ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿದೆ ಸೊಳ್ಳೆಗಳ ಹಾವಳಿ

Last Updated 20 ಮೇ 2017, 4:28 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಪಟ್ಟಣದ 5ನೇ ವಾರ್ಡ್‌ಗೆ ಸೇರಿದ ನೇತಾಜಿನಗರ ಬಡಾವಣೆ ಪಟ್ಟಣ ಪಂಚಾಯಿತಿಯಿಂದ ನಿರ್ಮಿಸಿರುವ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಕೊಳಚೆ ನೀರು ಹರಿಯದೆ ಭಾರಿ ಸಮಸ್ಯೆ ಉಂಟಾಗಿದೆ ಎಂದು ಬಡಾವಣೆ ನಿವಾಸಿಗಳು ಆರೋಪಿಸಿದ್ದಾರೆ.

ಈ ಬಡಾವಣೆಯಲ್ಲಿ ಚರಂಡಿ ನಿರ್ಮಾಣಕ್ಕೂ ಹಿಂದೆ ನಕಾಶೆಯಲ್ಲಿ ದಾಖಲಾಗಿರುವ ಪ್ರಕಾರ ಇಲ್ಲಿನ ಮನೆಗಳ ಕೊಳಚೆ ನೀರು ‘ಹಗಳು’ ಕಾಲುವೆಯ ಮೂಲಕ ಹರಿದು ನಾಡಿಗರ ಕೆರೆಗೆ ಹೋಗುತ್ತಿತ್ತು. ಪ್ರಸ್ತುತ ಪಟ್ಟಣ ಪಂಚಾಯಿತಿಯಿಂದ ನಿರ್ಮಿಸಿರುವ ಚರಂಡಿಯಿಂದ ನೀರು ಸರಾಗವಾಗಿ ಹರಿಯಲು ಸೂಕ್ತ ವ್ಯವಸ್ಥೆಯಿಲ್ಲದೆ ಬಡಾ ವಣೆಯ ಕೊನೆಯ ಮನೆಯ ಎದುರು ಭಾಗದಲ್ಲಿ ಬಂದು ಸಂಗ್ರಹವಾಗುತ್ತಿದೆ.

ಕೊಳಚೆ ನೀರು ಸಂಗ್ರಹವಾಗಿರುವು ದರಿಂದ ಒಂದು ಕಡೆ ದುರ್ನಾತ, ಇನ್ನೊಂದು ಕಡೆ ಸೊಳ್ಳೆಗಳ ಹಾವಳಿ ವಿಪ ರೀತವಾಗಿ ಹೆಚ್ಚಾಗಿದೆ. ಸಂಜೆ ಮನೆಯ ಬಾಗಿಲು ತೆಗೆಯದ ಸ್ಥಿತಿ ನಿರ್ಮಾಣ ವಾಗಿದೆ. ಕೊಳಚೆ ನೀರು ನಿಂತಿರುವುದ ರಿಂದ ಅಕ್ಕ, ಪಕ್ಕದ ತೋಟದಲ್ಲೂ ಸೊಳ್ಳೆ ಹಾವಳಿ ಹೆಚ್ಚಾಗಿದೆ. ಕೆಲಸ ಮಾಡಲು ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ.

‘ಚರಂಡಿ ನಿರ್ಮಿಸುವ ಸಂದರ್ಭ ದಲ್ಲಿಯೇ ನೀರು ಮುಖ್ಯಕಾಲುವೆಗೆ ಹರಿಯುವ ರೀತಿ ನಿರ್ಮಿಸಬೇಕೆಂದು ಮನವಿ ಮಾಡಲಾಗಿತ್ತು. ಇಂಗುಗುಂಡಿ ನಿರ್ಮಾಣ ಮಾಡಲು ಸಲಹೆ ನೀಡಲಾಗಿತ್ತು. ಆದರೆ, ಇದಕ್ಕೆ ಮನ್ನಣೆ ನೀಡದ ಪಟ್ಟಣ ಪಂಚಾಯಿತಿ ಅಸಮರ್ಪಕವಾಗಿ ಚರಂಡಿ ನಿರ್ಮಾಣ ಮಾಡಿದೆ. ಕಾಲುವೆ ಒತ್ತುವರಿಯಾಗಿ ದ್ದರೂ ಅದನ್ನು ತೆರವು ಮಾಡಲು ಮುಂದಾಗುತ್ತಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ನಾಗೇಂದ್ರ.

‘ಹಲವು ದಿನಗಳಿಂದಲೂ ಸಮಸ್ಯೆ ಬಗೆಹರಿಸುವಂತೆ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೊಳಚೆ ನೀರು ಮನೆಯ ಮುಂಭಾಗದಲ್ಲಿಯೇ ನಿಲ್ಲುವು ದರಿಂದ ನರಕಯಾತನೆ ಅನುಭವಿಸು ವಂತಾಗಿದೆ’ ಎಂದು ಬಡಾವಣೆ ನಿವಾಸಿ ಲೋಕೇಶ್ ದೂರುತ್ತಾರೆ.

ಈ ಬಗ್ಗೆ ‘ಪ್ರಜಾವಾಣಿ ’ ಮುಖ್ಯಾಧಿ ಕಾರಿ ಕುರಿಯಾಕೋಸ್ ಅವರನ್ನು ಸಂಪರ್ಕಿಸಿದಾಗ, ‘ಬಡಾವಣೆಯಲ್ಲಿ ಮೊದಲು ರಸ್ತೆ ಅಭಿವೃದ್ಧಿ ಪಡಿಸಲು ಆದ್ಯತೆ ನೀಡುವ ಬಗ್ಗೆ, ಚರಂಡಿ ನಿರ್ಮಾಣದಿಂದ ಉಂಟಾಗುವ ಸಮಸ್ಯೆ ಬಗ್ಗೆ ನಿವಾಸಿಗಳಿಗೆ ಮನವರಿಕೆ ಮಾಡ ಲಾಗಿತ್ತು. ನೀರು ಸರಾಗವಾಗಿ ಹರಿಯಲು ಅವಕಾಶವಿಲ್ಲದಿರುವು ದರಿಂದ ಸಮಸ್ಯೆ ಉದ್ಭವಿಸಿದೆ. ಸ್ವಚ್ಛತೆ ಕಾಪಾಡಲು ಸೊಳ್ಳೆ ನಿಯಂತ್ರಣ ಔಷಧಿ ಸಿಂಪಡಿಸಲಾಗಿದೆ. ಬೇಲಿಯ ಬದಿ ಕಾಲುವೆ ತೆಗೆದು ಇಂಗುಗುಂಡಿ ನಿರ್ಮಿಸಿ ಸಮಸ್ಯೆ ಬಗೆಹರಿಸಲಾಗುವುದು’ ಎಂದರು.

5ನೇ ವಾರ್ಡ್‌ನ ಸದಸ್ಯೆ ಸಮೀರಾ ನಹೀಂ ಅವರನ್ನು ‘ಪ್ರಜಾವಾಣಿ ’ ದೂರ ವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿದರೂ ಕರೆಯನ್ನು ಸ್ವೀಕರಿಸಲಿಲ್ಲ.
ಕೊಳಚೆ ನೀರು ಸಂಗ್ರಹದಿಂದ ರೋಗಗಳು ಉಲ್ಬಣಗೊಳ್ಳುವ ಮೊದಲು ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಬಡಾವಣೆ ನಿವಾಸಿಗಳ ಆಗ್ರಹವಾಗಿದೆ.

**

ಚರಂಡಿ ನಿರ್ಮಾಣ ಮಾಡುವಾಗ ಆಕ್ಷೇಪಣೆ ಸಲ್ಲಿಸದೆ, ನಂತರ ನೀರು ಹರಿಯುವ ಪಥ ಬದಲಾಯಿಸಲು ಒತ್ತಾಯಿಸುತ್ತಿರು ವುದರಿಂದ ಸಮಸ್ಯೆ ಉದ್ಭವಿಸಿದೆ
-ಆರ್.ರಾಜಶೇಖರ್,
ಪಟ್ಟಣ ಪಂಚಾಯಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT