ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಳುಬಿದ್ದಿರುವ ಶಾದಿಮಹಲ್‌ ಕಟ್ಟಡ

Last Updated 19 ಮೇ 2017, 5:31 IST
ಅಕ್ಷರ ಗಾತ್ರ

ಜಾಲಹಳ್ಳಿ: ಪಟ್ಟಣದಲ್ಲಿ 9 ವರ್ಷಗಳ ಹಿಂದೆ ಕೈಗೆತ್ತಿಕೊಂಡ ಶಾದಿಮಹಲ್‌ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳದೆ ಪಾಳುಬಿದ್ದಿದ್ದು, ಕಟ್ಟಡದ ಸುತ್ತ ಮುಳ್ಳುಕಂಟಿ ಬೆಳೆದಿದೆ.
ಪಟ್ಟಣ ಸಮೀಪದ ಮುದಗೊಟ್‌ ರಸ್ತೆ ಪಕ್ಕದಲ್ಲಿ 20 ಗುಂಟೆ ಜಾಗದಲ್ಲಿ ವಿಶಾಲವಾಗಿರುವ ಕಟ್ಟಡ ನಿರ್ಮಿಸಲು ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಅವರು ಶಾಸಕರ ಕ್ಷೇತ್ರ ಅಭಿವೃದ್ಧಿ ಅನುದಾನದಲ್ಲಿ ₹10 ಲಕ್ಷ ಹಣ ಮಂಜೂರು ಮಾಡಿದ್ದರು.

ಸ್ಥಳೀಯ ಶಾದಿಮಹಲ್‌ ನಿರ್ಮಾಣ ಸಮಿತಿಗೆ ಕಾಮಗಾರಿ ನಿರ್ವಹಣೆ ವಹಿಸಲಾಗಿತ್ತು. ‘₹10ಲಕ್ಷ ಅನುದಾನದಲ್ಲಿ ಕಟ್ಟಡ ಕಟ್ಟಡ ನಿರ್ಮಿಸಿದ್ದು, ನಂತರ ಹಣಕಾಸಿನ ತೊಂದರೆಯಿಂದ ಕಟ್ಟಡ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

ಈಗಾಗಲೇ ಶೇ 75ರಷ್ಟು ಕಾಮಗಾರಿ ಮುಗಿದಿದ್ದು, ಇನ್ನೂ ಸ್ವಲ್ಪ ಪ್ರಮಾಣದ ಕಾಮಗಾರಿ ಬಾಕಿ ಇದೆ. ಕಟ್ಟಡದ ಸುತ್ತ ಜಾಲಿ ಗಿಡಗಳು ಬೆಳೆದು ನಿಂತಿವೆ. ರಾತ್ರಿ ಅನೈತಿಕ ಚಟುವಟಿಕೆ ತಾಣವಾಗಿದೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿ ಶಾದಿಮಹಲ್‌ ಕಟ್ಟಡ  ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕೆಂದು ಮುಸ್ಲಿಂ ಸಮಾಜದ ಮುಖಂಡ ಹಾಜಿ ಮಲ್ಲಿಕ್‌ ಅಹ್ಮದ್‌ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT