ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ ವಹಿವಾಟು ಸ್ಥಿರ

Last Updated 20 ಮೇ 2017, 19:30 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಖರೀದಿ ಚಟುವಟಿಕೆ ಉತ್ತಮವಾಗಿದೆ. ಇದರಿಂದ ಸತತ ಎರಡನೇ ವಾರವೂ ವಹಿವಾಟು ಸ್ಥಿರವಾಗಿತ್ತು.

ತ್ವರಿತವಾಗಿ ಮಾರಾಟವಾಗುವ ಗ್ರಾಹಕ ವಸ್ತುಗಳು (ಎಫ್‌ಎಂಸಿಜಿ) ಮತ್ತು ಲೋಹದ ಉತ್ಪನ್ನಗಳು ವಿಭಾಗಗಳಲ್ಲಿ ಹೆಚ್ಚಿನ ಖರೀದಿ ಚಟುವಟಿಕೆ ನಡೆಯಿತು.

ಅಮೆರಿಕದಲ್ಲಿ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಬ್ರೆಜಿಲ್‌ನಂತಹ ದೇಶಗಳಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ಸೂಚ್ಯಂಕಗಳ ಏರಿಕೆಯನ್ನು ತುಸು ತಗ್ಗಿಸಿವೆ ಎಂದು ದಲ್ಲಾಳಿಗಳು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 30,287ರ ಗರಿಷ್ಠ ಮಟ್ಟದಲ್ಲಿ ವಹಿವಾಟು ಆರಂಭಿಸಿತು. ಮಧ್ಯಂತರ ವಹಿವಾಟಿನಲ್ಲಿಯೇ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 30,712 ಅಂಶಗಳನ್ನು ತಲುಪಿತು. ಒಟ್ಟಾರೆ ವಾರದಲ್ಲಿ 277 ಅಂಶ ಹೆಚ್ಚಾಗಿ 30,465 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ, ವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 9,533 ಅಂಶಗಳನ್ನು ತಲುಪಿ, 27 ಅಂಶ ಏರಿಕೆಯೊಂದಿಗೆ 9,428 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT