ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘2017 ಆರ್ಥಿಕ ಸುಧಾರಣೆಯ ವರ್ಷ’

Last Updated 19 ಮೇ 2017, 5:41 IST
ಅಕ್ಷರ ಗಾತ್ರ

ಮಂಗಳೂರು: ದೇಶದ ಆರ್ಥಿಕ ಸುಧಾರ ಣೆಯ ಪ್ರಕ್ರಿಯೆಲ್ಲಿ 2017 ಮರೆಯಲಾ ಗದ ವರ್ಷ. ಭಾರತದ ಆರ್ಥಿಕ ಸ್ವಾವ ಲಂಬನೆಗೆ ಈ ವರ್ಷ ಹಲವಾರು ಕ್ರಮ ಗಳನ್ನು ಆರಂಭಿಸಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಹೇಳಿದರು.

ನಗರದ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸ್ಟ್ಯಾಂಡ್‌ ಅಪ್‌, ಸ್ಟಾರ್ಟ್‌ ಅಪ್‌ ಇಂಡಿಯಾ ಮಾಹಿತಿ ಕಾರ್ಯಾಗಾರ ಹಾಗೂ ಫಲಾನುಭವಿಗಳಿಗೆ ಮುದ್ರಾ ಸಾಲ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ವರ್ಷ ರೈಲ್ವೆ ಬಜೆಟ್‌ ಅನ್ನು, ಕೇಂದ್ರ ಬಜೆಟ್‌ನಲ್ಲಿ ವಿಲೀನ ಮಾಡಲಾ ಗಿದೆ. ಫೆಬ್ರುವರಿ 1 ರಂದು ಕೇಂದ್ರ ಬಜೆಟ್‌ ಮಂಡಿಸಲಾಗಿದೆ. ಅಲ್ಲದೇ, ಮಾರ್ಚ್‌ 31 ರೊಳಗೆ ಬಜೆಟ್‌ ಅನು ಮೋದನೆ ಪಡೆದು, ಏಪ್ರಿಲ್‌ 1 ರಿಂದ ಆರ್ಥಿಕ ವರ್ಷದ ಖರ್ಚು ಆರಂಭಿಸಲಾ ಗಿದೆ. ಇದರ ಜತೆಗೆ ಬರುವ ಜುಲೈ 1 ರಿಂದ ಜಿಎಸ್‌ಟಿ ಜಾರಿಗೆ ಬರಲಿದ್ದು, ಮಹತ್ವದ ಹೆಜ್ಜೆ ಆಗಲಿದೆ ಎಂದು ಬಣ್ಣಿಸಿದರು.

ತಾಂತ್ರಿಕತೆಯನ್ನು ಬಳಸಿಕೊಂಡು, ನಗದಿನ ಕಡಿಮೆ ಉಪಯೋಗ ಮಾಡು ವುದೇ ಡಿಜಿಟಲ್‌ ವಹಿವಾಟು. ತಂತ್ರ ಜ್ಞಾನ ಸಾಕಷ್ಟು ಬೆಳೆಯುತ್ತಿದ್ದು, ಆರ್ಥಿಕ ಸುಧಾರಣೆಗೆ ಇದನ್ನು ಬಳಕೆ ಮಾಡಿ ಕೊಳ್ಳಬೇಕಾಗಿದೆ ಎಂದರು.

ಗುರಿ ಮೀರಿದ ಸಾಧನೆ: ಮುದ್ರಾ ಸಾಲ ಯೋಜನೆಯಡಿ ಕಳೆದ ವರ್ಷ ಹಾಗೂ ಈ ವರ್ಷ ಗುರಿ ಮೀರಿದ ಸಾಧನೆ ಮಾಡಲಾಗಿದೆ. ಶಿಶು, ಕಿಶೋರ್‌, ತರುಣ್‌ ವಿಭಾಗದಲ್ಲಿ ಸ್ವಂತ ಉದ್ಯೋಗ ಆರಂಭಿಸಲು ಸಾಲ ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ವಿದ್ಯೆ ಕಲಿತವರಿಗೆ ಕೌಶಲ ಬೇಕು. ಅದಕ್ಕಾಗಿ ಕೌಶಲ ಅಭಿವೃದ್ಧಿ ಯೋಜನೆ ಆರಂಭಿಸಲಾಯಿತು. ಕೌಶಲ ಪಡೆದ ವರಿಗೆ ಉದ್ಯೋಗ ಆರಂಭಿಸಲು ಆರ್ಥಿಕ ನೆರವು ಅಗತ್ಯ. ಇದನ್ನು ಪೂರೈಸಲು ಮುದ್ರಾ ಸಾಲ ಯೋಜನೆ ರೂಪಿಸಲಾ ಗಿದ್ದು, ಪ್ರಧಾನಿಯೇ ಈ ಸಾಲದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ ಎಂದು ವಿವರಿಸಿದರು.

ತಾಂತ್ರಿಕ ಆವಿಷ್ಕಾರಗಳಿಗಾಗಿ ಸ್ಟ್ಯಾಂಡ್‌ ಅಪ್‌ ಇಂಡಿಯಾ, ಸ್ಟಾರ್ಟ್ ಅಪ್‌ ಇಂಡಿಯಾ ಯೋಜನೆ ರೂಪಿಸ ಲಾಗಿದ್ದು, ಈ ಯೋಜನೆಗಳ ಅಡಿ ಯಲ್ಲೂ ಆರ್ಥಿಕ ನೆರವು ಒದಗಿಸ ಲಾಗುವುದು ಎಂದ ಅವರು, ಬ್ಯಾಂಕಿನ ಪ್ರತಿ ಶಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಒಬ್ಬ ಫಲಾನುಭವಿ ಹಾಗೂ ಮಹಿಳಾ ಫಲಾನುಭವಿಗೆ ಸಾಲ ವಿತರಿ ಸಲು ಸೂಚನೆ ನೀಡಲಾಗಿದೆ. ದೇಶದಲ್ಲಿ ಒಟ್ಟು 1.25 ಲಕ್ಷ ಬ್ಯಾಂಕ್‌ ಶಾಖೆಗಳಿದ್ದು, 2.50 ಲಕ್ಷ ಜನರಿಗೆ ಇದರ ಪ್ರಯೋಜನ ದೊರೆಯಲಿದೆ ಎಂದು ಮಾಹಿತಿ ನೀಡಿದರು.

ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತ ನಾಡಿದ ಸಂಸದ ನಳಿನ್‌ಕುಮಾರ್‌ ಕಟೀಲು, ದೇಶದಲ್ಲಿ ಡಿಜಿಟಲ್‌ ವಹಿವಾ ಟಿಗೆ ಅತಿ ಹೆಚ್ಚು ಸ್ಪಂದಿಸಿದ್ದು ಕರ್ನಾಟಕ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಮೋದಿ ಅವರ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಮುದ್ರಾ ಸಾಲ ಯೋಜನೆ, ಸ್ಟ್ಯಾಂಡ್‌ ಅಪ್‌ ಇಂಡಿಯಾ, ಸ್ಟಾರ್ಟ್‌ ಅಪ್‌ ಇಂಡಿಯಾದಂತಹ ಯೋಜನೆಗಳಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಶಾಸಕ ಎಸ್‌. ಅಂಗಾರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಕರ್ಣಾಟಕ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್‌., ಕಾರ್ಪೊರೇಷನ್‌ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಜೈಕುಮಾರ್‌ ಗರ್ಗ್‌, ಸಿಂಡಿಕೇಟ್‌ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಅರುಣ್‌ ಶ್ರೀವಾತ್ಸವ, ಕೆನರಾ ಬ್ಯಾಂಕ್‌ ಮಹಾಪ್ರಬಂಧಕ ವಿರುಪಾಕ್ಷ, ಎಸ್‌ಸಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌. ರಾಜೇಂದ್ರಕುಮಾರ್‌, ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ್‌ ಮಠಂದೂರು ವೇದಿಕೆಯಲ್ಲಿದ್ದರು.

ಎರಡಂಕಿ ದಾಟಲಿದೆ ಜಿಡಿಪಿ
ಶೀಘ್ರವೇ ದೇಶದ ಜಿಡಿಪಿ ಎರಡಂಕಿ ದಾಟಲಿದೆ ಎಂದು ಕೇಂದ್ರ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಹೇಳಿದರು.

ನೋಟು ರದ್ದತಿಯ ನಂತರ ಜಿಡಿಪಿ ಕುಸಿಯಲಿದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ, ಮಾರ್ಚ್‌ 31 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಜಿಡಿಪಿಯಲ್ಲಿ ವೃದ್ಧಿಯಾಗಿದೆ ಎಂದರು.

ಡಿಜಿಟಲ್‌ ವಹಿವಾಟು ಹೆಚ್ಚಾದಲ್ಲಿ, ತೆರಿಗೆ ತಪ್ಪಿಸುವುದು ಕಡಿಮೆಯಾಗಲಿದೆ. ಇದರಿಂದ ಜಿಡಿಪಿ ದರ ಮತ್ತಷ್ಟು ಹೆಚ್ಚಲಿದೆ. ಅಂತರ ರಾಷ್ಟ್ರೀಯ ವಾಣಿಜ್ಯ ಸಂಸ್ಥೆಗಳು, ದೇಶದ ಆರ್ಥಿಕ ಪ್ರಗತಿ ಆಶಾದಾಯಕವಾಗಿದೆ ಎಂದು ಬಣ್ಣಿಸಿವೆ. 2030 ರ ವೇಳೆಗೆ ಭಾರತದ ಆರ್ಥಿಕತೆಯು, ಜಪಾನ್‌, ಫ್ರಾನ್ಸ್‌, ಜರ್ಮನಿ, ಇಂಗ್ಲೆಂಡ್‌ ದೇಶಗಳ ಆರ್ಥಿಕತೆಯನ್ನು ಮೀರಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT