ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ಒದಗಿಸಲು ಆಗ್ರಹಿಸಿ ರಸ್ತೆತಡೆ

Last Updated 21 ಮೇ 2017, 6:38 IST
ಅಕ್ಷರ ಗಾತ್ರ

ಸುರಪುರ: ತಾಲ್ಲೂಕಿನ ದೇವರಗೋನಾಲ ಗ್ರಾಮದಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಜಯಕರ್ನಾಟಕ ಸಂಘಟನೆಯ ಮುಖಂಡರು ಗ್ರಾಮದಲ್ಲಿ ಶನಿವಾರ ರಸ್ತೆತಡೆ ಮಾಡಿದರು.

ಸಂಘಟನೆಯ ರಾಜ್ಯ ಘಟಕದ ಸಂಚಾಲಕ ವೆಂಕೋಬ ದೊರೆ ಮಾತನಾಡಿ, ‘ದೇವರಗೋನಾಲ ಗ್ರಾಮಕ್ಕೆ ಬ್ಯಾಂಕ್, ವಿಎಸ್ಎಸ್ಎನ್ ಸಂಘ ಮತ್ತು ಕಾಲೇಜು ವಸತಿನಿಲಯ ಮಂಜೂರಾತಿಗೆ ಅನೇಕ ದಿನಗಳಿಂದ ಸಂಘಟನೆ ಹೋರಾಟ ಮಾಡುತ್ತಾ ಬರುತ್ತಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ಬ್ಯಾಂಕ್ ಸ್ಥಾಪನೆಯಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿ ಹಳ್ಳಿಗೆ ಒಂದು ಬ್ಯಾಂಕ್ ಆರಂಭಿಸಬೇಕು ಎಂಬುದು ಕೇಂದ್ರ ಸರ್ಕಾರದ ಘೋಷಣೆಯಾಗಿದೆ. ಇದಕ್ಕೆ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದ ಅನುಮತಿಯೂ ಇದೆ. ದೇವರಗೋನಾಲದಲ್ಲಿ ಬ್ಯಾಂಕ್ ಸ್ಥಾಪನೆಯಾದರೆ ಸುತ್ತಲಿನ ಹತ್ತಾರು ಹಳ್ಳಿಗಳ ಜನರಿಗೆ ಅನುಕೂಲವಾಗುತ್ತದೆ’ ಎಂದರು.

‘ದೇವರಗೋನಾಲ ಗ್ರಾಮದಲ್ಲಿ ಬ್ಯಾಂಕ್ ಮತ್ತು ವಿಎಸ್ಎಸ್ಎನ್ ಸಂಘ ಆರಂಭಿಸಬೇಕು. ಕಾಲೇಜು ಮತ್ತು ವಸತಿನಿಲಯ ನಿರ್ಮಿಸಬೇಕು. ಕೆಂಭಾವಿಯಿಂದ ಹೊರಡುವ ಬೆಂಗಳೂರು ಬಸ್, ಬೊಮ್ಮನಹಳ್ಳಿ ಕೆ. ಮಾರ್ಗವಾಗಿ ಅಮ್ಮಾಪುರ, ವಾಗಣಗೇರಾ, ತಳವಾರಗೇರಾ, ಸುರಪುರದಿಂದ ಬೆಂಗಳೂರಿಗೆ ಹೋಗುವ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಬೊಮ್ಮನಳ್ಳಿ ಕೆ. ಗ್ರಾಮದ ಎಲ್ಲಮ್ಮ ದೇವರಗಡ್ಡಿಯ ಹತ್ತಿರವಿರುವ ಜನರಿಗೆ ನೀರಿನ ವ್ಯವಸ್ಥೆ ಮಾಡಬೇಕು. ಗ್ರಾಮದ ಊರಿನ ಬಾವಿ ದುರಸ್ತಿ ಮಾಡಬೇಕು’ ಎಂದು ಆಗ್ರಹಿಸಿದರು. ಶಿರಸ್ತೇದಾರ ನರೇಶ ಹಳ್ಳದ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ರವಿಚಂದ್ರ ದರಬಾರಿ, ಉಪಾಧ್ಯಕ್ಷ ಸುರೇಶ ಡೊಣ್ಣಿಗೇರೆ, ಯುವ ಘಟಕದ ಅಧ್ಯಕ್ಷ ನಾಗರಾಜನಾಯಕ ಡೊಣ್ಣಿಗೇರೆ, ಶ್ರೀನಿವಾಸನಾಯಕ, ಗೋಪಾಲ ಬಾಗಲಕೋಟೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT