ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತರಣ

Last Updated 19 ಮೇ 2017, 20:48 IST
ಅಕ್ಷರ ಗಾತ್ರ

ಸರ್ಕಾರ ‘ಪಾತಾಳಗಂಗೆ’ಗೆ ಕನ್ನ ಹಾಕಲು ಹೊರಟಿರುವ ವಿಚಾರ ಬಹಿರಂಗವಾದಾಗಿನಿಂದ ನಾಡಿನ ಒಂದಿಲ್ಲೊಂದು ಕಡೆ ‘ಆಕಾಶಗಂಗೆ’ಯ ಅವತರಣವಾಗುತ್ತಲೇ ಇದೆ. ‘ಕತ್ತೆತ್ತಿ  ಮೇಲೆ ನೋಡಿ ಸ್ವಾಮೀ, ನಾನಿಲ್ಲಿದ್ದೇನೆ. ನಿಮ್ಮ ಪಾದದ ಬಳಿಯೇ ಬರ್ತಿದ್ದೇನೆ. ಸಾಧ್ಯವಾದರೆ ನನ್ನನ್ನು ಹಿಡಿದಿಟ್ಟುಕೊಳ್ಳಿ’ ಎಂದು ಹೇಳುತ್ತಿದೆ.

ಕ್ಷುದ್ರಜಂತುಗಳು, ರಾಕ್ಷಸರೆಲ್ಲ ಇರುವುದು ಪಾತಾಳದಲ್ಲಿ, ದೇವತೆಗಳಿರುವುದು ಆಕಾಶದಲ್ಲಿ ಎಂಬುದು ಭಾರತೀಯರ ನಂಬಿಕೆ. ಸರ್ಕಾರ ಪಾತಾಳಕ್ಕೆ ಕೈ ಹಾಕಿದರೆ ಆ ಜಂತುಗಳು ಕಚ್ಚಿಯಾವು, ರಾಕ್ಷಸರೇ ಎದ್ದು ಬಂದಾರು!

ಜನಸಾಮಾನ್ಯರಿಗೆ ಅರ್ಥವಾಗುವ  ಈ ವಿಚಾರ ಸರ್ಕಾರಕ್ಕೇಕೆ ಅರ್ಥವಾಗುವುದಿಲ್ಲ? ಸರಳ, ಸುಲಭವಾದದ್ದು ಆಡಳಿತಾರೂಢರಿಗೇಕೆ ಬೇಕಿಲ್ಲ? ಬೃಹತ್ ಯೋಜನೆಗಳೇ ಸರ್ಕಾರಕ್ಕೆ ಹೆಸರು ತಂದುಕೊಡುತ್ತವೆಯೇ? ಮುಂಗಾರು ಇರಲಿ, ಮುಂಗಾರುಪೂರ್ವ ಮಳೆಯೇ ಇರಲಿ, ಬಂದ ಮಳೆಯನ್ನು ಹಿಡಿದಿಟ್ಟುಕೊಳ್ಳುವುದು ಜಾಣತನ. ಬನ್ನಿ ಹನಿಹನಿಯನ್ನೂ ಹಿಡಿಯೋಣ.
-ವಿಶಾಲಾಕ್ಷಿ ಶರ್ಮಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT