ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾದಾಯಿಗೆ ರೈತರ ಒಗ್ಗಟ್ಟು ಅಗತ್ಯ

Last Updated 21 ಮೇ 2017, 7:05 IST
ಅಕ್ಷರ ಗಾತ್ರ

ನರಗುಂದ: ಮಹಾದಾಯಿ ಉತ್ತರ ಕರ್ನಾಟಕದ ರೈತರ ಆಶಾಕಿರಣದ ಯೋಜನೆ. ಇದನ್ನು ಅನುಷ್ಠಾನಗೊಳಿ ಸಲು  ಪಕ್ಷ ಬೇಧ ಮರೆತು  ಸರ್ವರೂ ರೈತರ ಹಿತ ಕಾಯಬೇಕಿದೆ. ಆದರೆ ಇದರ ಬಗ್ಗೆ ಜನಪ್ರತಿನಿಧಿಗಳು ತಾವು ಆಡಿದ್ದೇ ಆಟ ಎಂಬಂತೆ ವರ್ತಿಸುತ್ತಿದ್ದಾರೆ. ಇದನ್ನು ತಡೆಯಬೇಕು. ಆದ್ದರಿಂದ ರೈತರು  ಒಂದಾ ಗದಿದ್ದರೆ ರಾಜಕೀಯ  ದೊಂಬರಾಟ ನಿಲ್ಲದು ಎಂದು  ಮಹಾದಾಯಿ ಹೋರಾಟ ಸಮಿತಿ ಸದಸ್ಯ ಚನ್ನಪ್ಪಗೌಡ ಪಾಟೀಲ ಆಕ್ರೋಶವ್ಯಕ್ತಪಡಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹಾ ದಾಯಿ ಧರಣಿಯ 675ನೇ ದಿನವಾದ ಶನಿವಾರ ಮಾತನಾಡಿದರು. ಬರುವ ಚುನಾವಣೆಯಲ್ಲಿ  ರೈತರು ಜಾಗೃತಗೊಳ್ಳಬೇಕು. ಬದುಕಿನ ಹೋರಾ ಟಕ್ಕೆ ಮಾನ್ಯತೆ ನೀಡಬೇಕು. ಮಹಾ ದಾಯಿ ಯೋಜನೆಗೆ ಎಲ್ಲ ಸಮುದಾಯ ಒಂದಾಗಬೇಕಿದೆ. ನಾಡಿನುದ್ದಕ್ಕೂ  ಈಗಾ ಗಲೇ ಬೆಂಬಲ ವ್ಯಕ್ತವಾದರೂ ಸರ್ಕಾರ ಗಳಿಗೆ ಇದು  ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಇದುಸಲ್ಲದು. ಅನ್ಯ ರಾಜ್ಯಗಳ  ಒಕ್ಕಟ್ಟು ಇಲ್ಲಿ ಬರಬೇಕಿದೆ ಎಂದರು.

ವೆಂಕಪ್ಪ ಹುಜರತ್ತಿ ಮಾತನಾಡಿ ಪ್ರತಿ ಜನಪ್ರತಿನಿಧಿಯೂ ರೈತರ ಬೆಂಬಲ ಇಲ್ಲದೇ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇದನ್ನು ಅರಿಯುವ ಮೂಲಕ ರೈತರ ಬೇಡಿಕೆ ಈಡೇರಿಸಲು ಅವರು ಮುಂದಾ ಗಬೇಕು. ಇದನ್ನೂ ಯಾರಿಂದಲೂ ಹೇಳಿಸಿಕೊಳ್ಳಬಾರದು. ಇದು ತಕ್ಕುದಲ್ಲ. ಇದರ ಬಗ್ಗೆ ಯಾವ ರೀತಿ ಪಿ.ಎಂ ಮೇಲೆ ಒತ್ತಡ ಹೇರಬೇಕು. ಅದು ಮೊದಲು ನಡೆಯಬೇಕಾಗಿದೆ ಎಂದರು.ರೈತರ ಬದುಕು ದುಸ್ತರವಾಗುತ್ತಿದೆ. ಪೈರುಗಳು ಒಣಗಿ, ಬದುಕಿಗೆ ಆಸರೆ ಇಲ್ಲದಂತಾಗಿದೆ. ಪುಡಿಗಾಸಿನ ಪರಿಹಾರ ಬೇಕಿಲ್ಲ.

ನಮಗೆ ಮಹಾದಾಯಿ ನೀರು  ಹರಿಯಬೇಕಿದೆ. ಮಲಪ್ರಭೆ ಒಡಲು ತುಂಬಬೇಕಿದೆ. ರಾಜ್ಯದ  ನೀರಾವರಿ ಯೋಜನೆಗಳಿಗೆ ಜೀವ ತುಂಬುವಂತೆ ಆಗ್ರಹಿಸಿದರು. ಧರಣಿಯಲ್ಲಿ ಚನ್ನಬಸವ್ವ ಆಯಟ್ಟಿ, ಚಂದ್ರಗೌಡ ಪಾಟೀಲ, ಹನಮಂತ ಸರನಾಯ್ಕರ, ವೀರಣ್ಣ ಸೊಪ್ಪಿನ ಎಸ್‌.ಬಿ.ಜೋಗಣ್ಣವರ, ವಾಸು ಚವ್ಹಾಣ, ಎಸ್.ಕೆ.ಗಿರಿಯಣ್ಣವರ, ಕೆ.ಎಚ್.ಮೊರ ಬದ. ಎಲ್.ಬಿ.ಮುನೇನಕೊಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT