ಮುನವಳ್ಳಿ

ಕಳಪೆ ಸಸಿ ಆರೋಪ: ರೈತರ ಪ್ರತಿಭಟನೆ

ಪಟ್ಟಣದ ನರ್ಸರಿ ಯಿಂದ ಕಳಪೆ ಬದನೆ ಸಸಿ ವಿತರಿಸಿದ್ದರಿಂದ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತರು ಗುರುವಾರ ಪ್ರತಿಭಟನೆ ನಡೆಸಿದರು.

ಮುನವಳ್ಳಿ: ಪಟ್ಟಣದ ನರ್ಸರಿ ಯಿಂದ ಕಳಪೆ ಬದನೆ ಸಸಿ ವಿತರಿಸಿ ದ್ದರಿಂದ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತರು ಗುರುವಾರ ಪ್ರತಿಭಟನೆ ನಡೆಸಿದರು.

ಸವದತ್ತಿ ತಾಲ್ಲೂಕಿನ ಯಡ್ರಾಂವಿ ಗ್ರಾಮದ ಹಣಮಂತ ಮಲ್ಲಪ್ಪ ಹಾಸಟ್ಟಿ ಹಾಗೂ ಹೂಲಿಕಟ್ಟಿ ಗ್ರಾಮದ ಪುಂಡಲೀಕ ಮ. ಪಾಟೀಲ 3 ತಿಂಗಳ ಹಿಂದೆ ಮುನವಳ್ಳಿಯ ನರ್ಸರಿಯಿಂದ ಮುಳ್ಳು ಬದನೆ ಸಸಿ ಖರೀದಿಸಿ ಜಮೀನಿನಲ್ಲಿ ನೆಟ್ಟಿದ್ದರು.

ಅವು ಈಗ ಮುಳ್ಳು ಬದನೆಯಾಗದೆ ಮಾಮೂಲಿ ಬದನೆಯಾಗಿದ್ದರಿಂದ ಬೆಳೆ ನಷ್ಟ ಅನುಭವಿಸಿದ್ದಾರೆ ಎಂದು ತಿಳಿಸಿದರು. ಈ ಬಗ್ಗೆ ರೈತರು ಠಾಣೆ ಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ರೈತ ಸಂಘದ ಮುಖಂಡರಾದ ಬಿ.ಎಂ. ಮಳಲಿ, ರಾಘವೇಂದ್ರ ನಾಯಿಕ, ಜೆ.ವಿ. ಅಗಡಿ, ಬಸವರಾಜ ಬಿಜ್ಜೂರ, ಎಂ.ಎಸ್. ಕರಿಗೌಡ್ರ, ಲಕ್ಷ್ಮಣ ಕರಿಕಟ್ಟಿ, ಚಂದ್ರಪ್ಪ ಲಗಮ ನ್ನವರ, ರಾಮಲಿಂಗಪ್ಪ ಜಗದಾಳ, ದುಂಡಪ್ಪ ಕುರುವಿನಕೊಪ್ಪ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಬೂತ್‌ಮಟ್ಟದಲ್ಲಿ ಗೆದ್ದರೆ ವಿಧಾನಸಭೆ ಪ್ರವೇಶಿಸಿದಂತೆ

ಸಂಕೇಶ್ವರ
ಬೂತ್‌ಮಟ್ಟದಲ್ಲಿ ಗೆದ್ದರೆ ವಿಧಾನಸಭೆ ಪ್ರವೇಶಿಸಿದಂತೆ

27 Jul, 2017

ಬೆಳಗಾವಿ
ಪಡಿತರಚೀಟಿ ಪಡೆಯಲು ಪಡಿಪಾಟಲು

‘ಇಲಾಖೆಯ ಕೆಲಸವೇ ಬಹಳಷ್ಟಿರುತ್ತದೆ. ಇದರಿಂದಾಗಿ ಪಡಿತರ ಚೀಟಿಯ ಕೆಲಸವನ್ನೂ ಮಾಡುವುದಕ್ಕೆ ಕಷ್ಟವಾಗುತ್ತದೆ’ ಎನ್ನುವುದು ಗ್ರಾಮ ಲೆಕ್ಕಾಧಿಕಾರಿಗಳ ವಾದವಾಗಿತ್ತು. ಇದರಿಂದಾಗಿ, ಅರ್ಜಿಗಳ ಪರಿಶೀಲನಾ ಕಾರ್ಯ ನನೆಗುದಿಗೆ...

27 Jul, 2017

ಚಿಕ್ಕೋಡಿ
ನೀರಿಗೆ ಆಗ್ರಹಿಸಿ ಕೊಡಗಳ ಪ್ರದರ್ಶನ

ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜು ನಿಯಮಿತವಾಗಿ ಆಗುತ್ತಿಲ್ಲ. ಕಳೆದೊಂದು ವಾರದಿಂದ ತಾಲ್ಲೂಕು ಆಡಳಿತ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲ’

27 Jul, 2017

ಬೈಲಹೊಂಗಲ
‘ಅಧಿಕಾರಿಗಳಿಂದ ಜನಪರ ಕೆಲಸದ ನಿರೀಕ್ಷೆ’

ಶಿಕ್ಷಣ ಇಲಾಖೆಗೆ ಸಂಬಂಧಪಟ್ಟ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ₹ 21ಲಕ್ಷ ಶಿಷ್ಯವೇತನ ದೊರೆತಿಲ್ಲ. ಸಂಬಂಧಪಟ್ಟ ಅಧಿಕಾರಿ ಸರಿಯಾಗಿ ಕರ್ತವ್ಯ ನಿರ್ವಹಿಸದಿದ್ದರಿಂದ ವಿದ್ಯಾರ್ಥಿಗಳು ವೇತನದಿಂದ ವಂಚಿತರಾಗಿದ್ದಾರೆ.

27 Jul, 2017
ನೀರು ಪೂರೈಕೆಗೆ ಆಗ್ರಹಿಸಿ ಗ್ರಾ.ಪಂ.ಗೆ ಮುತ್ತಿಗೆ

ಬೈಲಹೊಂಗಲ
ನೀರು ಪೂರೈಕೆಗೆ ಆಗ್ರಹಿಸಿ ಗ್ರಾ.ಪಂ.ಗೆ ಮುತ್ತಿಗೆ

26 Jul, 2017