ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕತ್ವಕ್ಕೆ ಎಚ್‌.ಡಿ.ದೇವೇಗೌಡ ಹೆಸರುವಾಸಿ

Last Updated 21 ಮೇ 2017, 9:11 IST
ಅಕ್ಷರ ಗಾತ್ರ

ಬನ್ನೂರು: ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರು ಎಲ್ಲ ವರ್ಗದವರೂ ಅಧಿಕಾರ ಪಡೆಯ ಬೇಕೆನ್ನುವ ಮಹತ್ವಾಕಾಂಕ್ಷೆ ಹೊಂದಿದ್ದು, ಅದನ್ನು ಜಾರಿ ಮಾಡುವ ಉದ್ದೇಶ ದಿಂದ ಮೀಸಲಾತಿಯ ವ್ಯವಸ್ಥೆ ಪ್ರಾರಂಭಿಸಿದರು ಎಂದು ಜೆಡಿಎಸ್ ತಾಲ್ಲೂಕು ಘಟಕದ ಕಾರ್ಯಧ್ಯಕ್ಷ ವೈ.ಎಸ್‌. ರಾಮಸ್ವಾಮಿ ಹೇಳಿದರು.

ಯಾಚೇನಹಳ್ಳಿ ಗ್ರಾಮದ ಜೆಡಿಎಸ್ ಕಚೇರಿಯಲ್ಲಿ ಈಚೆಗೆ ನಡೆದ ಎಚ್‌.ಡಿ. ದೇವೇಗೌಡ ಅವರ 85ನೇ ಜನ್ಮದಿನದ ಕಾರ್ಯಕ್ರಮದಲ್ಲಿ ರಾಮಸ್ವಾಮಿ ಮಾತನಾಡಿದರು.
ಅಂಬೇಡ್ಕರ್ ಅವರ ಆಶಯದಂತೆ ಹಿಂದುಳಿದ ವರ್ಗದವರು ಅಧಿಕಾರ ಪಡೆ ಯಬೇಕೆನ್ನುವ ನಿಟ್ಟಿನಲ್ಲಿ ರಾಜಕೀಯ ರಂಗದಲ್ಲೂ ಮೀಸಲಾತಿ ತಂದರು ಎಂದರು.
ಕುಮಾರಸ್ವಾಮಿ ಬಳಗದ ರಾಜ್ಯ ಘಟಕದ ಅಧ್ಯಕ್ಷ ಬಿ.ಆರ್. ಮಂಜುನಾಥ್ ಮಾತನಾಡಿದರು.

ಬಾಣಗವಾಡಿ ವೆಂಕಟೇಗೌಡ, ಯಾಚೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ನವೀನ್, ವೈ.ಸಿ. ಪುಟ್ಟರಾಜು, ಕೆ.ಟಿ.ಶಿವಲಿಂಗೇಗೌಡ, ನಾಗಭೂಷಣ್‌, ಅಪ್ಪು, ವೈ.ಎಂ. ನಾಗರಾಜು, ವೈ.ಟಿ. ಮಹೇಶ್‌, ವೈ.ಎಂ. ನಂಜುಂಡೇಗೌಡ, ಕೆಂಪಣ್ಣ, ಲಿಂಗೇಗೌಡ, ರಾಗೂ, ಕಿಟ್ಟಿ, ದೇವರಾಜ್, ವೈ.ಎಸ್‌. ರವಿ, ಮಾದೇಗೌಡ, ಶಂಕರೇಗೌಡ, ಶಿವಲಿಂಗು, ವೈ.ಜಿ. ಮಹೇಶ್‌, ಪುಟ್ಟಸ್ವಾಮಿ, ವೈ.ಕೆ. ಶಿವಲಿಂಗು, ಮಹದೇವು  ಇದ್ದರು.

‘ಎಚ್‌ಡಿಕೆ ವರ್ಚಸ್ಸಿಗೆ ಧಕ್ಕೆ’
ಬನ್ನೂರು:  ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ದೊರೆಯುತ್ತಿರುವ  ಮನ್ನಣೆಯನ್ನು ಸಹಿಸಲಾಗದೇ, ಅವರ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಎರಡೂ ರಾಷ್ಟ್ರೀಯ ಪಕ್ಷಗಳು ಗಣಿ ಹಗರಣದ ಆರೋಪ ಮಾಡುತ್ತಿವೆ ಎಂದು ಜಿಲ್ಲಾ ಯುವ ಘಟಕದ ಕಾರ್ಯಾಧ್ಯಕ್ಷ ಬಿ.ಕೆ. ನಿರಂಜನ್‌ ಕುಮಾರ್ ಹೇಳಿದರು.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧ ಮಾಡಲಾಗಿ ರುವ ಗಣಿ ಹಗರಣದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಎಲ್ಲ ಆರೋಪಗಳಿಂದ ಕುಮಾರಸ್ವಾಮಿ ಮುಕ್ತರಾಗಲಿದ್ದಾರೆ ಎಂದು ಅವರು ಹೇಳಿದರು.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರು ಪಕ್ಷವನ್ನು ಅಧಿಕಾರಕ್ಕೆ ತರಲು ಗ್ರಾಮ ಮಟ್ಟ ದಿಂದಲೇ ಪಕ್ಷವನ್ನು ಸಂಘಟಿಸುತ್ತಿದ್ದಾರೆ. ವ್ಯಕ್ತಿಗಿಂತ ರಾಜ್ಯದ ಅಭಿವೃದ್ಧಿಯೇ ಮುಖ್ಯ ಎನ್ನುವ ಸಿದ್ಧಾಂತವನ್ನು ಪಕ್ಷ ಹೊಂದಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪ್ರಬಲ ಪಕ್ಷವಾಗಿ ಹೊರಹೊಮ್ಮುವ ಮೂಲಕ ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೆ. ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮಗಳು ಪುನಃ ಆರಂಭವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ದೇವೇಗೌಡರ 85ನೇ ಜನ್ಮದಿನವನ್ನು ಸರಳವಾಗಿ ಆಚರಿಸಲಾಯಿತು. ತಾ.ಪಂ.ಮಾಜಿ ಸದಸ್ಯ ಶೋಭರಾಣಿ ದೇವರಾಜ್,  ಮುಖಂಡ ಜಯರಾಮೇ ಗೌಡ, ಕಂಚನಹಳ್ಳಿ ಚಿಕ್ಕೀರೇಗೌಡ, ಸುರೇಶ್‌, ಹನುಮನಾಳು ಹೊಂಬೇಗೌಡ, ಸಿದ್ದೇಗೌಡ, ರಾಮು,  ಪಟ್ಟಣ ಅಧ್ಯಕ್ಷ ಜಯರಾಂ,   ಹೋಬಳಿ ಯುವ ಘಟಕದ ಅಧ್ಯಕ್ಷ ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT