ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶದಲ್ಲಿ ದೇಗುಲಗಳಿಗೆ ಮಹತ್ವದ ಸ್ಥಾನ’

Last Updated 19 ಮೇ 2017, 5:51 IST
ಅಕ್ಷರ ಗಾತ್ರ

ಬೈಂದೂರು (ಗಂಗೊಳ್ಳಿ): ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯಗಳಿಗೆ ಮಹ ತ್ವದ ಸ್ಥಾನವಿದೆ. ದೇವರು ನೆಲೆಸಿರುವ ದೇಗುಲಗಳು ದೇವರು ಮತ್ತು ಮನುಷ್ಯರ ನಡುವೆ ನಿಕಟ ಸಂಬಂಧ, ಸಂಪರ್ಕ ಕಲ್ಪಿಸುವ ಪವಿತ್ರ ತಾಣ. ಅವುಗಳಿಂದಾಗಿ ದೇವರು ಜನರ ನಡುವೆ ನೆಲೆಸಿರುವ ಭಾವನೆ ಉಂಟಾಗುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ. ಫಾ. ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಗಂಗೊಳ್ಳಿ ನವೀಕೃತ ಕೊಸೆಸಾಂವ್ ಅಮ್ಮನವರ ಚರ್ಚನ್ನು ಗುರುವಾರ ಲೋಕಾರ್ಪಣೆಗೊಳಿಸಿದ ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕ್ರೈಸ್ತ ಸಮುದಾಯದವರಿಗೆ ದೇವಾ ಲಯವು ಸ್ವರ್ಗದ ದಾರಿ ಮತ್ತು ಪವಿತ್ರ ಪ್ರೀತಿಯ ತಾಣ. ಅಲ್ಲಿಗೆ ಬಂದು ದೇವರ ಆಶೀರ್ವಾದ, ಕೃಪಾವರ ಬೇಡಿದರೆ ದೇವರು ಯಾರನ್ನೂ ಬರಿಗೈಯಲ್ಲಿ ಕಳು ಹಿಸದೆ ಅವರ ಬೇಡಿಕೆಗಳನ್ನು ಈಡೇರಿ ಸುತ್ತಾನೆ. 400  ವರ್ಷಗಳ ಇತಿಹಾಸವಿ ರುವ ಗಂಗೊಳ್ಳಿ ಈ  ದೇವಾಲಯವು ಯಾವುದೇ ಜಾತಿ, ಮತಕ್ಕೆ ಸೀಮಿತವಾ ಗಿಲ್ಲ. ಎಲ್ಲ ಸಮುದಾಯದ ಜನರು ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಬಹುದು ಎಂದು ಅವರು ಹೇಳಿದರು.

ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್, ಗಂಗೊಳ್ಳಿ ಚರ್ಚಿಗೆ ವಿಶಿಷ್ಟ ಧಾರ್ಮಿಕ ಪರಂಪರೆ ಇದೆ. ಈಗ ಅದರ ನವೀಕರಣ ಮಾಡುವ ಮೂಲಕ  ಉತ್ತಮ ಸಂದೇಶ ನೀಡಿದ್ದಾರೆ ಎಂದರು.

ಶಾಸಕ ಕೆ. ಗೋಪಾಲ ಪೂಜಾರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿದ್ದ ಕಲಬುರ್ಗಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ. ಫಾ. ಡಾ. ರಾಬರ್ಟ್ ಮಿರಾಂದಾ, ಕುಂದಾ ಪುರ ವಲಯದ ಪ್ರಧಾನ ಧರ್ಮಗುರು ರೆ. ಫಾ. ಅನಿಲ್ ಡಿಸೋಜ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಚರ್ಚಿನ ನಿಕಟಪೂರ್ವ ಧರ್ಮಗುರು ಫಾ. ಅಲ್ಫೋನ್ಸ್ ಡಿಲೀಮಾ ಶುಭ ಹಾರೈಸಿದರು.

ದೇವಾಲಯ ನವೀಕರಣಕ್ಕೆ ಕಾರಣ ರಾದ ಚರ್ಚಿನ ಧರ್ಮಗುರು ಫಾ. ಅಲ್ಬರ್ಟ್ ಕ್ರಾಸ್ತಾ ಹಾಗೂ ನಿಕಟಪೂರ್ವ ಧರ್ಮಗುರು ಫಾ. ಅಲ್ಫೋನ್ಸ್ ಡಿಲೀಮಾ ಅವರನ್ನು ಸನ್ಮಾನಿಸಲಾಯಿತು. ನೆರವಿತ್ತ ದಾನಿಗಳನ್ನು ಗೌರವಿಸಲಾಯಿತು. ಬ್ಲೋಸಂ ಫರ್ನಾಂಡಿಸ್, ಉದ್ಯಮಿ ಎಂ. ಎಂ. ಇಬ್ರಾಹಿಂ, ಗ್ರಾಮ ಪಂಚಾ ಯಿತಿ  ಆಡಳಿತಾಧಿಕಾರಿ ಸೀತಾರಾಮ ಶೆಟ್ಟಿ, ಕಾರ್ಮೆಲ್ ಕಾನ್ವೆಂಟ್‌ನ ಮುಖ್ಯಸ್ಥೆ ಸಿಸ್ಟರ್ ಜ್ಯೂಲಿಯಾನ್,  ಜೆರಾಲ್ಡ್ ಕ್ರಾಸ್ತಾ, ಕಾರ್ಯದರ್ಶಿ ಪ್ರೀತಿ ಫೆರ್ನಾಂಡಿಸ್ ಇದ್ದರು. ಫಾ. ಅಲ್ಬರ್ಟ್ ಕ್ರಾಸ್ತಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಓವಿನ್ ರೆಬೆಲ್ಲೊ ಮತ್ತು ಲವಿಟಾ ಪಿಂಟೋ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT