ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹16.30 ಕೋಟಿ ಅನುದಾನ: ಶಾಸಕಿ

Last Updated 21 ಮೇ 2017, 8:39 IST
ಅಕ್ಷರ ಗಾತ್ರ

ಪುತ್ತೂರು:  ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ  ರಸ್ತೆಗಳ ನಿರ್ಮಾಣ, ರಸ್ತೆಗಳ ದುರಸ್ತಿ ಮತ್ತು ಅಭಿವೃದ್ಧಿಗಾಗಿ ವಿವಿಧ ಯೋಜನೆಯಡಿ ಒಟ್ಟು ₹ 16.30 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ತಿಳಿಸಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರ ಜತೆಗೆ ಪ್ರತ್ಯೇಕ ₹ 20 ಕೋಟಿ ವಿಶೇಷ ಅನುದಾ ನಕ್ಕೆ ಸರ್ಕಾರಕ್ಕೆ ಬರೆದುಕೊಂಡಿರು ವುದಾಗಿ ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಅಪಘಾತ ವಲಯ ಎಂದು ಗುರುತಿಸಿಕೊಂಡಿರುವ ಹಲವು ಸ್ಥಳಗಳನ್ನು ಪಟ್ಟಿ ತಯಾರಿಸಲಾಗಿದ್ದು, ಈ ಪೈಕಿ ಅತ್ಯಂತ ಹೆಚ್ಚು ಅಪಾ ಯಕಾರಿಯಾಗಿರುವ ಸ್ಥಳಗಳ ತಿರುವು ಸರಿ ಮಾಡುವ ಕಾಮಗಾರಿಗೆ ಹಣ ಮಂಜೂರಾಗಿದೆ. ಕುಂಜೂರು ಪಂಜದ ಕಾಮಗಾರಿಗೆ ₹ 4.80 ಕೋಟಿ ,  ಸಂಟ್ಯಾರ್ ತಿರುವು ಕಾಮಗಾರಿಗೆ ₹ 60 ಲಕ್ಷ, ನೆಟ್ಟಾರು- ಅಮ್ಚಿನಡ್ಕ ರಸ್ತೆಯ ಅಮಳದಲ್ಲಿ ರಸ್ತೆ ಕಾಮಗಾರಿಗೆ ₹1 ಕೋಟಿ ಅನುದಾನ ಮಂಜೂರಾಗಿದೆ ಎಂದರು.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯಿಂದ ವಿಶೇಷ ಅನುದಾನದಲ್ಲಿ ಮಂಜೂರಾದ ₹ 4 ಕೋಟಿ ಅನುದಾನದಲ್ಲಿ  ಕ್ಷೇತ್ರದಾ ದ್ಯಂತ ತಲಾ ₹ 5 ಲಕ್ಷದಂತೆ 80 ಕಡೆಗಳಲ್ಲಿ ರಸ್ತೆ ಕಾಂಕ್ರಿಟೀಕರಣ ಮಾಡಿಸಲಾಗುವುದು.

ಲೋಕೋಪಯೋಗಿ ಇಲಾಖೆಯಿಂದ ವಿಶೇಷ ಘಟಕ ಯೋಜನೆಯಲ್ಲಿ ₹ 2.40 ಕೋಟಿ, ಗಿರಿಜನ ಉಪ ಯೋಜನೆಯ ಅಡಿಯಲ್ಲಿ ₹ 2 ಕೋಟಿ  ಮಂಜೂರಾಗಿದ್ದು, ಈ ಅನುದಾನ ಕೂಡ ರಸ್ತೆ ಕಾಮಗಾರಿಗಾಗಿ ವಿನಿಯೋಗವಾಗಲಿದೆ. ಗ್ರಾಮಾಭಿವೃದ್ಧಿ ಮತ್ತು ಪಂಚಾಯ್‌ ರಾಜ್ ಇಲಾಖೆ ಯಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಲ್ಲಿ ₹ 1 ಕೋಟಿ ಮಂಜೂರಾಗಿದೆ ಎಂದು ಹೇಳಿದರು.

‘ನಮ್ಮ ಗ್ರಾಮ ನಮ್ಮ ರಸ್ತೆ’

ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯ ಅಡಿಯಲ್ಲಿ ಕ್ಷೇತ್ರದಲ್ಲಿ ಒಟ್ಟು 13 ಕಡೆ ಕಾಮಗಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಈ ಪೈಕಿ ಸುಳ್ಯಪದವು - ಪದಡ್ಕ  - ಮೈಂದನಡ್ಕ ರಸ್ತೆ, ಬಲ್ನಾಡ್ - ಸಾಜ ರಸ್ತೆ, ಅರ್ಕ - ಹನಿಯೂರು ರಸ್ತೆ (ಕೊಡಿಪ್ಪಾಡಿ), ಅಳಕೆ ಮಜಲು- ವಡ್ಯರ್ಪೆ ರಸ್ತೆ (ಇಡ್ಕಿದು),  ಪಾಟ್ರಕೋಟಿ - ಕೆದಿಲ ರಸ್ತೆ, ವಿನಾಯಕ ನಗರ- ಮಠಂತಬೆಟ್ಟು  ದೊರ್ಮೆ ರಸ್ತೆ (ಕೋಡಿಂಬಾಡಿ), ಬೊಳಂತಿಲ - ದರ್ಬೆ ರಸ್ತೆ (34 ನೆಕ್ಕಿಲಾಡಿ), ಈ ರಸ್ತೆ ಕಾಮಗಾರಿಗಳಿಗೆ ಇದೇ 26ರಂದು ಗುದ್ದಲಿ ಪೂಜೆ ನಡೆಯುವುದು. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವ ತಲೆಕ್ಕಿಮಾರು - ಮುಂಡಮೂಲೆ ರಸ್ತೆ (ಮಾಣಿಲ), ನೀರ್ಕಜೆ - ಕಟ್ಟೆ ರಸ್ತೆ (ಕೇಪು), ಗರಡಿಬೈಲ್ - ಅಡ್ಕ ರಸ್ತೆ(ಪುಣಚ), ಪಾಪೆಮಜಲು -  ಬಪ್ಪಪುಂಡೇಲು ರಸ್ತೆ (ಅರಿಯಡ್ಕ), ಬನ್ನೂರು ಕಜೆ - ಕುಂಟ್ಯಾನ ರಸ್ತೆ (ಬನ್ನೂರು), ದಾಸರಮೂಲೆ - ಅಡೆಕಲ್ಲು ರಸ್ತೆ (ಹಿರೇಬಂಡಾಡಿ)  ಕಾಮಗಾರಿಗೆ ಇದೇ 27ರಂದು ಗುದ್ದಲಿ ಪೂಜೆ ನಡೆಯುವುದು ಎಂದು ಅವರು ತಿಳಿಸಿದರು.

* * 

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆಯಿಂದ ವಿಶೇಷ ಅನುದಾನದಲ್ಲಿ ₹ 4 ಕೋಟಿ  ಮಂಜೂರಾಗಿದೆ
ಶಕುಂತಳಾ ಶೆಟ್ಟಿ
ಶಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT