ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಪೊರೇಶನ್‌ ಬ್ಯಾಂಕ್‌ ನಿವ್ವಳ ಲಾಭ ₹561 ಕೋಟಿ

Last Updated 20 ಮೇ 2017, 19:30 IST
ಅಕ್ಷರ ಗಾತ್ರ

ಮಂಗಳೂರು: ಕಾರ್ಪೊರೇಶನ್ ಬ್ಯಾಂಕ್‌ ಕಳೆದ ಹಣಕಾಸು ವರ್ಷದಲ್ಲಿ ₹ 561.21 ಕೋಟಿ ನಿವ್ವಳ ಲಾಭ ಗಳಿಸಿದೆ. ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಜೈಕುಮಾರ್ ಗರ್ಗ್ ಶನಿವಾರ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ವಾರ್ಷಿಕ ವರದಿ ಬಿಡುಗಡೆ ಮಾಡಿ ಈ ವಿಷಯ ತಿಳಿಸಿದರು.

2015-16ನೇ ಸಾಲಿನಲ್ಲಿ ಬ್ಯಾಂಕ್ ₹506.48 ಕೋಟಿ ನಷ್ಟ ಅನುಭವಿಸಿತ್ತು. ಈ ಬಾರಿ ಬ್ಯಾಂಕ್ ಶೇ 210. 81ರಷ್ಟು ಪ್ರಗತಿಯೊಂದಿಗೆ ಉತ್ತಮ ಸಾಧನೆ ಮಾಡಿದೆ. ಸಾಲ ವಸೂಲಾತಿ ಹಾಗೂ ಸಾಲ ನೀಡಿಕೆಯಲ್ಲಿ ಶೇ 0.02 ರಷ್ಟು ಪ್ರಗತಿ ಕಂಡಿದೆ.

ಬ್ಯಾಂಕ್‌ನ ಒಟ್ಟು ವ್ಯವಹಾರ ಶೇ 4.46 ರಷ್ಟು ಪ್ರಗತಿಯೊಂದಿಗೆ ₹3.60 ಲಕ್ಷ ಕೋಟಿಗೆ ಹೆಚ್ಚಿದೆ. ಠೇವಣಿಯ ಪ್ರಮಾಣ ಶೇ 7.50 ಪ್ರಗತಿಯೊಂದಿಗೆ ₹ 2. 20 ಲಕ್ಷ ಕೋಟಿಗೆ ಏರಿಕೆ ಆಗಿದೆ ಎಂದರು.

ಬ್ಯಾಂಕ್‌ನ ಬಡ್ಡಿ ಆದಾಯವು ₹ 19, 471 ಕೋಟಿ, ಬಡ್ಡಿಯೇತರ ಆದಾಯವು ₹3,090  ಕೋಟಿಗೆ ಹೆಚ್ಚಳವಾಗಿದೆ. ಒಟ್ಟು ಆದಾಯ ಶೇ 6.69 ರಷ್ಟು ಪ್ರಗತಿಯೊಂದಿಗೆ ₹ 22,561 ಕೋಟಿಗೆ ಹೆಚ್ಚಳ ಕಂಡಿದೆ ಎಂದು ಅವರು ತಿಳಿಸಿದರು. ನಿರ್ವಹಣೆ ಲಾಭ ಶೇ 43.44  ಪ್ರಗತಿಯೊಂದಿಗೆ ₹4.439 ಕೋಟಿಗೆ ಬಂದು ತಲುಪಿದೆ ಎಂದು ತಿಳಿಸಿದರು.

ಆದ್ಯತಾ  ವಲಯಕ್ಕೆ ಕಳೆದ ಬಾರಿಗಿಂತ ಈ ಬಾರಿ ₹1,467 ಕೋಟಿ ಹೆಚ್ಚು ಸಾಲ ನೀಡಲಾಗಿದೆ. ಒಟ್ಟಾರೆ ₹67,657 ಕೋಟಿ  ಸಾಲ ನೀಡಲಾಗಿದೆ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ವಲಯಕ್ಕೆ ₹28,798 ಕೋಟಿ  ನೀಡಲಾಗಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ 90,864 ಮಂದಿಗೆ ₹1,557 ಕೋಟಿ ಸಾಲ ನೀಡಲಾಗಿದೆ ಎಂದು ಅವರು ತಿಳಿಸಿದರು.

ಬ್ಯಾಂಕ್‌ನ ಮಹಾ ಪ್ರಬಂಧಕ ಎಂ.ಬಿ.ಗಣೇಶ್ ಬ್ಯಾಂಕ್‌ನ ವಾರ್ಷಿಕ ವರದಿ ಓದಿದರು.  ಕಾರ್ಯನಿರ್ವಾಹಕ ನಿರ್ದೇಶಕ ಜಿ.ಎಂ.ಭಗತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT