ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ರಿಕಾದಲ್ಲಿ ಪ್ರಿಯಾಂಕಾ...

Last Updated 19 ಮೇ 2017, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆಯ ಮಕ್ಕಳ ನಿಧಿಯ ರಾಯಾಭಾರಿಯಾಗಿರುವ ಪ್ರಿಯಾಂಕಾ ಚೋಪ್ರಾ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಪ್ರವಾಸ ಮುಗಿಸಿದ್ದಾರೆ. ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ಹಿಂಸೆ, ವ್ಯಾಪಕವಾಗಿ ಹರಡುತ್ತಿರುವ ಏಡ್ಸ್‌ ಕುರಿತು ಜಾಗೃತಿ ಮೂಡಿಸುವುದು ಈ ಪ್ರವಾಸದ ಉದ್ದೇಶ.

ಇಸಿಬಿಂದಿ ಸೇಫ್‌ ಪಾರ್ಕ್‌ಗೆ ಭೇಟಿ ನೀಡಿ ಮಕ್ಕಳೊಂದಿಗೆ ಬೆರೆತು ಮಗುವಿನಂತೆ ಆಡಿದ ಸುಂದರ ಕ್ಷಣಗಳ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ಕಾಪಾಡಲು ಕೆಲಸ ಮಾಡುತ್ತಿರುವ ‘ದ ವಾಲೆಂಟರಿ ಚೈಲ್ಡ್‌ ಅಂಡ್ ಯೂತ್ ಕೇರ್ ವರ್ಕರ್ಸ್‌’ (CYCW) ಮತ್ತು ‘ದ ನ್ಯಾಷನಲ್ ಅಸೋಸಿಯೇಷನ್ ಆಫ್ ಚೈಲ್ಡ್‌ ಅಂಡ್ ಯೂತ್ ಕೇರ್ ವರ್ಕರ್ಸ್‌’ (NACCW) ಸಂಘಟನೆಗಳನ್ನು ಶ್ಲಾಘಿಸಿದ್ದಾರೆ.

‘ಈ ಸಂಸ್ಥೆಗಳು 1.4 ಕೋಟಿ ಮಕ್ಕಳಿಗೆ  ಶೋಷಣೆ ಮುಕ್ತ ಪರಿಸರವನ್ನು ನೀಡಿವೆ. ಇವರ ಕೆಲಸಕ್ಕೆ ನನ್ನದೊಂದು ಸೆಲ್ಯೂಟ್’ ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.

ಆಫ್ರಿಕನ್‌ ಮಕ್ಕಳಿಗೆ ಬಿಂದಿ ಇಟ್ಟು ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿದ್ದಾರೆ. #bindibonding ಎನ್ನುವ ಹ್ಯಾಷ್‌ಟ್ಯಾಗ್‌ನೊಂದಿಗೆ ಹಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಮಕ್ಕಳೊಂದಿಗೆ ಡಾನ್ಸ್‌ ಮಾಡಿರುವ ಚಿತ್ರಗಳೂ ಇವೆ ಎಂದು ಪ್ರತ್ಯೇಕವಾಗಿ ಹೇಳಬೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT