ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾತಿ ಹೆಸರಲ್ಲಿ ಸಮಾಜ ಒಡೆಯುವುದು ಮಹಾಪಾಪ’

Last Updated 19 ಮೇ 2017, 6:48 IST
ಅಕ್ಷರ ಗಾತ್ರ

ಕಾಮನಕೇರಿ (ವಿಜಯಪುರ): ಜಾತಿ ಹೆಸರಿನಲ್ಲಿ ಸಮಾಜ ಒಡೆಯುವುದು ಮಹಾ ಪಾಪದ ಕೆಲಸ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು. ಗ್ರಾಮದ ಹೊರವಲಯದ ಗುಡ್ಡದ ಮೇಲ್ಭಾಗದಲ್ಲಿ ಗುರುವಾರ ನಡೆದ ಸದ್ಗುರು ಯಲ್ಲಾಲಿಂಗ ಮಹಾರಾಜರ ಪುಣ್ಯಾಶ್ರಮದ ನೂತನ ಕಟ್ಟಡ ಉದ್ಘಾ ಟನೆ, ಸಿದ್ಧಲಿಂಗ ಮಹಾರಾಜರು, ಮಾರುತೇಶ್ವರ ಮೂರ್ತಿ ಪ್ರತಿಷ್ಠಾಪನೆ, ಸಾಮೂಹಿಕ ವಿವಾಹ ಸಮಾರಂಭಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿ ಮಾತನಾ ಡಿದ ಅವರು, ಜಾತಿ, ಧರ್ಮದ ಹೆಸರಿ ನಲ್ಲಿ ಸಮಾಜಗಳನ್ನು ಒಗ್ಗೂಡಿಸುವ ಕಾರ್ಯ ನಡೆಯಬೇಕಿದೆ ಎಂದರು.

‘ಸರ್ವರಿಗೂ ಸಮಪಾಲು, -ಸರ್ವರಿಗೂ ಸಮಬಾಳು’ ಎಂಬ ಉಕ್ತಿ ಭಾಷಣಕ್ಕೆ ಸೀಮಿತವಾಗಬಾರದು. ಅಧಿಕಾರ, ಸಂಪತ್ತು ಎಲ್ಲ ವರ್ಗದ ಜನರಿಗೆ ದೊರಕಿದಾಗ ಮಾತ್ರ ಇದರ ಆಶಯ ಈಡೇರಿಕೆಯಾದಂತೆ ಎಂದು ಹೇಳಿದರು.

‘ಇಂದಿಗೂ ಬಡವ-–ಬಲ್ಲಿದ ಎಂಬ ದೊಡ್ಡ ಕಂದಕವಿದೆ. ಈ ಬೇಧ–-ಭಾವ ಹೋದಾಗ ಮಾತ್ರ ಸಮಾಜದಲ್ಲಿ ಸಮಾನತೆ, ಸಾಮರಸ್ಯ ಮೂಡಲು ಸಾಧ್ಯ. ಈ ಕಂದಕವನ್ನು ಮುಚ್ಚಿ ಹಾಕಲು ನಮ್ಮ ಸರ್ಕಾರ ಬದ್ಧವಾಗಿದೆ. ಅದಕ್ಕಾ ಗಿಯೇ ಸಾಮಾಜಿಕ ನ್ಯಾಯದ ತಳಹದಿ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ಯಾರು ಏನೇ ಹೇಳಲಿ, ನಾನಂತೂ ಸಾಮಾಜಿಕ ನ್ಯಾಯದೊಂದಿಗೆ ಮಾತ್ರ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದರು.

4 ಕೋಟಿ ಬಡವರು: ರಾಜ್ಯದ ಆರೂವರೆ ಕೋಟಿ ಜನಸಂಖ್ಯೆಯಲ್ಲಿ ನಾಲ್ಕು ಕೋಟಿ ಜನತೆ ಬಡತನ ರೇಖೆಗಿಂತ ಕೆಳಗಿದೆ ಎಂದು ಮುಖ್ಯಮಂತ್ರಿ ಹೇಳಿದರು.ಹಸಿವು ಮುಕ್ತ ರಾಜ್ಯ ನಿರ್ಮಾಣದ ಸಂಕಲ್ಪದೊಂದಿಗೆ ಅನ್ನಭಾಗ್ಯ ಜಾರಿ ಗೊಳಿಸಲಾಗಿದೆ. ಈ ಮೂಲಕ ಯಾರೊ ಬ್ಬರೂ ಹಸಿವಿನಿಂದ ಬಳಲಬಾರದು, ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎಂಬ ಧ್ಯೇಯವನ್ನು ಸಾಕಾರಗೊಳಿಸ ಲಾಗುತ್ತಿದೆ ಎಂದರು.

ಒಂದು ಬೇಕು ಎರಡು ಸಾಕು: ‘ಒಂದು ಬೇಕು, ಎರಡು ಸಾಕು’ ಎಂಬ ಸೂತ್ರ ಪಾಲಿಸಿ ಎಂದು ನವ ದಂಪತಿಗಳಿಗೆ ಕಿವಿಮಾತು ಹೇಳಿದ ಸಿದ್ದರಾಮಯ್ಯ, ಚಿಕ್ಕ ಸಂಸಾರ, ಸುಖಕ್ಕೆ ಆಧಾರ. ಆದರ್ಶವಾಗಿ ನೀವು ಬಾಳಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭ ಆಡಂಬರದ ವಿವಾಹಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ಅದ್ಧೂರಿ ಮದುವೆ ಮಾಡಲು ಸಾಲ ಮಾಡಿ ಬೀದಿ ಪಾಲಾ ಗುವ ಬದಲು, ಹಾಸಿಗೆಯಿದ್ದಷ್ಟೇ ಕಾಲು ಚಾಚಿ. ಈ ಭಾಗದಲ್ಲಿ ಸಾಮೂಹಿಕ ವಿವಾಹ ಸಾಕಷ್ಟು ನಡೆಯುತ್ತವೆ. ಇವುಗಳಲ್ಲಿ ಪಾಲ್ಗೊಳ್ಳಿ ಎನ್ನುವ ಮೂಲಕ ಆಂಗ್ಲ ಗಾದೆಯೊಂದನ್ನು ಹೇಳುವ ಮೂಲಕ ಆಡಂಬರದ ಮದುವೆಯನ್ನು ಖಂಡಿಸಿದರು.

ಯಾರನ್ನಾದರೂ ಬಿಟ್ಟ್ನಾ..!
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಆರಂಭಕ್ಕೂ ಮುನ್ನ ವೇದಿಕೆಯ ಮೇಲಿದ್ದ ಪ್ರಮುಖರ ಹೆಸರನ್ನು ಪ್ರಸ್ತಾಪಿಸಿದರು. ಬಳಿಕ ಒಂದರೆಕ್ಷಣ ಕಣ್ಣಾಡಿಸಿ ಯಾರನ್ನಾ ದರೂ ಬಿಟ್ಟ್ನಾ ಎಂದು ಸಂಘಟಕರನ್ನು ಪ್ರಶ್ನಿಸಿದರು.

ಆಗ ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ ಹೆಸರನ್ನು ಹೇಳುತ್ತಿದ್ದಂತೆ, ನೀವು ಹಿಂದಕ್ಕೆ ಕೂರಿಸಿದ್ದೀರಿ, ಕಾಣಲಿಲ್ಲ ಎಂದು ನಗೆ ಚಟಾಕಿ ಹಾರಿಸಿದರು. ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ್ದ ದೇವರಹಿಪ್ಪರಗಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಹೆಸರನ್ನು ಮುಖ್ಯಮಂತ್ರಿ ಪ್ರಸ್ತಾಪಿಸಿದ್ದು ವಿಶೇಷವಾಗಿತ್ತು.

ಭಾಷಣದಲ್ಲಿ ಬಸವಾದಿ ಶರಣರ ಹಲವು ವಚನಗಳನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಈ ನಡುವೆ ವಚನ ಹೇಳೋಕೆ ಸ್ವಾಮೀಜಿಗಳು ಇದ್ದಾರೆ ಎಂದರೂ, ವಚನಗಳ ಪಠಣ ಮುಂದುವರೆದಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಹ ಮುಖ್ಯಮಂತ್ರಿಗಳಿಗೆ ಕೆಲ ವಚನ ಬರೆದು ಕೊಟ್ಟಿದ್ದು ಗಮನ ಸೆಳೆಯಿತು.

ಸಚಿವರ ಹೆಸರು ಹೇಳದ ಶಾಸಕ!

ಪ್ರಾಸ್ತಾವಿಕವಾಗಿ ಮಾತನಾಡಿದ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ, ಶಾಸಕ ಶಿವಾನಂದ ಪಾಟೀಲ ವೇದಿಕೆ ಯಲ್ಲಿದ್ದ ಎಲ್ಲ ಶಾಸಕರ ಹೆಸರು ಹೇಳದೆ ಸ್ವಾಗತಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸ್ವಾಗತಿಸುವ ಸಂದರ್ಭ ಈ ಸಮಾರಂಭಕ್ಕೆ ದೂರದ ಬೆಂಗಳೂರಿನಿಂದ ಬಂದಿ ರುವ ಜಿಲ್ಲಾ ಉಸ್ತುವಾರಿ ಸಚಿವರಿಗೂ ಸ್ವಾಗತ ಎನ್ನುವ ಮೂಲಕ, ಸಚಿವರ ವಿರುದ್ಧದ ತಮ್ಮ ಮುನಿಸು ಪ್ರದರ್ಶಿಸಿದರು.

ಇದಕ್ಕೆ ಪ್ರತಿಯಾಗಿ ಎಂ.ಬಿ. ಪಾಟೀಲ ತಮ್ಮ ಭಾಷಣದಲ್ಲಿ ಎಲ್ಲರ ಹೆಸರು ಪ್ರಸ್ತಾಪಿಸಿದರು. ಜತೆಗೆ ತಮ್ಮ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸಿದ್ದ ನಡಹಳ್ಳಿ ಹೆಸರನ್ನು ಪ್ರಸ್ತಾಪಿಸಿದ್ದು ವಿಶೇಷವಾಗಿತ್ತು.

*

ಅಣ್ಣ ಬಸವಣ್ಣನ ಅನುಯಾಯಿ ನಾನು. ಸಮಾನತೆ ಬಯಸುವ ವರ ಅನುಯಾಯಿ ನಾನು. ಅನುಭವ ಮಂಟಪದಲ್ಲಿನ ಸಮಾನತೆ ಜಗತ್ತಿನ ಎಲ್ಲೆಡೆ ಬರಲಿ
ಸಿದ್ದರಾಮಯ್ಯ
ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT