ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ: ಬಿಎಸ್‌ವೈ ಭೇಟಿ 24ರಂದು

Last Updated 21 ಮೇ 2017, 7:18 IST
ಅಕ್ಷರ ಗಾತ್ರ

ಹಾವೇರಿ: ‘ಜಿಲ್ಲೆಯ ಬರ ಅಧ್ಯಯನ ಹಾಗೂ ದಲಿತರ ಸಮಸ್ಯೆಗಳನ್ನು ಆಲಿಸಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಇದೇ 24ರಂದು ಜಿಲ್ಲೆಗೆ ಬರಲಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ ಶಿಗ್ಗಾವಿ ಪಟ್ಟಣದ ದಲಿತರ ಕಾಲೊನಿಗೆ ಭೇಟಿ ನೀಡುವರು. ಅಲ್ಲಿ, ದಲಿತರ ಸಮಸ್ಯೆಗಳನ್ನು ಆಲಿಸಿ, ಅವ'ರೊಂದಿಗೆ ಉಪಾಹಾರ ಸೇವಿಸುವರು. ಬಳಿಕ ತಾಲ್ಲೂಕಿನ ಬಿಸಲಹಳ್ಳಿಯ ಕೆರೆಗೆ ಭೇಟಿ ನೀಡುವರು’ ಎಂದರು.

‘ಬೆಳಿಗ್ಗೆ 11.30ಕ್ಕೆ ಹಾನಗಲ್‌ ತಾಲ್ಲೂಕಿನ ಅಕ್ಕಿಆಲೂರಿನಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವರು. ಬಳಿಕ ಹಾವೇರಿ ನಗರದ ಅಂಬೇಡ್ಕರ್‌ ಬಡಾವಣೆಗೆ ಭೇಟಿ ನೀಡಿ, ದಲಿತರ ಸಮಸ್ಯೆಗಳನ್ನು ಆಲಿಸುವರು. ನಂತರ ಜಿಲ್ಲಾ ಗುರುಭವನದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವರು’  ಎಂದರು.

ಸಂಜೆ ರಾಣೆಬೆನ್ನೂರಿನ ದಲಿತ ಹಾಗೂ ವಾಲ್ಮೀಕಿ ಓಣಿಗೆ ಭೇಟಿ ನೀಡಿ, ಸ್ಥಳೀಯರ ಸಮಸ್ಯೆಗಳನ್ನು ಆಲಿಸುವರು. ಅವರ ಜೊತೆ ಉಪಾಹಾರ ಸೇವಿಸುವರು. ನಂತರ ಸ್ಥಳೀಯ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವರು’ ಎಂದರು.

ಕಾಂಗ್ರೆಸ್‌ ಕಚೇರಿಯಾದ ಠಾಣೆ:  ‘ತಾಲ್ಲೂಕಿನ ನಜೀಕ್‌ ಲಕಮಾಪುರ ಗ್ರಾಮದಲ್ಲಿ ಶುಕ್ರವಾರ ನಡೆದ ಜೋಡಿ ಕೊಲೆಯಿಂದ ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ ಅಧಿಕಾರಿಗಳೆಲ್ಲ ರಾಜಕಾರಣಿಗಳ ಅಡಿಯಾಳಾಗಿದ್ದಾರೆ. ಜಿಲ್ಲೆಯ ಪೊಲೀಸ್ ಠಾಣೆಗಳೆಲ್ಲ ಕಾಂಗ್ರೆಸ್ ಕಚೇರಿಗಳಾಗಿವೆ. ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಹಾವೇರಿ ನಗರಸಭೆಯಲ್ಲಿ ಪೌರಾಯುಕ್ತರು ಇಲ್ಲದ ಕಾರಣ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. 
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ಧರಾಜ ಕಲಕೋಟಿ, ನಿರಂಜನ ಹೇರೂರ, ಸುರೇಶ ದೊಡ್ಮನಿ, ಪರಮೇಶ್ವರಪ್ಪ ಮೇಗಳಮನಿ. ಪ್ರಭು ಹಿಟ್ನಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT