ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗŀ ಸೇವೆಯಲ್ಲೂ ಅಸಮಾನತೆ

Last Updated 21 ಮೇ 2017, 9:09 IST
ಅಕ್ಷರ ಗಾತ್ರ

ಮೈಸೂರು: ಹಳ್ಳಿಯವನೊಬ್ಬ ಮಲೇರಿ ಯಾದಿಂದ ಸತ್ತರೆ ಅದಕ್ಕೆ ಸೊಳ್ಳೆ ಮಾತ್ರ ಕಾರಣವಲ್ಲ. ಇಲ್ಲಿನ ಆರೋಗ್ಯ ವ್ಯವಸ್ಥೆ, ರಾಜಕೀಯ, ವೈದ್ಯರ ಹಾಗೂ ಮೂಲ ಸೌಕರ್ಯದ ಕೊರತೆ. ಮುಖ್ಯವಾಗಿ ಅಸಮಾನತೆಯೇ ಕಾರಣ ಎಂದು ಮಹಾರಾಷ್ಟ್ರದ ಸೇವಾಗ್ರಾಮದಲ್ಲಿರುವ ಮಹಾತ್ಮ ಗಾಂಧಿ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ನ ಡಾ.ಎಸ್‌.ಪಿ.ಕಲಂತ್ರಿ ಹೇಳಿದರು.

ಅಸೋಸಿಯೇಷನ್‌ ಆಫ್‌ ಫಿಸಿಷಿಯನ್‌ ಆಫ್‌ ಇಂಡಿಯಾದ ರಾಜ್ಯ ವಿಭಾಗ, ಜೆಎಸ್‌ಎಸ್‌ ವೈದ್ಯಕೀಯ ಕಾಲೇಜು, ಮೈಸೂರು ವೈದ್ಯಕೀಯ ವಿದ್ಯಾಲಯದ ಆಶ್ರಯದಲ್ಲಿ ‘ಕೆಪಿಕಾನ್‌’ 35ನೇ ವೈದ್ಯಕೀಯ ಸಮ್ಮೇಳನದ ಅಂಗವಾಗಿ ಶನಿವಾರ ನಡೆದ ವಿಚಾರ ಸಂಕಿರಣದಲ್ಲಿ ‘ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಯ ಸವಾಲುಗಳು’ ಕುರಿತು ಮಾತನಾಡಿದರು.

ದೇಶದ ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆ ಸರಿಯಾಗಿ ಲಭಿಸುತ್ತಿಲ್ಲ. ನಗರ ಮತ್ತು ಗ್ರಾಮೀಣ ಪ್ರದೇಶದ ವೈದ್ಯಕೀಯ ಸೇವೆಯಲ್ಲಿ ಭಾರಿ ಅಸಮಾನತೆ ಇದೆ. ದೇಶದಲ್ಲಿರುವ ಒಟ್ಟು ವೈದ್ಯರಲ್ಲಿ ಶೇ 80ರಷ್ಟು ಮಂದಿ ನಗರಗಳಲ್ಲಿ ಇದ್ದಾರೆ. ಶೇ 75 ಫಾರ್ಮಸಿಗಳು, ಶೇ 60ರಷ್ಟು ಆಸ್ಪತ್ರೆಗಳು ನಗರ ಪ್ರದೇಶಗಳಲ್ಲಿ ಇವೆ ಎಂದು ವಿವರಿಸಿದರು.

ದೇಶದ ಕೆಲವು ಭಾಗಗಳಲ್ಲಿ ವೈದ್ಯರನ್ನು ಕಾಣಲು ಈಗಲೂ ನೂರಾರು ಕಿ.ಮೀ ಪ್ರಯಾಣಿಸುತ್ತಾರೆ. ಇದಕ್ಕಾಗಿ ಒಂದು ತಿಂಗಳ ಸಂಬಳ ಖರ್ಚು ಮಾಡುತ್ತಾರೆ. ಔಷಧಿ ಕೊಂಡರೆ ಅನ್ನ ತಿನ್ನಲು ಹಣ ಇರುವುದಿಲ್ಲ. ಅನ್ನ ತಿಂದರೆ ಔಷಧಿಗೆ ಹಣವಿಲ್ಲದ ಸ್ಥಿತಿ ಇದೆ ಎಂದರು.

ದೇಶದಲ್ಲಿರುವ ಶೇ 80ರಷ್ಟು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರು, ಸ್ತ್ರೀರೋಗತಜ್ಞರು, ಮಕ್ಕಳ ತಜ್ಞರು, ಸರ್ಜನ್‌ಗಳು ಇಲ್ಲ. ಶೇ 8ರಷ್ಟು ಕೇಂದ್ರಗಳಲ್ಲಿ ವೈದ್ಯರೇ ಇಲ್ಲ. ಶೇ 38 ಕೇಂದ್ರಗಳಲ್ಲಿ ಪ್ರಯೋಗಾಲಯ ತಜ್ಞರು, ಶೇ 22ರಷ್ಟು ಕೇಂದ್ರಗಳಲ್ಲಿ ಔಷಧ ತಜ್ಞರು ಇಲ್ಲ ಎಂದು ಮಾಹಿತಿ ನೀಡಿದರು.

ಡೆಂಗಿ ಮಾರಿ ಹೆಚ್ಚುತ್ತಲೇ ಇದೆ: ‌ರಾಜ್ಯದಲ್ಲಿ ಡೆಂಗಿ ಪ್ರಕರಣ ಪ್ರತಿವರ್ಷ ಹೆಚ್ಚುತ್ತಲೇ ಇದೆ ಎಂದು ಬೆಂಗಳೂರಿನ ಎಂವಿಜೆಎಂಸಿ ಪ್ರಾಧ್ಯಾಪಕಿ ವಸಂತಾ ಕಾಮತ್‌ ಹೇಳಿದರು.
2011ರಲ್ಲಿ 405 ಡೆಂಗಿ ಪ್ರಕರಣಗಳು ವರದಿಯಾಗಿದ್ದವು. ಆ ಬಳಿಕ ಹೆಚ್ಚುತ್ತಲೇ ಹೋಯಿತು. ಕಳೆದ ವರ್ಷ 5,833 ಪ್ರಕರಣಗಳು ವರದಿಯಾಗಿವೆ ಎಂದು ಅವರು ಹೇಳಿದರು.

ಮಲೇರಿಯಾಗೆ ಗ್ರಾಮೀಣರೇ ಹೆಚ್ಚು ಬಲಿ

ಮೈಸೂರು: ಮಲೇರಿಯಾದಿಂದ ಸತ್ತವರಲ್ಲಿ ಶೇ 90ರಷ್ಟು ಮಂದಿ ಗ್ರಾಮೀಣ ಪ್ರದೇಶಕ್ಕೆ ಸೇರಿದವರು ಎಂದು ಮಂಗಳೂರಿನ ಯೇನೆಪೋಯಾ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕಿ ಪ್ರಭಾ ಅಧಿಕಾರಿ ಮಾಹಿತಿ ನೀಡಿದರು.

2005ಕ್ಕಿಂತ ಮುನ್ನ ದೇಶದಲ್ಲಿ ಸುಮಾರು 2 ಲಕ್ಷ ಮಂದಿ ಮಲೇರಿಯಾದಿಂದ ಮೃತಪಟ್ಟಿದ್ದಾರೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ–ಅಂಶವು ಕೇವಲ 15 ಸಾವಿರ ಮಂದಿ ಬಲಿಯಾಗಿದ್ದಾರೆ ಎಂದು ತೋರಿಸುತ್ತಿದೆ ಎಂದರು.

ಮಲೇರಿಯಾ ತಡೆಗಟ್ಟುವಲ್ಲಿ ಹಲವು ಸವಾಲುಗಳು ಇವೆ. ವಲಸೆ ಕಾರ್ಮಿಕರು, ಕಟ್ಟಡ ನಿರ್ಮಾಣ ಕೆಲಸಗಾರರು ಹೆಚ್ಚಾಗಿ ಮಲೇರಿ ಯಾಕ್ಕೆ ತುತ್ತಾಗುವರು. ಕಟ್ಟಡ ನಿರ್ಮಾಣ ನಡೆಯುತ್ತಿರುವಸ್ಥಳದಲ್ಲೇ ವಾಸಿಸುವುದು ಇದಕ್ಕೆ ಕಾರಣ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT