, ಅಣು ಶಕ್ತಿಯನ್ನು ಭಾರತ ಶಸ್ತ್ರಾಸ್ತ್ರ ತಯಾರಿಗೆ ಬಳಸುತ್ತಿದೆ: ಪಾಕಿಸ್ತಾನ ಆರೋಪ | ಪ್ರಜಾವಾಣಿ
ಇಸ್ಲಾಮಾಬಾದ್

ಅಣು ಶಕ್ತಿಯನ್ನು ಭಾರತ ಶಸ್ತ್ರಾಸ್ತ್ರ ತಯಾರಿಗೆ ಬಳಸುತ್ತಿದೆ: ಪಾಕಿಸ್ತಾನ ಆರೋಪ

ಶಾಂತಿಯುತ ಉದ್ದೇಶಗಳಿಗಾಗಿ ಖರೀದಿಸುವ ಪರಮಾಣು ಶಕ್ತಿಯನ್ನು ಭಾರತ ಶಸ್ತ್ರಾಸ್ತ್ರ ತಯಾರಿಗೆ ಬಳಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ.

ನಫೀಜ್ ಝಕಾರಿಯಾ

ಇಸ್ಲಾಮಾಬಾದ್: ಶಾಂತಿಯುತ ಉದ್ದೇಶಗಳಿಗಾಗಿ ಖರೀದಿಸುವ ಪರಮಾಣು ಶಕ್ತಿಯನ್ನು ಭಾರತ ಶಸ್ತ್ರಾಸ್ತ್ರ ತಯಾರಿಗೆ ಬಳಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ.

ಪರಮಾಣು ಪೂರೈಕೆದಾರರ ಸಮೂಹದ (ಎನ್‌ಎಸ್‌ಜಿ) ಒಪ್ಪಂದಗಳಿಂದ ವಿನಾಯಿತಿ ಪಡೆದು ಭಾರತವು ಆಮದು ಮಾಡಿಕೊಳ್ಳುವ ಪರಮಾಣು ಇಂಧನ, ಉಪಕರಣ ಮತ್ತು ತಂತ್ರಜ್ಞಾನವನ್ನು ಶಸ್ತ್ರಾಸ್ತ್ರ ತಯಾರಿಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಹಲವು ವರ್ಷಗಳಿಂದ ಪಾಕಿಸ್ತಾನಕ್ಕೆ ಆತಂಕವಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ನಫೀಜ್ ಝಕಾರಿಯಾ ಆರೋಪಿಸಿದ್ದಾರೆ.

‘ಪರಮಾಣು ಶಕ್ತಿಯನನ್ನು ಭಾರತವು ದುರ್ಬಳಕೆ ಮಾಡುತ್ತಿರುವುದು ಅಣ್ವಸ್ತ್ರ ಪ್ರಸರಣ ವಿಷಯಕ್ಕೆ ಸಂಬಂಧಿಸಿ ಮಾತ್ರ ಆತಂಕಕಾರಿಯಲ್ಲ. ದಕ್ಷಿಣ ಏಷ್ಯಾದ ಪ್ರಾದೇಶಿಕ ಭದ್ರತೆ ಹಾಗೂ ಪಾಕಿಸ್ತಾನದ ಭದ್ರತೆಗೂ ಆತಂಕ ತಂಡೊಡ್ಡಿದೆ. ಭಾರತದ ಅಣ್ವಸ್ತ್ರ ಯೋಜನೆ ವಿಶ್ವದಲ್ಲೇ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ’ ಎಂದು ಅವರು ಹೇಳಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಅಟಾರ್ನಿ ಜನರಲ್‌ಗೆ ಟ್ರಂಪ್ ತರಾಟೆ

ವಾಷಿಂಗ್ಟನ್
ಅಟಾರ್ನಿ ಜನರಲ್‌ಗೆ ಟ್ರಂಪ್ ತರಾಟೆ

23 Feb, 2018

ಕಾಬೂಲ್‌
ತಾಲಿಬಾನ್‌ ದಾಳಿ: 8 ಸಾವು

ಕೇಂದ್ರ ಘಜ್ನಿ ಪ್ರಾಂತ್ಯದಲ್ಲಿನ ಪೊಲೀಸ್‌ ಭದ್ರತಾ ಕೇಂದ್ರದ ಮೇಲೆ ದಾಳಿ ನಡೆಸಿದ ತಾಲಿಬಾನ್‌ ಉಗ್ರರು ಎಂಟು ಪೊಲೀಸರನ್ನು ಹತ್ಯೆ ಮಾಡಿದ್ದಾರೆ.

23 Feb, 2018

ಬೀಜಿಂಗ್
ಮಾಧ್ಯಮ ವರದಿ ಅಲ್ಲಗಳೆದ ಚೀನಾ

ಭಾರತದ ಗಡಿಯಲ್ಲಿ ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂಬ ವರದಿಯನ್ನು ಚೀನಾ ಗುರುವಾರ ತಳ್ಳಿಹಾಕಿದೆ.

23 Feb, 2018
‘ರಾಜಕೀಯ ಜೀವನ ಮುಗಿಸಲು ಸಂಚು’

ಇಸ್ಲಾಮಾಬಾದ್‌
‘ರಾಜಕೀಯ ಜೀವನ ಮುಗಿಸಲು ಸಂಚು’

23 Feb, 2018

ಲಂಡನ್
ಭಾರತ ಸಂಜಾತನ ಮೇಲೆ ಜನಾಂಗೀಯ ಹಲ್ಲೆ

ಭಾರತ ಸಂಜಾತ ಸಿಖ್ ವ್ಯಕ್ತಿಯ ಟರ್ಬನ್ ಅನ್ನು ಎಳೆದ ಶ್ವೇತವರ್ಣಿಯನೊಬ್ಬ, ‘ಮುಸ್ಲಿಮರೇ ತೊಲಗಿ’ ಎಂದು ಘೋಷಣೆ ಕೂಗಿದ್ದಾನೆ.

23 Feb, 2018