ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ಯೋಗಿಗಳ ಭವಿಷ್ಯ ನಿಧಿ ಕಡ್ಡಾಯ’

Last Updated 19 ಮೇ 2017, 6:39 IST
ಅಕ್ಷರ ಗಾತ್ರ

ವಿಜಯಪುರ: ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಉದ್ಯೋಗಿಗಳ ಭವಿಷ್ಯ ನಿಧಿ ನೋಂದಣಿ ಮಾಡಿಸು ವುದು ಕಡ್ಡಾಯ. ತಪ್ಪಿದ್ದಲ್ಲಿ ಇಲಾಖಾ ಮುಖ್ಯಸ್ಥರೇ ನೇರ ಹೊಣೆಗಾರರಾಗು ತ್ತಾರೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಉದ್ಯೋಗಿಗಳ ಭವಿಷ್ಯ ನಿಧಿ ಅಭಿಯಾನ -2017ರ ಸಭೆಯಲ್ಲಿ ಮಾತನಾಡಿದ ಅವರು, ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಳ್ಳುವ ನೌಕರರು, ಕಟ್ಟಡ ನಿರ್ಮಾಣ ಕೆಲಸಗಾರರು, ಭದ್ರತಾ ಸಿಬ್ಬಂದಿ, ಸ್ವಚ್ಛತಾ ನಿರ್ವಹಣೆ ಕೆಲಸ ಗಾರರ ಭವಿಷ್ಯ ನಿಧಿ (ಇಪಿಎಫ್) ನೋಂದಣಿ ಆಗಿದೆಯೇ ಇಲ್ಲವೋ, ಎಂಬುದರ ಜತೆಗೆ ಕಂತುಗಳ ಪಾವತಿ ಯಾದ ಬಗ್ಗೆ ಪರಿಶೀಲಿಸಬೇಕು. ಬಾಕಿ ಇದ್ದಲ್ಲಿ ಪಾವತಿ ಮಾಡುವ ಕುರಿತು ಕ್ರಮ ಕೈಗೊಳ್ಳುವುದು ಇಲಾಖೆ ಮತ್ತು ಸಂಸ್ಥೆಯ ಮುಖ್ಯಸ್ಥರ ಜವಾಬ್ದಾರಿ ಯಾಗಿರುತ್ತದೆ ಎಂದು ತಿಳಿಸಿದರು.

ಒಂದು ವೇಳೆ ನೌಕರ ಸರ್ಕಾರಿ ಸಂಸ್ಥೆಯಡಿ ಬರದಿದ್ದರೆ (ಅನ್ ಎಡೆಡ್) ಆ ಸಂಸ್ಥೆಯೇ ಹೊಣೆ ಆಗಬೇಕಾಗುತ್ತದೆ. ಗುತ್ತಿಗೆ ಆಧಾರದಲ್ಲಿ ನೌಕರರನ್ನು ಒದಗಿಸುವ ಗುತ್ತಿಗೆದಾರರು ಕಮಿಷನ್ ಪಡೆದು ನೌಕರನಿಗೆ ಕಡಿಮೆ ಸಂಬಳ ನೀಡುವುದಲ್ಲದೇ, ಭವಿಷ್ಯ ನಿಧಿ ಕಂತನ್ನು ಪಾವತಿಸಿರದಿದ್ದರೆ ಗುತ್ತಿಗೆದಾ ರನ ಮೇಲೆ ಕಾನೂನು ಕ್ರಮ ತೆಗೆದು ಕೊಳ್ಳಬಹುದು ಎಂದು ಎಚ್ಚರಿಕೆ ನೀಡಿದರು.

ಭವಿಷ್ಯನಿಧಿ ನೋಂದಣಿ ಮಾಡು ವಲ್ಲಿ ನೌಕರನದ್ದು ಜವಾಬ್ದಾರಿಯಾಗಿರುತ್ತದೆ. ನಿವೃತ್ತಿ ಹಂತದಲ್ಲಿರುವ ನೌಕರನು ಸರಿಯಾಗಿ ಕಂತು ಪಾವತಿ ಮಾಡದಿದ್ದರೆ ಅದಕ್ಕೆ ನಿರ್ದಿಷ್ಟ ಮೊತ್ತದ ದಂಡ ಪಾವತಿಸಬೇಕಾಗುತ್ತದೆ. ಆದ್ದರಿಂದ ಅದಕ್ಕೆ ಅವಕಾಶ ನೀಡದೆ ಕಂತು ಪಾವತಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಇಪಿಎಫ್‌ನ ಕಲಬುರ್ಗಿ ಪ್ರಾದೇಶಿಕ ಆಯುಕ್ತ ವಲಿ ಮುಕ್ತಾರ್ ಅಹ್ಮದ್ ಮಾತ ನಾಡಿ, ಇಪಿಎಫ್ ಕೇಂದ್ರ ಸರ್ಕಾರದ ಭವಿಷ್ಯ ನಿಧಿ ಯೋಜನೆ. ಹೊರ ಗುತ್ತಿಗೆ ಆಧಾರದಲ್ಲಿ ನೇಮಕಗೊಳ್ಳುವ ಪ್ರತಿ ನೌಕರನಿಗೂ ಇದು ಅನ್ವಯವಾಗುತ್ತದೆ. ಮತ್ತು ಭವಿಷ್ಯದ ದೃಷ್ಟಿಯಿಂದ ಇದೊಂದು ಒಳ್ಳೆಯ ಯೋಜನೆ.

ನೌಕರ ಕೆಲಸಕ್ಕೆ ಹಾಜರಾದ ಒಂದು ದಿನ ಕೆಲಸ ನಿರ್ವಹಿಸಿ ಮರು ದಿನವೇ ಆಕಸ್ಮಿಕ ದುರ್ಘಟನೆ ಸಂಭವಿಸಿದರೂ ಅವನ ಕುಟುಂಬಕ್ಕೆ ಪೂರ್ಣ ಪ್ರಮಾಣದ ಸೌಲಭ್ಯ ಲಭ್ಯವಾಗುತ್ತದೆ ಎಂದರು.

2017ರ ಜ 1ರಿಂದ ಇದೇ ಜೂನ್‌ 30ರವರೆಗೆ ಈ ಅಭಿಯಾನ ನಡೆಯ ಲಿದ್ದು, ಇದುವರೆಗೂ ನೋಂದಣಿ ಮಾಡಿಕೊಳ್ಳದ ಮತ್ತು ಕಂತು ಬಾಕಿ ಇರುವ ನೌಕರರು ಈ ಅವಧಿಯೊಳಗೆ ನೋಂದಾಯಿಸಿಕೊಳ್ಳುವ ಜತೆಗೆ ಕಂತು ಪಾವತಿಸಬೇಕು.

2009ರ ಏಪ್ರಿಲ್‌ 1ರಿಂದ 2016ರ ಡಿಸೆಂಬರ್ 31ರ ಅವಧಿಯಲ್ಲಿ ಅರ್ಹ ನೌಕರನ ನೋಂದಣಿಯಾಗದಿದ್ದಲ್ಲಿ ಇದೇ ಜೂನ್ 30ರವರೆಗೆ ನೋಂದಾ ಯಿಸಲು ಇಲಾಖೆ, ಸಂಸ್ಥೆ ಕ್ರಮ ಕೈಗೊ ಳ್ಳಬೇಕು. ಮಾಹಿತಿಗಾಗಿ ಕಲಬುರ್ಗಿಯ ಪ್ರಾದೇಶಿಕ ಕಚೇರಿ, ವಿಜಯಪುರದ ಶಾಖೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಬಿ.ಬೂದೆಪ್ಪ, ಇಪಿಎಫ್‌ನ ವಿಜಯಪುರ ಶಾಖಾಧಿಕಾರಿ ವೀರಣ್ಣ ಕುಬಸದ, ಗೋಪಾಲಸಿಂಗ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT