ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಶೋಧನೆಯಿಂದ ದೇಶದ ಆರ್ಥಿಕ ಪ್ರಗತಿ’

Last Updated 20 ಮೇ 2017, 5:31 IST
ಅಕ್ಷರ ಗಾತ್ರ

ಗದಗ: ‘ದಿನದಿಂದ ದಿನಕ್ಕೆ ಬೆಳೆಯುತ್ತಿ ರುವ ವಿಜ್ಞಾನ, ತಂತ್ರಜ್ಞಾನವು ಜೀವನದ ಭಾಗವಾಗಿ ಹೊರ ಹೊಮ್ಮು ತ್ತಿದೆ. ದೇಶದ ಅಭಿವೃದ್ಧಿಗೆ ಪೂರಕವಾದ ತಂತ್ರಜ್ಞಾನ ಬಳಸಿದರೆ, ಜನರ ಜೀವನ ಮಟ್ಟ ಸುಧಾರಿಸುತ್ತದೆ’ ಎಂದು ಬೆಂಗ ಳೂರಿನ ಇನೋವೇಷನ್ ಪ್ರಮೋಷನ್ ಜೀಝ್‌ನ ತಾಂತ್ರಿಕ ವಿಭಾಗದ ಮುಖ್ಯಸ್ಥ ಎಚ್.ಎನ್.ಶಶಿಧರ್ ಹೇಳಿದರು.

ನಗರದ ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಶುಕ್ರವಾರ ನಡೆದ ರಾಜ್ಯ ಮಟ್ಟದ ಐ-ಟೆಕ್ ಪ್ರೊ–20-17ರ ವಿಜ್ಞಾನ ಮಾದರಿ ಗಳ ಪ್ರದರ್ಶನದ ಉದ್ಘಾಟನಾ ಸಮಾ ರಂಭದಲ್ಲಿ ಅವರು ಮಾತನಾಡಿದರು.

‘ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಸಣ್ಣ ಕೈಗಾರಿಕೆಗಳ ಅಭಿವೃದ್ಧಿಯ ಹಿನ್ನೆಲೆ ಯಲ್ಲಿ ಸಂಶೋಧನೆಗಳನ್ನು ಕೈಗೊಳ್ಳ ಬೇಕು’ ಎಂದರು. ‘ವಿದ್ಯಾರ್ಥಿಗಳು ಮೇಕ್ ಇನ್ ಇಂಡಿಯಾದ ಗುರಿ ಹೊಂದಬೇಕು.

ಪ್ರಚಲಿತ ತಂತ್ರಜ್ಞಾನ, -ಹೊಸ ವಿಚಾರ, ಆಲೋಚನೆಗಳನ್ನು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಜತೆಗೆ ಉತ್ತಮ ಕೌಶಲ, ಒಳ್ಳೆಯ ಹವ್ಯಾಸಗಳನ್ನು ರೂಢಿ ಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಎಂ.ಎಂ.ಅವಟಿ ಮಾತ ನಾಡಿದರು. ಪ್ರದರ್ಶನದಲ್ಲಿ ನೀಡಶೋಸಿ ಕಾಲೇಜು (ಪ್ರಥಮ) ಹಾಗೂ ತೋಂಟದಾರ್ಯ ಎಂಜಿನಿಯ ರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು (ದ್ವಿತೀಯ, ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ.

ನಿರ್ಣಾಯಕರಾಗಿ ಡಾ.ಡಿ.ಜಿ. ಸಾಹು ಕಾರ, ಡಾ.ಮನೋಜ್ ಚಿತವಾಡಗಿ, ಡಾ.ಪ್ರಶಾಂತ ರೇವಣಕರ, ಪ್ರೊ.ಅಜಯ್ ಕಟಗೇರಿ, ಉಪ ಪ್ರಾಚಾರ್ಯ ಡಾ.ಈರಣ್ಣ ಕೋರಚ ಗಾಂವ, ಸಂಯೋಜಕ ಪ್ರೊ.ಸುಜಾತಾ ಭಾವಿಕಟ್ಟಿ ಪಾಲ್ಗೊಂಡಿದ್ದರು.

ವೆಂಕಟೇಶ ಭಾಂಡಗೆ, ಡಾ.ವಿ.ಟಿ. ಮಾಗಳದ, ಡಾ.ಜಿ.ಡಿ. ರೇವಣಕರ್, ಡಾ.ಕೆ.ಲೋಕೇಶ, ವಿಜಯಕುಮಾರ ಮಾಲಗಿತ್ತಿ, ಪ್ರವೀಣ ಜ್ಯೋತಿ, ನಿಂಗಪ್ಪ ಪೂಜಾರ, ಐ.ಎಸ್.ಪಾಟೀಲ್, ಪ್ರಸನ್ನ ನಾಡಗೌಡರ, ಪ್ರವೀಣ ಪಾಟೀಲ, ಚಂದ್ರಕಾಂತ ಹಟ್ಟಿ, ಮಂಜುನಾಥ ಕೆ, ಸದಾನಂದ ಪಿ, ರಮೇಶ ಬಿ, ಸಂತೋಷ ಕಂದಗಲ್, ಜಿ.ಡಿ.ಮಲ್ಲಿಕಾರ್ಜುನ್, ಆರ್.ವಿ.ಕಡಿ, ಬಿ.ಕೆ.ಬೇಲೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT