ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಅವಕಾಶಗಳ ಸುರಕ್ಷತಾ ಕೋರ್ಸ್‌

Last Updated 19 ಮೇ 2017, 6:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪದವಿಪೂರ್ವ ಶಿಕ್ಷಣದ ನಂತರ ಹೊಸ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂಬುವವರಿಗೆ ಅಗ್ನಿ ಮತ್ತು ಸುರಕ್ಷತಾ ಎಂಜಿನಿಯರಿಂಗ್‌ ಡಿಪ್ಲೊಮಾ ಅಧ್ಯಯನ ಮಾಡಬಹುದು. ಇತ್ತೀಚಿನ ವರ್ಷಗಳಲ್ಲಿ ಈ ಕ್ಷೇತ್ರ ಬೆಳೆದಿದ್ದು, ಉದ್ಯೋಗವಕಾಶಗಳೂ ಸಾಕಷ್ಟಿವೆ.

ನಗರ ಪ್ರದೇಶದಲ್ಲಿ ಕೈಗಾರಿಕೆಗಳ, ಮಾಲ್‌ಗಳ, ಚಿತ್ರಮಂದಿರಗಳ, ಬೃಹತ್‌ ಕಟ್ಟಡಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂಥ ಕಟ್ಟಡಗಳಲ್ಲಿ ಅಗ್ನಿ ಅನಾಹುತ ತಡೆಯಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅಗ್ನಿ ಅನಾಹುತ ತಡೆಯಲು ಇಂಥ ಕಡೆಗಳಲ್ಲಿ ಸುರಕ್ಷತಾ ಅಧಿಕಾರಿ ನೇಮಕ ಮಾಡಿಕೊಂಡಿರುತ್ತಾರೆ.

ಸುರಕ್ಷತಾ ಅಧಿಕಾರಿ ಆಗ ಬಯಸುವವರಿಗಾಗಿಯೇ ಬೃಹತ್‌ ನಗರಗಳಲ್ಲಿ ಅಗ್ನಿ ಮತ್ತು ಸುರಕ್ಷತಾ ಎಂಜಿನಿಯರಿಂಗ್‌ ಡಿಪ್ಲೊಮಾ ಕೋರ್ಸ್‌ಗಳನ್ನು ಹೊಂದಿರುವ ಶಿಕ್ಷಣ ಸಂಸ್ಥೆಗಳು ಇವೆ.  ಮೂರು ವರ್ಷಗಳ ಪದವಿ ಅಧ್ಯಯನ ಬೇಡ ಎನ್ನುವವರು ಅಗ್ನಿ ಮತ್ತು ಸುರಕ್ಷತಾ ಎಂಜಿನಿಯರಿಂಗ್‌ ಡಿಪ್ಲೊಮಾ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕು. ಪಿಯುಸಿ (ಯಾವುದೇ ವಿಷಯ) ಮಾತ್ರವಲ್ಲದೇ ಪದವಿ, ಇತರೆ ಡಿಪ್ಲೊಮಾ ಪಾಸಾದವರೂ ಸೇರಬಹುದು. ಪಿಯುಸಿಯಲ್ಲಿ ಅನುತ್ತೀರ್ಣರಾದವರಿಗೂ ಅಧ್ಯಯನಕ್ಕೆ ಅವಕಾಶವಿದೆ.  ಶಿಕ್ಷಣ ಕಾಶಿ ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ಅಗ್ನಿ ಮತ್ತು ಸುರಕ್ಷತಾ ಕುರಿತು ಡಿಪ್ಲೊಮಾ ಕೋರ್ಸ್‌ ಕಲಿಸುವ ಸಂಸ್ಥೆಗಳಿವೆ.

ನಗರದಲ್ಲಿ ಉಣಕಲ್‌ನಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಫೈರ್‌ ಅಂಡ್‌ ಸೇಫ್ಟಿ ಎಂಜಿನಿಯರಿಂಗ್‌ (ಎಂಐಎಫ್‌ಎಸ್‌ಇ) ಸಂಸ್ಥೆಯು ಏಳು ವರ್ಷಗಳಿಂದ ಅಗ್ನಿ ಮತ್ತು ಸುರಕ್ಷತಾ ಎಂಜಿನಿಯರಿಂಗ್‌ಗೆ ಸಂಬಂಧಿಸಿದ ಕೋರ್ಸ್‌ಗಳನ್ನು ನಡೆಸುತ್ತಾ ಬಂದಿದೆ. ಮಂಗಳೂರು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದೆ.  ಕೋರ್ಸ್‌ನ ಅವಧಿ ಜೂನ್‌ನಿಂದ–ಏಪ್ರಿಲ್‌.

ನಗರದ ಕಾಡಸಿದ್ಧೇಶ್ವರ ಕಾಲೇಜು ಬಳಿ ಇರುವ ‘ಲಾಜಿಕ್‌ ಕಂಪ್ಯೂಟರ್‌ ಸೆಂಟರ್’ ಮತ್ತು ಧಾರವಾಡದಲ್ಲಿ ‘ಸೇಫ್‌’ ಶಿಕ್ಷಣ ಸಂಸ್ಥೆಯಲ್ಲಿಯೂ ಈ ಕೋರ್ಸ್‌ ಅಧ್ಯಯನ ಮಾಡಬಹುದು.

‘ಮಹಾನಗರಗಳಲ್ಲಿ ಕೈಗಾರಿಕೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇವೆ. 50 ಕಾರ್ಮಿಕರು ಕೆಲಸ ಮಾಡುವ ಸಣ್ಣ ಕಾರ್ಖಾನೆಯಲ್ಲೂ ಸುರಕ್ಷತಾ ಅಧಿಕಾರಿ ನೇಮಕ ಮಾಡಿಕೊಳ್ಳಬೇಕು ಎಂಬ ನಿಯಮ ಇದೆ. ಕೋರ್ಸ್‌ ಮುಗಿಸಿದ ನಂತರ ಕಾರ್ಖಾನೆಗಳಲ್ಲಿ ಕೆಲಸ ಮಾಡಬಹುದು.

‘ಅಗ್ನಿ ಅವಘಡ ಆಗದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಅಗ್ನಿ ಅವಘಡ ಆದಾಗ ಅದರ ತೀವ್ರತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗೆಗೆ ಹೇಳಿಕೊಡಲಾಗುತ್ತದೆ’ ಎಂದು ಎಂಐಎಫ್‌ಎಸ್‌ಇ ಸಂಸ್ಥೆಯ ಹುಬ್ಬಳ್ಳಿ–ಪ್ರಾದೇಶಿಕ ಮುಖ್ಯಸ್ಥೆ ವಿ.ಬಿ. ಕೃಪಾ ತಿಳಿಸಿದರು. 

ವಿವರಗಳಿಗೆ ಹುಬ್ಬಳ್ಳಿಯಲ್ಲಿನ ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಫೈರ್‌ ಅಂಡ್‌ ಸೇಫ್ಟಿ ಎಂಜಿನಿಯರಿಂಗ್‌ ( ಮೊ: 95381 19233) ಹಾಗೂ ಲಾಜಿಕ್‌ ಕಂಪ್ಯೂಟರ್ ಸೆಂಟರ್‌ (ಮೊ: 98452 84576) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT