ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹರಕು’ ಜೀನ್ಸ್‌ಗೆ ತೇಪೆ ಹಾಕಿ ...

Last Updated 19 ಮೇ 2017, 19:30 IST
ಅಕ್ಷರ ಗಾತ್ರ

ರಿಪ್ಡ್‌ ಜೀನ್ಸ್‌ ಗೊತ್ತಲ್ಲ, ‘ಹರಕು’  ಜೀನ್ಸ್‌! ಅದು ಮಾರುಕಟ್ಟೆಗೆ ಬಂದ ಹೊಸತರಲ್ಲಿ ಮೆಟ್ರೊ ನಗರಗಳ ಕಾಲೇಜು ಕ್ಯಾಂಪಸ್‌ಗಳಲ್ಲೂ, ಮಾಲ್‌ಗಳಲ್ಲೂ, ಮನರಂಜನಾ ತಾಣಗಳಲ್ಲೂ ಈ ಹರಕು ಪ್ಯಾಂಟುಗಳದ್ದೇ ಕಾರುಬಾರು ಕಾಣಬಹುದಿತ್ತು. ಈಗಲೂ ಅದು ಪೂರ್ತಿ  ಮರೆಯಾಗಿಲ್ಲವೆನ್ನಿ. 
ಆದರೆ ರಿಪ್ಡ್‌ ಜೀನ್ಸ್‌ಗೆ ಈಗ ಫ್ಯಾಷನ್‌  ಲೋಕದಲ್ಲಿ ಒಂದು ಬಡ್ತಿ ಸಿಕ್ಕಿದೆ. ಅದೇ ಜೀನ್ಸ್‌ ಒಳಗೆ ಬಗೆಬಗೆಯ ಟೈಟ್ಸ್‌ ಹಾಗೂ ಲೇಸ್‌ಗಳನ್ನು ಧರಿಸುವುದು, ಫಿಶ್‌ ನೆಟ್, ಚೀತಾ ವಿನ್ಯಾಸದ ಬಟ್ಟೆಗಳಿಂದ ತೇಪೆ ಹಾಕುವುದು ಈಗಿನ ಟ್ರೆಂಡ್‌.

ಅಂತೂ ರಿಪ್ಡ್‌ ಜೀನ್ಸ್‌ ಎನ್ನುವ ಕಾಲು ಕಾಣುವ ತೊಡುಗೆಯ ಬಗ್ಗೆ ಬೈದುಕೊಳ್ಳುತ್ತಿದ್ದವರಿಗೆ ಈಗ ಸ್ವಲ್ಪ ಸಮಾಧಾನವಾಗಬಹುದು. ಅಂತೂ ಇಂತೂ ತೊಡೆ, ಮಂಡಿ, ಕಾಲು ಮುಚ್ಚಿಕೊಂಡರಲ್ಲ ಎಂದು ನಿಟ್ಟುಸಿರು ಬಿಡಬಹುದು.

ರಿಪ್ಡ್‌ ಜೀನ್ಸ್‌ನಲ್ಲಿ ಮತ್ತೊಂದು ಬಗೆಯ ಪ್ರಯೋಗವೂ ನಡೆದಿದೆ. ಹರಕು ಪ್ಯಾಂಟ್‌ನೊಳಗೆ ಸ್ಯಾಟಿನ್‌, ಪಾಲಿಯೆಸ್ಟರ್‌ನಂತಹ ಹೊಳೆಯುವ ಬಣ್ಣದ ಟೈಟ್ಸ್‌ ಧರಿಸಲಾಗುತ್ತದೆ! ಫ್ಯಾಷನ್‌ ಜಗತ್ತು ವಿಸ್ತರಿಸಿಕೊಳ್ಳುವುದೇ ಹೀಗೆ ತಾನೆ?

ಸಾಮಾನ್ಯವಾಗಿ ಆಕಾಶ ನೀಲಿ ಜೀನ್ಸ್‌ ಒಳಗೆ ಕಡುಗಪ್ಪು ಬಣ್ಣದ ಸ್ಯಾಟಿನ್‌ ಟೈಟ್ಸ್‌  ಧರಿಸುವುದು ಹೆಚ್ಚು ಆಕರ್ಷಕ ನೋಟ ನೀಡಬಲ್ಲದು.  ಆದರೆ ದೊಡ್ಡ ದೊಡ್ಡ ರಂಧ್ರಗಳಿರುವ ಜೀನ್ಸ್‌ಗಳಲ್ಲಿ ಈ ಕಾಂಬಿನೇಷನ್‌ ಬೇಡ.  ಸೀಳಿದಂತಿರುವ ಜೀನ್ಸ್‌ ಜೊತೆಗೆ ಈ ಟೈಟ್ಸ್‌ ಸೂಕ್ತ.

ಆದರೆ ಚೀತಾ ಪ್ರಿಂಟ್‌ (leopard print) ಇರುವ ಟೈಟ್ಸ್‌ ಧರಿಸುವಾಗ ಹೆಚ್ಚೇ ಜಾಗರೂಕರಾಗಿರಬೇಕು. ಎಲ್ಲಾ ಋತುವಿಗೂ ಹೊಂದುವ ಗುಣವಿರುವ ಎನಿಮಲ್‌ ಪ್ರಿಂಟ್‌ ನಿಮ್ಮ ವ್ಯಕ್ತಿತ್ವಕ್ಕೆ ತಮಾಷೆಯ ನೋಟ ನೀಡುವುದರಿಂದ ಅವು ಕಾಲೇಜು ಹುಡುಗಿಯರಿಗೆ ಸೂಕ್ತ. ನಡುವಯಸ್ಸಿನ ಗಾಂಭೀರ್ಯವನ್ನು ಈ ಪ್ರಿಂಟ್‌ ಹಿಡಿದಿಡಲಾರದು. ಆದರೂ ಎನಿಮಲ್‌ ಪ್ರಿಂಟ್‌ನ ಟೈಟ್ಸ್‌ ಜೊತೆಗೆ ಅವಕ್ಕೆ ಹೊಂದುವ ಬೂಟು, ಬ್ಯಾಗು ಹಾಗೂ ಕೋಟನ್ನು ಧರಿಸಿದರೆ ಒಟ್ಟಾರೆ ನೋಟಕ್ಕೆ ಭಿನ್ನ ಆಯಾಮ ದಕ್ಕುತ್ತದೆ.

ಅಂದ ಹಾಗೆ ಈಗ ಹೆಚ್ಚು ಚಾಲ್ತಿಯಲ್ಲಿರುವುದು ಪಿಂಕ್‌ ಟೈಟ್ಸ್‌.  ಅವರವರ ಆಸಕ್ತಿ, ಅಭಿರುಚಿಗೆ ತಕ್ಕಂತೆ ತಿಳಿ ಹಾಗೂ ಗಾಢ ಬಣ್ಣದ ಗುಲಾಬಿ ಟೈಟ್ಸ್‌ಗಳನ್ನು ರಿಪ್ಡ್‌ ಜೀನ್ಸ್‌ ಒಳಗೆ ಧರಿಸುವುದನ್ನು ಬಹಳ ಮಂದಿ ಇಷ್ಟಪಡುತ್ತಾರೆ. ಗುಲಾಬಿ ಬಣ್ಣ ಇಷ್ಟಪಡದೇ ಇರುವವರು ಹಸಿರು, ಹಳದಿ, ಕಿತ್ತಳೆ ಬಣ್ಣ ಸೇರಿದಂತೆ ಯಾವುದಾದರೂ ಗಾಢ ಬಣ್ಣದ ಟೈಟ್ಸ್‌ ಹೊಂದಿಸಿಕೊಳ್ಳಬಹುದು.

ಈ ಹಿಂದೆ ಎಂದೂ ರಿಪ್ಡ್‌ ಜೀನ್ಸ್‌ ಧರಿಸದೇ ಇದ್ದವರೂ ಈ ಟೈಟ್ಸ್‌ ಹಾಗೂ ಲೇಸ್‌ಗಳ ಜೊತೆಗೆ ಅವುಗಳನ್ನು ಧರಿಸುವಂತಾಗಿದ್ದಾರೆ ಎನ್ನುವುದು ವಿಶೇಷ. ಅಂದಹಾಗೆ ಸ್ಯಾಟಿನ್‌ ಹಾಗೂ ಪಾಲಿಯೆಸ್ಟರ್‌ನಂತಹ ಟೈಟ್ಸ್‌ ಚಳಿಗಾಲಕ್ಕೆ ಸೂಕ್ತವಾದರೆ, ಈ ಬಿಸಿಲಿನ ಬೇಗೆಗೆ ತೆಳುವಾದ ಲೇಸ್‌ನಂತಹ ಟೈಟ್ಸ್‌ ಹೊಂದಿಸಿಕೊಳ್ಳಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT