ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.54 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ

Last Updated 20 ಮೇ 2017, 4:45 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೆಲ ದಿನಗಳಿಂದ ಮಳೆ ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಪ್ರಸ್ತಕ ವರ್ಷ 1.52 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಇದ್ದು, ಈ ಪೈಕಿ ಈವರೆಗೆ 7,900 ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿದೆ.

ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಈವರೆಗೆ ವಾಡಿಕೆಗಿಂತ ತುಸು ಹೆಚ್ಚು ಮಳೆ ಯಾಗಿದೆ. ವಾಡಿಕೆ ವಾರ್ಷಿಕ ಮಳೆ (ಮೇ 19ರವರೆಗೆ) ಸರಾಸರಿ 138.9 ಮಿ.ಮೀ ಆಗಿದ್ದು, ಈತನಕ 146 ಮಿ.ಮೀ ಬಿದ್ದಿದೆ. ಒಟ್ಟಾರೆ ಶೇ 105.8 ಮಳೆಯಾಗಿದೆ.

ಭರಣಿ, ರೋಹಿಣಿ ಮಳೆ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಚಿಕ್ಕ ಮಗಳೂರು ಜಿಲ್ಲೆಯ ಲಕ್ಯಾ, ಕಸಬಾ, ತರೀಕೆರೆ  ತಾಲ್ಲೂಕಿನ ಶಿವನಿ ಹೋಬಳಿ ಗಳಲ್ಲಿ ಕಡೂರು ತಾಲ್ಲೂಕಿನಲ್ಲಿ ಬಿತ್ತನೆ ಚಟುವಟಿಕೆಗಳು ಆರಂಭವಾಗಿದೆ. ಎಳ್ಳು, ಅಲಸಂದೆ, ಶೇಂಗಾ, ಹೆಸರು ಮೊದ ಲಾದ ದ್ವಿದಳ ಧಾನ್ಯಗಳ ಬಿತ್ತನೆ ನಡೆ ದಿದೆ. ಕೆಲವೆಡೆ ಹೊಲ, ಗದ್ದೆಗಳನ್ನು ಹದ ಗೊಳಿಸುವ ಕಾರ್ಯ ಚುರುಕುಗೊಂಡಿದೆ.

‘ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ದಾಸ್ತಾನು ಮಾಡಿದ್ದ 3.5 ಸಾವಿರ ಕ್ವಿಂಟಲ್‌ನಲ್ಲಿ ಈಗಾಗಲೇ ಎರಡು ಸಾವಿರ ಕ್ವಿಂಟಲ್‌ ವಿತರಣೆಯಾಗಿದೆ. ಇದರಲ್ಲಿ 1.5 ಸಾವಿರ ಕ್ವಿಂಟಲ್‌ ಶೇಂಗಾ ಬೀಜ ವಿತರಿಸಲಾಗಿದೆ’ ಎಂದು ಕೃಷಿ ಅಧಿ ಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಬಿತ್ತನೆ ಬೀಜದ ಕೊರತೆಯಾಗ ದಂತೆ ಕ್ರಮ ವಹಿಸಲಾಗಿದೆ. ಕಾಲಕಾಲಕ್ಕೆ ಮಳೆ ಬಿದ್ದರೆ ಮೇ ಅಂತ್ಯ ಜೂನ್‌ ಹೊತ್ತಿಗೆ ಜೋಳ, ಮುಸುಕಿನ ಜೋಳ, ಸೂರ್ಯಕಾಂತಿ ಸೇರಿದಂತೆ ಎಲ್ಲ ಬಿತ್ತನೆ ನಡೆಯಲಿದೆ. ಶಿವನಿ, ಅಜ್ಜಂಪುರ, ಬೀರೂರು ಸುತ್ತಮುತ್ತಲಿನ ಊರುಗಳಲ್ಲಿ ಈರುಳ್ಳಿ ಹಾಕುವ ಕಾರ್ಯ ಚುರುಕು ಗೊಳ್ಳಲಿದೆ’ ಎಂದು ಅವರು ಹೇಳಿದ್ದಾರೆ.

ವರುಣ ಕೃಪೆಯಿಂದಾಗಿ ಕೆಲವು ಕೆರೆಕಟ್ಟೆಗಳಲ್ಲಿ ನೀರು ಬಂದಿದೆ. ಸತತ ಮೂರು ವರ್ಷಗಳ ಬರಗಾಲದಿಂದಾಗಿ ತತ್ತರಿಸಿದ ಬೆಳೆಗಾರರಿಗೆ ಚೇತರಿಸಿ ಕೊಳ್ಳುವ ಆಶಾಭಾವ ಮೂಡಿದೆ. ಅಡಿಕೆ, ತೆಂಗು, ರಬ್ಬರ್‌, ಕಾಫಿ, ಕಾಳುಮೆಣಸು ತೋಟಗಳಲ್ಲಿ ಕೆಲಸಗಳು ಚುರುಕು ಗೊಂಡಿವೆ. ಎನ್‌.ಆರ್‌.ಪುರ, ಮೂಡಿಗೆರೆ ತಾಲ್ಲೂಕುಗಳಲ್ಲಿ ಗದ್ದೆಗಳನ್ನು ಅಣಿಗೊಳಿಸುವತ್ತ ಅನ್ನದಾತರ ಚಿತ್ತ ಹರಿದಿದೆ.

‘ಈ ವರ್ಷ ಈಗಾಗಲೇ ಮೂರ್‌್ನಾಲ್ಕು ದಿನ ಮಳೆ ಬಿದ್ದಿದೆ. ಹೊಲ ಹದಗೊಳಿಸಿ ಶೇಂಗಾ ಬಿತ್ತಿದ್ದೇನೆ. ಈ ವರ್ಷ ಮಳೆ ಗಾಲ ಚೆನ್ನಾಗಿ ನಡೆಸುತ್ತದೆ ಎಂಬ ನಂಬಿಕೆ ಇದೆ. ಇನ್ನೊಂದು ಮಳೆ ಬಿದ್ದರೆ ಈರುಳ್ಳಿ ಬೀಜ ಹಾಕುತ್ತೇವೆ. ಬೀಜ, ಗೊಬ್ಬರ ಖರೀದಿಸಿ ಬಿತ್ತನೆಗೆ ಸಿದ್ಧರಾಗಿ ದ್ದೇವೆ. ಕೆರೆಕಟ್ಟೆಗಳು ತುಂಬಿ, ಅಂತರ್ಜಲ ಹೆಚ್ಚಿದರೆ ಈ ವರ್ಷ ಅಡಿಕೆ, ತೆಂಗಿನ ತೋಟಗಳನ್ನು ಉಳಿಸಿಕೊಳ್ಳಲು ಸಾಧ್ಯ’ ಶಿವನಿಯ ರೈತ ಎಸ್‌.ವಿ.ಸದಾಶಿವ ಹೇಳುತ್ತಾರೆ.

ಬಿತ್ತನೆ ನಡೆದಿರುವ ಹೊಲಗಳಲ್ಲಿ ಗೊಬ್ಬರ ಹಾಕುವ ಕೆಲಸ ಶುರುವಾಗಿವೆ. ಈ ಬಾರಿ ಮುಂಗಾರು ಮುಂಚೆಯೇ ಶುರುವಾಗಿದ್ದು ಮಲೆನಾಡಿನ ರೈತರು ಹುರುಪಿನಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT