ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಕೈ ಮಿಲಾಯಿಸಿದ ಅಧಿಕಾರಿಗಳು

Last Updated 20 ಮೇ 2017, 19:30 IST
ಅಕ್ಷರ ಗಾತ್ರ
ADVERTISEMENT

ಧಾರವಾಡ: ಜಿಲ್ಲಾ ಪಂಚಾಯ್ತಿ ಉಪ ಕಾರ್ಯ ದರ್ಶಿ ವೈ.ಡಿ.ಕುನ್ನಿಬಾವಿ ಮತ್ತು ಹುಬ್ಬಳ್ಳಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ರಾಮಚಂದ್ರ ಹೊಸಮನಿ ನಡುವೆ ಶನಿವಾರ ವಾಗ್ವಾದ ನಡೆದು, ಪರಸ್ಪರ ಕೈ ಕೈ ಮಿಲಾಯಿಸಿದರು.

ಜಿಲ್ಲಾ ಪಂಚಾಯ್ತಿ ವಿಶೇಷ ಸಾಮಾನ್ಯ ಸಭೆ ಬಳಿಕ ವಾಗ್ವಾದ ನಡೆಯಿತು. ಗ್ರಾಮ ಪಂಚಾಯ್ತಿ ಸಿಬ್ಬಂದಿ ನೇಮಕ ವಿಚಾರ ವಾಗಿ, ಆರಂಭವಾದ ಈ ವಾಗ್ಯುದ್ಧ, ತಾರಕಕ್ಕೇರಿ ಪರಸ್ಪರ ಹೊಡೆದಾಡಿದರು.

ಕುಡಿಯುವ ನೀರಿನ ಯೋಜನೆ ಅನು ಮೋದನೆಗೆ ಸಂಬಂಧಿಸಿದಂತೆ ನಡೆದ ಸಭೆ ಪೂರ್ಣಗೊಂಡ ನಂತರ ರಾಮ ಚಂದ್ರ  ಊಟ ಮಾಡುತ್ತಿದ್ದರು. ಈ ವೇಳೆ ಅವರತ್ತ ತೆರಳಿದ ಕುನ್ನಿಬಾವಿ, ದೇವರ ಗುಡಿಹಾಳ ಮತ್ತು ಶೆರೆವಾಡ ಗ್ರಾಮ ಪಂಚಾಯಿತಿ ಸಿಬ್ಬಂದಿ ನೇಮಕಾತಿ ಕುರಿತ ಕಡತದ ಬಗ್ಗೆ ವಿಚಾರಿಸಿದರು. ಈ ಹಂತ ದಲ್ಲಿ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕುನ್ನಿಬಾವಿ ಅವರು ರಾಮಚಂದ್ರ ಅವರನ್ನು ಅವಾಚ್ಯವಾಗಿ ನಿಂದಿಸಿದರು. ಆಗ ರಾಮಚಂದ್ರ ಅವರು ಜಿಲ್ಲಾ ಪಂಚಾಯ್ತಿ ಸಿಇಒ ಸ್ನೇಹಲ್‌ ಆರ್‌. ಅವರತ್ತ ತೆರಳಿ ಘಟನೆ ವಿವರಿಸಲು ಮುಂದಾದಾಗ, ಅವರ ಭುಜಕ್ಕೆ ಕುನ್ನಿಬಾವಿ ತಿವಿದರು.

ಆಗ ಮಧ್ಯಪ್ರವೇಶಿಸಿದ ಸಿಇಒ ಮತ್ತು ಇತರ ಸದಸ್ಯರು, ‘ಅಧಿಕಾರಿಗಳು ಈ ರೀತಿ ಕಿತ್ತಾಡುವುದು ಶೋಭೆ ತರುವ ವಿಷಯ ವಲ್ಲ. ಈ ತರಹದ ವರ್ತನೆ ಗೌರವಯುತ ವಾದುದಲ್ಲ’ ಎಂದು ಇಬ್ಬರನ್ನೂ ಸಮಾ ಧಾನಪಡಿಸಿದರು.

‘ಕಿತ್ತಾಡಿಕೊಂಡ ಇಬ್ಬರೂ ಅಧಿಕಾರಿ ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸ ಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT