ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಪಂಚದ 150 ದೇಶಗಳಲ್ಲಿ ಸಂಸ್ಕೃತ ಅಧ್ಯಯನ’

Last Updated 21 ಮೇ 2017, 7:08 IST
ಅಕ್ಷರ ಗಾತ್ರ

ಗದಗ: ತಾಲ್ಲೂಕಿನ ಹೊಸಹಳ್ಳಿ ಬೂದೀ ಶ್ವರ ಮಠದಲ್ಲಿ ಸಂಸ್ಕೃತ ಶಿಕ್ಷಕ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭ ಈಚೆಗೆ ನಡೆಯಿತು. ‘ಸಂಸ್ಕೃತದಲ್ಲಿ ನಮ್ಮತನ ಅಡಗಿದ್ದು, ಇದು ಮಡಿವಂತಿಕೆಯ ಭಾಷೆಯಾಗಬಾ ರದು’ ಎಂದು ಬೂದೀಶ್ವರ ಮಠದ ಅಭಿ ನವ ಬೂದೀಶ್ವರ ಸ್ವಾಮೀಜಿ ಹೇಳಿದರು.

‘ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿ ಯುವ ಆಸೆ ಇದೆ. ಈ ಶಿಬಿರ ಬೇರೆ ಯರಿಗೆ ಮಾದರಿ. ಗ್ರಾಮದಲ್ಲಿ ಸಂಸ್ಕೃತ ಪರಿಸರ ನಿರ್ಮಿಸಿದೆ. ಶಿಬಿರದಲ್ಲಿ ಸಂಸ್ಕೃತ ಕಲಿತವರು, ಬೇರೆಯವರಿಗೆ ಈ ಭಾಷೆ ಯನ್ನು ಕಲಿಸಬೇಕು’ ಎಂದರು.

‘ಪ್ರಪಂಚದ 150 ದೇಶಗಳಲ್ಲಿ ಸಂಸ್ಕೃತ ಅಧ್ಯಯನ ಮಾಡಲಾಗುತ್ತಿದೆ. ಇಂಗ್ಲಿಷ್, ಹಿಂದಿ, ಬಂಗಾಲಿ ಭಾಷೆಯ ಜತೆಗೆ ಸಂಸ್ಕೃತ ಕಲಿಕೆಯೂ ಪ್ರಾರಂಭ ವಾಗಿದೆ. ದೇಶದಾದ್ಯಂತ ಈಗಾಗಲೇ 1.40 ಲಕ್ಷ ಶಿಬಿರಗಳು ನಡೆಸಲಾಗಿದೆ’ ಎಂದು ಅಖಿಲಭಾರತ ಸಂಸ್ಕೃತ ಭಾರತೀ ಸಂಘಟನಾಮಂತ್ರಿ ದಿನೇಶ ಕಾಮತ ತಿಳಿಸಿದರು.

ಸಂಸ್ಕೃತ ಕಠಿಣ, ಪುರೋಹಿತರ ಭಾಷೆ ಎನ್ನುವ ಭಾವನೆಯನ್ನು ಬಿಡ ಬೇಕು. ಸಂಸ್ಕೃತ ಭಾಷೆ ಯಾರ ಸ್ವತ್ತಲ್ಲ, ಅದು ಎಲ್ಲರ ಭಾಷೆಯಾಗಿದೆ. ವೈಜ್ಞಾ ನಿಕ, ಧ್ವನಿ ಸಂಬಂಧ, ಶುದ್ಧ ಉಚ್ಚಾರಣೆ ಸಂಸ್ಕೃತ ಭಾಷೆಯಲ್ಲಿ ಇದೆ. ಸಂಸ್ಕೃತ ವನ್ನು ಎಲ್ಲರಿಗೂ ಕಲಿಸುವ ಕಾರ್ಯವನ್ನು ಸಂಸ್ಕೃತ ಭಾರತಿ ಮಾಡುತ್ತಿದೆ ಎಂದರು.

ಸಂಸ್ಕೃತ ಹಲ ಭಾಷೆಗಳಿಗೆ ಮಾತೃ ಭಾಷೆಯಾಗಿದೆ. ಈಚೆಗೆ ಸಂಸ್ಕೃತ ಭಾಷೆ ಯತ್ತ ಜನರು ಹೆಚ್ಚಿನ ಒಲವು ತೋರುತ್ತಿ ದ್ದಾರೆ ಎಂದು ನಿವೃತ್ತ ಎಂಜಿನಿಯರ್ ಪಿ.ಎಸ್.ವಿರಕ್ತಮಠ ತಿಳಿಸಿದರು. ಸಂಗಯ್ಯ ಸ್ವಾಮಿ, ವಿ.ಜಿ.ಹೆಗಡೆ, ಪ್ರೊ.ಜಿ.ಆರ್.ಅಂಬಲಿ, ಪ್ರಭುಲಿಂಗ, ಕುಮಾರ ಬಾಗೇವಾಡಿಮಠ, ಮಹೇಶ್ವರಿ, ಆರತಿ ಖೋತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT