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT