ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲ ಯಥಾಸ್ಥಿತಿ ಸ್ಥಳಾಂತರಕ್ಕೆ ನಿರ್ಧಾರ!

Last Updated 21 ಮೇ 2017, 7:12 IST
ಅಕ್ಷರ ಗಾತ್ರ

ಸಿಂಗಟಾಲೂರ :ಹುಲಿಗುಡ್ಡ ಏತ ನೀರಾ ವರಿ ಯೋಜನೆ ಅಡಿಯಲ್ಲಿ ಮುಂಡರಗಿ ತಾಲ್ಲೂಕಿನ ಗುಮ್ಮಗೋಳ  ಗ್ರಾಮ ಮುಳು ಗಡೆ ಆಗಲಿದ್ದು, ಗ್ರಾಮದ ಸ್ಥಳಾಂತರಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ.

ಗುಮ್ಮಗೋಳ ಗ್ರಾಮದಲ್ಲಿರುವ ಗೊಣೀಬಸವೇಶ್ವರ ದೇವಸ್ಥಾನವು ಈ ಭಾಗದ ಪ್ರಾಚೀನ ದೇವಸ್ಥಾನವಾಗಿದ್ದು, ಅದ್ಭುತ ಕೆತ್ತನೆ, ವಾಸ್ತುಶಿಲ್ಪ ಮೊದಲಾದ ಕಾರಣಗಳಿಂದ ಗಮನ ಸೆಳೆಯುತ್ತಿದೆ.

ವಿಜಯನಗರ ಆಳ್ವಿಕೆಯ ನಂತರ ಹುಟ್ಟಿಕೊಂಡ ಪಾಳೆಗಾರರ ಆಳ್ವಿಕೆಯಲ್ಲಿ ಗೋಣಿಬಸವೇಶ್ವರ ದೇವಸ್ಥಾನ ನಿರ್ಮಿಸ ಲಾಗಿದೆ ಎಂಬ ಐತಿಹ್ಯ  ಇದೆ. ಪಂಚಗಣಾ ಧೀಶ್ವರರಲ್ಲಿ ಒಬ್ಬರಾಗಿದ್ದ ಮದ್ವಾನ ಸ್ವಾಮಿ ಮಗನಾದ ಗೋಣಿಬಸವೇಶ್ವರ ಧರ್ಮ ಪ್ರಚಾರಕ್ಕಾಗಿ ದೆಹಲಿ, ಸೂರತ್ ಸೇರಿ ದೇಶದ ಇತರ ಭಾಗಗಳಲ್ಲಿ 777 ಮಠ ಕಟ್ಟಿಸಿದ್ದರು ಎಂಬ ಪ್ರತೀತಿ ಇದೆ.

ಕಲ್ಲಿನಿಂದ ನಿರ್ಮಿಸಿರುವ ಸುಂದರ ಗೋಣಿಬಸವೇಶ್ವರ ದೇವಸ್ಥಾನವು ಉತ್ತರಾಭಿಮುಖವಾಗಿದ್ದು, ಗರ್ಭಗುಡಿ ಯಲ್ಲಿ ನಂದಿ ಹಾಗೂ ಈಶ್ವರ ಮೂರ್ತಿ ಗಳಿವೆ. ಗರ್ಭಗುಡಿಯ ಮುಂದೆ ಕಲ್ಯಾಣಿ ಇದ್ದು, ಅಲ್ಲಿ 12 ತಿಂಗಳೂ ನೀರಿರುತ್ತದೆ. ಕಲ್ಯಾಣಿ ಸುತ್ತಲೂ ಸುಂದರ ಕೆತ್ತನೆಯ ಕಲ್ಲಿನ ಕಂಬಗಳಿವೆ.

ಗೋಣಿಬಸವೇಶ್ವರ ದೇವಸ್ಥಾನದಲ್ಲಿರುವ ಕಲ್ಯಾಣಿಗೆ ಹತ್ತಿ ರದ ತುಂಗಭದ್ರಾನ ನದಿಯಿಂದ ಗುಪ್ತ ಗಾಮಿನಿಯಾಗಿ ನೀರು ಹರಿದು ಬರು ತ್ತದೆ ಎಂದು ಹೇಳಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ತುಂಗಭದ್ರಾ ನದಿ ಬತ್ತುತ್ತಿ ದ್ದರೂ ಗೋಣಿಬಸವೇಶ್ವರ ದೇವಸ್ಥಾನದ ಕಲ್ಯಾಣಿ ಬತ್ತಿದ ಉದಾಹರಣೆಗಳಿಲ್ಲ.

ಕಲ್ಯಾಣಿ ಸುತ್ತಲೂ ಸುಂದರ ಕೆತ್ತನೆ ಯಿಂದ ಕೂಡಿದ ಕಲ್ಲಿನ ಕಂಬಗಳಿದ್ದು, ನೋಡುಗರನ್ನು ಆಕರ್ಷಿಸುತ್ತಿವೆ. ಕಲ್ಯಾಣಿ ಮುಂಭಾಗದಲ್ಲಿ ಕಲ್ಲಿನಿಂದ ನಿರ್ಮಿಸಿ ರುವ ಸುಂದರ ಕೆತ್ತನೆಯ ದೇವಸ್ಥಾನದ ಗೋಪುರವಿದೆ.

ಪ್ರತೀ ವರ್ಷ ಜಾತ್ರೆ ಹಾಗೂ ಮತ್ತಿತರ ಸಂದರ್ಭಗಳಲ್ಲಿ ಗೋಪುರ ಸೇರಿ ಇಡೀ ದೇವಸ್ಥಾನಕ್ಕೆ ಸುಣ್ಣ ಬಳಿಯುತ್ತಿರುವುದರಿಂದ ಕಲ್ಲಿನ ಕೆತ್ತನೆಯ ಸೂಕ್ಷ್ಮಗಳು ಸುಣ್ಣದಲ್ಲಿ ಮರೆ ಯಾಗಿ ಹೋಗಿವೆ. ಇದರಿಂದ ದೇವ ಸ್ಥಾನದ ವಾಸ್ತುವೈಭವ ಮರೆಯಾಗಿದೆ.

ಮುಳುಗಡೆ ಆಗಲಿರುವ ಗುಮ್ಮಗೋಳ ಗ್ರಾಮದ ಸ್ಥಳಾಂತರದ ಜತೆ ಗ್ರಾಮದಲ್ಲಿ ಇರುವ ಪುರಾತನ ಗೋಣಿಬಸವೇಶ್ವರ ದೇವಸ್ಥಾನವೂ ಸ್ಥಳಾಂತರಗೊಳ್ಳಲಿದೆ. ಈ ಕುರಿತಂತೆ ಪ್ರಾಚ್ಯವಸ್ತು ಇಲಾಖೆ  ಸ್ಥಳಾಂತರಗೊಳ್ಳಲಿರುವ ದೇವಸ್ಥಾನದ ನೀಲನಕ್ಷೆಯನ್ನು ಸಿದ್ಧಪಡಿಸದೆ. ದೇವಸ್ಥಾ ನದ ಮಧ್ಯಭಾಗದಲ್ಲಿರುವ ಕಲ್ಯಾಣಿ ಹೊರತುಪಡಿಸಿ ಇನ್ನುಳಿದ ದೇವಸ್ಥಾನ ವನ್ನು ಯಥಾರೀತಿ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ.

ಪ್ರತೀ ವರ್ಷ ಯುಗಾದಿ ನಂತರದ ಹತ್ತನೆ ದಿವಸ (ದಶಮಿ) ಗೋಣಿ ಬಸವೇಶ್ವರ ಮಹಾರಥೋತ್ಸವ ನಡೆ ಯುತ್ತದೆ. ನಾಡಿನ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಗೋಣಿಬಸವೇಶ್ವರ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

‘ಪ್ರಾಚ್ಯವಸ್ತು ಇಲಾಖೆ ಜತೆಗೂಡಿ ಗೋಣಿಬಸವೇಶ್ವರ ದೇವಸ್ಥಾನ ಸ್ಥಳಾಂತ ರಕ್ಕೆ ಸುಮಾರು ₹ 8.16 ಕೋಟಿ ವೆಚ್ಚದ ಕ್ರಿಯಾಯೋಜನೆ ತಯಾರಿಸಲಾಗಿದೆ. ಗ್ರಾಮದ ಸ್ಥಳಾಂತರದ ಜತೆಗೆ ದೇವ ಸ್ಥಾನವನ್ನೂ ಯಥಾ ರೀತಿ ಸ್ಥಳಾಂತರಿಸ ಲಾಗುವುದು’ ಎನ್ನುತ್ತಾರೆ ಹುಲಿಗುಡ್ಡ ಏತ ನೀರಾವರಿ ಯೋಜನೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ಕೆ.ಎಂ.ಕೆ. ಶರ್ಮಾ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT