ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಭೇಟಿಯಾದ ಸಚಿನ್‌ ತೆಂಡೂಲ್ಕರ್‌

Last Updated 19 ಮೇ 2017, 20:09 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಕೆಟ್‌ನ ದಂತಕತೆ ಸಚಿನ್‌ ತೆಂಡೂಲ್ಕರ್‌ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಶೀಘ್ರವೇ ತೆರಕಾಣಲಿರುವ ತಮ್ಮ ಜೀವನ ಕುರಿತು ಚಿತ್ರೀಕರಿಸಿರುವ ‘ಸಚಿನ್‌: ಎ ಬಿಲಿಯನ್‌ ಡ್ರೀಮ್ಸ್‌’ ಸಿನಿಮಾ ಕುರಿತು ಚರ್ಚಿಸಿದರು.

ಪತ್ನಿ ಅಂಜಲಿ ಜೊತೆಗೆ ಮೋದಿ ಅವರನ್ನು ಭೇಟಿ ಮಾಡಿರುವ ಛಾಯಾಚಿತ್ರವನ್ನು ಅವರು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ನನ್ನ ಜೀವನಾಧಾರಿತ ಸಿನಿಮಾ ಬಗ್ಗೆ ಮೋದಿ ಅವರಿಗೆ ಸಂಕ್ಷಿಪ್ತವಾಗಿ ವಿವರಿಸಿದೆ. ಜತೆಗೆ, ಅವರ ಆಶೀರ್ವಾದ ಕೂಡ ಪಡೆದೆ’ ಎಂದು ಸಚಿನ್‌ ಛಾಯಾಚಿತ್ರಕ್ಕೆ ಶೀರ್ಷಿಕೆ ಬರೆದಿದ್ದಾರೆ.

‘ಆಡುವವರು ಅರಳುತ್ತಾರೆಂದು’ ಮೋದಿ ಬರೆದಿರುವ ಸಂದೇಶದಿಂದ ಪ್ರೇರಣೆಗೊಂಡಿದ್ದೇನೆ ಎಂದು ಸಚಿನ್‌ ಮತ್ತೊಂದು ಚಿತ್ರಸಹಿತ ಟ್ವೀಟ್‌ ಮಾಡಿದ್ದಾರೆ.

ಕ್ರಿಕೆಟ್‌ ದಿಗ್ಗಜನೊಂದಿಗಿನ ಭೇಟಿ ಬಗ್ಗೆ ಮೋದಿ ಕೂಡ ಟ್ವೀಟ್‌ ಮಾಡಿದ್ದಾರೆ. ‘ಸಚಿನ್‌ ಅವರೊಂದಿಗಿನ ಭೇಟಿ ಅತ್ಯುತ್ತಮವಾಗಿತ್ತು’ ಎಂದಿದ್ದಾರೆ.
ಮೇ 26ರಂದು ವಿಶ್ವದಾದ್ಯಂತ ಸಿನಿಮಾ ತೆರೆಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT