ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂಸೇವಕರ ಶ್ರಮ ಶ್ಲಾಘನೀಯ

Last Updated 21 ಮೇ 2017, 9:57 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನಡೆದ ಆನೆಗಣತಿ ಕಾರ್ಯ ಶುಕ್ರವಾರ ಸಂಜೆ ಮುಗಿದಿದ್ದು, ಗಣತಿ ಕಾರ್ಯದಲ್ಲಿ ಪಾಲ್ಗೊಂಡಿದ್ದ ಸ್ವಯಂಸೇವಕರಿಗೆ ಪ್ರಮಾಣಪತ್ರ ನೀಡಲಾಯಿತು.

ಹುಲಿ ಯೋಜನೆ ನಿರ್ದೇಶಕ ಟಿ.ಹೀರಾಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸ್ವಯಂ ಸೇವಕರು ತಮ್ಮ ಅನುಭವ ಹಂಚಿಕೊಂಡರು.

ಟಿ.ಹೀರಾಲಾಲ್ ಅವರು, ‘ಕಾರ್ಯಕರ್ತರು ಸ್ವಇಚ್ಚೆಯಿಂದ ಆನೆಗಣತಿಗೆ ಆಗಮಿಸಿ ಯಶಸ್ವಿಯಾಗಿ ಕೆಲಸ ಮುಗಿಸಿದ್ದಾರೆ. ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗದಂತೆ ಇಲಾಖೆಯ ಸಿಬ್ಬಂದಿಮುಂಜಾಗ್ರತೆ ವಹಿಸಿದ್ದರು’ ಎಂದರು.

ಕಾಡಿನಲ್ಲಿ ಕಾರ್ಯನಿರ್ವಹಿಸುವುದು ಕಷ್ಟದ ಕೆಲಸ. ಅನುಭವಗಳಿಲ್ಲದೆ  ಶ್ರದ್ಧೆಯಿಂದ ಕೆಲಸ ನಿರ್ವಹಿಸಿರುವುದು ಶ್ಲಾಘನೀಯ. ಇವರು ತಾವು ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಕಾಣಲಿ ಎಂದು ಹಾರೈಸಿದರು.

ಸಂಪನ್ಮೂಲ ವ್ಯಕ್ತಿ ನಚಿಕೇತ್, ‘ಆನೆಗಣತಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಉತ್ತಮ ಸಹಕಾರ ನೀಡಿದರು. ನಮ್ಮ  ಶ್ರಮ ಗಣತಿಗಷ್ಟೇ ಸೀಮಿತವಾಗದೆ ಆನೆಗಳು, ವನ್ಯಜೀವಿಗಳ ಉಳಿವಿಗೆ ಎಲ್ಲರೂ ಶ್ರಮಿಸೋಣ ಎಂದು ಕಿವಿಮಾತು ಹೇಳಿದರು.

ಸ್ವಯಂ ಸೇವಕ ಅನಿಲ್‌ಕುಮಾರ್, ‘ನಾನು ಖಾಸಗಿ ಕಂಪೆನಿಯಲ್ಲಿ ಮ್ಯಾನೇಜರ್ ಆಗಿದ್ದೇನೆ. ಕಾಡು ಮತ್ತು ಕಾಡು ಪ್ರಾಣಿಗಳೆಂದರೆ ನನಗೆ ಪ್ರೀತಿ. ಆನೆಗಣತಿಯ ಮೊದಲ ದಿನ ಬ್ಲಾಕ್‌ಕೌಂಟ್ 2  ಬೀಟ್‌ನಲ್ಲಿ 25 ಕಿ.ಮೀ ನಡೆದು 6 ಆನೆಗಳನ್ನು ನೋಡಿದ್ದೆ, ಎರಡನೇ ದಿನ ಆನೆ ಲದ್ದಿ ಲೆಕ್ಕಹಾಕಿದೆವು. ಮೂರನೆ ದಿನ ಮಳೆ ಬಂತು, ಆನೆಗಳು ಕಾಣಿಸಲಿಲ್ಲ’ ಎಂದು ಹೇಳಿಕೊಂಡರು.

‘ನನಗೆ ಪ್ರಕೃತಿ ಎಂದರೆ ಮೊದಲಿನಿಂದಲೂ ಹುಚ್ಚು. ಇಂತಹ ಪರಿಸರ ನಿಶ್ಯಬ್ದತೆ ಸಂತೋಷ ನಗರದಲ್ಲಿ ಸಿಗುವುದಿಲ್ಲ. ನನ್ನೆಲ್ಲ ಕೆಲಸಗಳನ್ನು ಈ ನಾಲ್ಕು ದಿನ  ಬದಿಗೊತ್ತಿ ಗಣತಿಯಲ್ಲಿ ಭಾಗವಹಿಸಿದ್ದೆನೆ. ಅಧ್ಭುತ ಅನುಭವವನ್ನು ಪಡೆದುಕೊಂಡೆ. ಕಾಡುಗಳು ಮತ್ತು ಕಾಡು ಪ್ರಾಣಿಗಳು ಉಳಿದರೆ ಮಾತ್ರ ಮನುಕುಲ ಉಳಿಯುತ್ತದೆ ಎಂಬುದನ್ನು ತಿಳಿದುಕೊಂಡೆ. ಇಂತಹ ಅವಕಾಶ ಸಿಕ್ಕಿದರೆ ಪುನಃ ಭಾಗವಹಿಸುತ್ತೇನೆ’ ಎಂದು ಮೈಸೂರಿನ ನವ್ಯಾ ಅನುಭವ ಹೇಳಿಕೊಂಡರು.

ಕಾರ್ಯಕ್ರಮದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಡಾ.ಶಿವಪ್ರಕಾಶ್, ಡಿಎಫ್‌ಒಗಳಾದ ದೀಪಾ, ಮಹೇಶ್‌ಕುಮಾರ್ ಎಸಿಎಫ್‌ ಆಂತೋಣಿ ಮರಿಯಪ್ಪ ಪೂವಯ್ಯ, ಆರ್ಎಫ್‌ಒಗಳಾದ ಗೋವಿಂದರಾಜು, ಸುನೀಲ್‌ಕುಮಾರ್, ಶಿವಾನಂದ ಮುಗುದುಂ, ಪುಟ್ಟಸ್ವಾಮಿ, ಡಿಆರ್ಎಫ್‌ಒ ಅನಿಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT