ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ರಕ್ಷಣೆಗೆ ನಿಂತ ಮಾಜಿ ಯೋಧ

Last Updated 21 ಮೇ 2017, 7:22 IST
ಅಕ್ಷರ ಗಾತ್ರ

ಅಂದು ದೇಶದ ರಕ್ಷಣೆಗಾಗಿ ಗಡಿಭಾಗದಲ್ಲಿ ಹೋರಾಡಿದ ಯೋಧರೊಬ್ಬರು, ನಿವೃತ್ತಿಯ ಬಳಿಕ ಈ ನೆಲ, ಜಲ, ಹಸಿರು ರಕ್ಷಣೆಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ‘ಹಸಿರಿದ್ದರೆ ಉಸಿರು’ ಎನ್ನುವ ಸಂದೇಶ ಸಾರುತ್ತಿದ್ದಾರೆ. ಅವರೇ ರಾಣೆಬೆನ್ನೂರು ತಾಲ್ಲೂಕಿನ ಕುಮಾರಪಟ್ಟಣದ ಮಾಜಿ ಯೋಧ ಹನುಮಂತಪ್ಪ ಮಕರಿ.

ಸೈನ್ಯದಿಂದ ನಿವೃತ್ತಿಯಾದ ಬಳಿಕ ಇಲ್ಲಿನ ಗ್ರಾಸಿಂ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ ಮಕರಿ, ಪರಿಸರ ರಕ್ಷಣೆಯಲ್ಲಿ ತೊಡಗಿದ್ದಾರೆ. ಇಲ್ಲಿನ ವಿದ್ಯಾನಗರದಲ್ಲಿನ ತಮ್ಮ ಮನೆ ಮುಂದಿನ ರಸ್ತೆಯ ಎರಡೂ ಬದಿಯಲ್ಲಿ ಗಿಡಗಳನ್ನು ನೆಟ್ಟು, ನೀರು ಹಾಕಿ ಪೋಷಿಸಿದ್ದಾರೆ. ಬರದ ಸಂದರ್ಭದಲ್ಲಿ ಬಿಂದಿಗೆ ನೀರು ಹೊತ್ತು ತಂದು  ಹಾಕಿದ್ದಾರೆ.

ಗಿಡಗಳ ರಕ್ಷಣೆಗಾಗಿ ‘ಟ್ರೀ ಗಾರ್ಡ್‌’ (ಸುತ್ತಲ ಬೇಲಿ) ಹಾಕಿಸಿದ್ದಾರೆ. ಪರಿಸರದ ಜನರಿಗೆ ‘ಶುದ್ಧ ಗಾಳಿ’ ಸಿಗಬೇಕು ಎಂಬ ಆಶಯದಿಂದ ಅವರು ಈ ಕಾರ್ಯ ಮಾಡುತ್ತಿದ್ದಾರೆ. ಈಗ ಆಳೆತ್ತರ ಬೆಳೆದ ಮರಗಳು ನೆರಳು ನೀಡುತ್ತಿವೆ. ಹಕ್ಕಿಗಳ ಕಲರವ ಕೇಳುತ್ತಿವೆ. ಅಲ್ಲದೇ, ಆಸುಪಾಸಿನ ಚರಂಡಿಯನ್ನು ತಾವೇ ಸ್ವತಃ ಸ್ವಚ್ಛಗೊಳಿಸುತ್ತಾರೆ.

ಸಾವಯವ: ರಸ್ತೆ ಮಾತ್ರವಲ್ಲ, ತಮ್ಮ ನಿವೇಶನದಲ್ಲಿ ಕೈತೋಟವನ್ನೂ ಮಾಡಿದ್ದಾರೆ. ಇಲ್ಲಿ ರಾಸಾಯನಿಕ ರಹಿತವಾದ ಸಾವಯಕ ಕೃಷಿ ಪದ್ದತಿ ಅಳವಡಿಸಿ ಕೊಂಡಿದ್ದಾರೆ. ನವಣೆ, ಸಜ್ಜೆ, ರಾಗಿ, ತರಕಾರಿ, ತೆಂಗು, ಅಡಿಕೆ, ಬಾಳೆ, ದ್ವಿದಳ ದಾನ್ಯ, ಪಪ್ಪಾಯ, ಕಬ್ಬು, ಮಾವು, ಹಲಸು, ನುಗ್ಗೆ, ಎಲೆಬಳ್ಳಿ, ಬಗೆ ಬಗೆಯ ಹೂವಿನ ಗಿಡಗಳನ್ನು ಬೆಳೆದಿದ್ದಾರೆ.

‘ಪರಿಸರದ ಬೆಳೆಸಲು ನಾವು ಶ್ರಮಿಸಿದರೆ, ಅದು ನಮಗೆ ಪ್ರತಿಫಲ ನೀಡುತ್ತದೆ’ ಎಂಧು ಹನುಮಂತಪ್ಪ ಮಕರಿ ಹೇಳುತ್ತಾರೆ.ಹನುಮಂತಪ್ಪ ಮೂಲತಃ ಹಿರೇಕೆರೂರು ತಾಲ್ಲೂಕಿನ ಮಕರಿ ಗ್ರಾಮದವರು. ಅವರ ಪರಿಸರ ಸೇವೆಗಾಗಿ  ಗ್ರಾಸಿಂ ಕಂಪನಿ ಅಧಿಕಾರಿಗಳು ‘ಪರಿಸರ ದಿನಾಚರಣೆ’ ಕಾರ್ಯಕ್ರಮದಲ್ಲಿ  ವಿಶೇಷ ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ.  

ಮನೆಯಲ್ಲಿ ಇಂಗುಗುಂಡಿ ಮಾಡಿರುವ ಮಕರಿಯರು, ಜಲಸಂವರ್ಧನೆ ಬಗ್ಗೆ ಕಂಪೆನಿ ಉದ್ಯೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತ ನೀಡುತ್ತಿದ್ದಾರೆ. ಮಳೆ ಕೊಯ್ಲು, ಇಂಗು ಗುಂಡಿ ನಿರ್ಮಾಣದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. 

* * 

ನಾವು ಪರಿಸರವನ್ನು ಪ್ರೀತಿಯಿಂದ ಬೆಳೆಸುತ್ತಾ ಬಂದರೆ, ಅದು ನಮ್ಮನ್ನು ಬೆಳೆಸುತ್ತದೆ. ಬೆಳವಣಿಗೆ ಎಂಬುದು ಪರಸ್ಪರ ಪೂರಕ ವಿಚಾರ
ಹನುಮಂತಪ್ಪ ಮಕರಿ
ಮಾಜಿ ಸೈನಿಕ, ಗ್ರಾಸಿಂ ಉದ್ಯೋಗಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT