ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ಅನುದಾನ: ನಿಗಮಕ್ಕೆ ಕೋರಿಕೆ

Last Updated 21 ಮೇ 2017, 10:13 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಸಾಲ ಮತ್ತು ಸಹಾಯಧನದ ಸೌಲಭ್ಯಗಳ ಗುರಿ ಕಡಿಮೆ ಇರುವ ಕಾರಣಕ್ಕೆ ಹೆಚ್ಚಿನ ಜನರಿಗೆ ಸಹಾಯ ಮಾಡಲು ಸಾಧ್ಯ ವಾಗುತ್ತಿಲ್ಲ. ಈ ಬಗ್ಗೆ ನಿಗಮದ ಅಧ್ಯಕ್ಷರು ಮತ್ತು ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆದು ಹೆಚ್ಚಿನ ಅನುದಾನ ನೀಡುವಂತೆ ಕೋರುತ್ತೇನೆ’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ,ಧಾರವಾಡದ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರದ (ಸಿಡಾಕ್) ಸಹಯೋಗದಲ್ಲಿ 3 ದಿನಗಳಿಂದ ಆಯೋಜಿಸಿದ್ದ ‘ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ’ದ ಸಮಾರೋಪ ಸಮಾರಂಭದಲ್ಲಿ  ಮಾತನಾಡಿದರು.

‘ನಿಗಮಕ್ಕೆ ಸಾವಿರಾರು ಜನರು ವಿವಿಧ ಯೋಜನೆಗಳಡಿ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ನಾವು 148 ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಬೇಕಿದೆ. ಇದರಿಂದ ಅನೇಕ ಬಡ ವರು ನಿರಾಶೆ ಭಾವ ತಳೆಯುತ್ತಿ ದ್ದಾರೆ. ಅದಕ್ಕಾಗಿ ನಿಗಮದ ಅಧ್ಯಕ್ಷ ರೊಂದಿಗೆ ಚರ್ಚಿಸಿ ಹೆಚ್ಚಿನ ಅನುದಾನ ತರಲು ಪ್ರಯತ್ನ ಮಾಡುತ್ತೇನೆ’ ಎಂದರು.

‘ದೇವರಾಜ ಅರಸು ಅವರು ಈ ರಾಜ್ಯ ಕಂಡ ಅಪರೂಪದ ರಾಜಕಾರಣಿಯಾಗಿದ್ದರು. ಬಡವರ ಬಗ್ಗೆ ಅವರಲ್ಲಿ ಬದ್ಧತೆ ಇತ್ತು. ಅದಕ್ಕಾಗಿಯೇ ಅವರು ಆಸ್ತಿಯಲ್ಲಿ ಕೂಡ ಸಮಾನತೆ ಇರಬೇಕು ಎಂದು ಪ್ರತಿಪಾದಿಸಿ ಉಳು ವವರನ್ನೇ ಭೂಮಿಗೆ ಒಡೆಯರನ್ನಾಗಿ ಮಾಡುವ ಕಠಿಣ ಕಾನೂನು ಜಾರಿಗೆ ತಂದರು. ಅವರ ಹೆಸರಿನಲ್ಲಿರುವ ಈ ನಿಗಮದ ಮೂಲಕ ಅವರ ಆಶಯ ನಮ್ಮ ನಡುವೆ ಜೀವಂತವಾಗಿವೆ’ ಎಂದರು.

‘ನಿಗಮದಿಂದ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕೆ ಅನೇಕ ಬಗೆಯ ಸಾಲಗಳನ್ನು ನೀಡಲಾಗುತ್ತದೆ. ನಿಗಮದ ವತಿಯಿಂದ ಸಹಾಯಧನ ಕೂಡ ದೊರೆಯುತ್ತದೆ. ಇಂತಹ ಯೋಜನೆ ಗಳನ್ನು ಸದುಪಯೋಗ ಪಡಿಸಿಕೊಂಡು ಮಹಿಳೆಯರು ಆರ್ಥಿಕವಾಗಿ ಸದೃಢರಾಗುವ ಜತೆಗೆ ಪ್ರಾಮಾಣಿಕರಾಗಿ ಸಾಲ ಮರು ಪಾವತಿ ಮಾಡಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಮಂಜು ನಾಥ್ ಮಾತನಾಡಿ, ‘2016–17ನೇ ಸಾಲಿನಲ್ಲಿ ನಿಗಮದ ವಿವಿಧ ಯೋಜನೆ ಗಳಡಿ 148 ಫಲಾನುಭವಿಗಳಿಗೆ ₹ 54.75 ಲಕ್ಷ ಸಹಾಯಧನ ಮತ್ತು ₹ 49.04 ಸಾಲ ಹೀಗೆ ಒಟ್ಟು ₹ 1.03 ಕೋಟಿ  ವಿತರಣೆ ಮಾಡಲಾಗುತ್ತಿದೆ. ಸಾಲ ಸೌಲಭ್ಯ ಪಡೆದವರು ಅದರಿಂದ ಜೀವನೋ ಪಾಯಕ್ಕೆ ಮಾರ್ಗೋಪಾಯ ಕಂಡುಕೊಳ್ಳಬೇಕು’ ಎಂದು ತಿಳಿಸಿದರು.

‘ಸರ್ಕಾರವೇ ಎಲ್ಲರಿಗೂ ಕೆಲಸ ನೀಡಲು ಆಗದು. ಸರ್ಕಾರಿ ಮತ್ತು ಖಾಸಗಿ ಕೆಲಸದ ಹೊರತಾಗಿ ಜೀವ ನೋಪಾಯಕ್ಕೆ ದಾರಿ ಮಾಡಿಕೊಡಬಲ್ಲ ಸಾಕಷ್ಟು ಸಾಂಪ್ರದಾಯಿಕ ವೃತ್ತಿಗಳು ನಮ್ಮಲ್ಲಿವೆ. ಅವುಗಳು ನಶಿಸಿ ಹೋಗ ದಂತೆ ಮುಂದುವರಿಸಿಕೊಂಡು ಹೋದರೆ ಗ್ರಾಮೀಣ ಗುಡಿ ಕೈಗಾರಿಕೆ ಯನ್ನು ಪ್ರೋತ್ಸಾಹಿಸಿದಂತಾಗುತ್ತದೆ ಜತೆಗೆ ನೀರುದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆ’ ಎಂದರು.

ನಗರಸಭೆ ಆಯುಕ್ತ ಉಮಾಕಾಂತ್, ಸಿಡಾಕ್ ಸಂಪನ್ಮೂಲ ವ್ಯಕ್ತಿ ಪ್ರಸನ್ನ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಆರ್. ಬಸವರಾಜು, ಮುಖಂಡರಾದ ಮರಳುಕುಂಟೆ ಕೃಷ್ಣ ಮೂರ್ತಿ, ನಾರಾಯಣಸ್ವಾಮಿ, ಶ್ರೀಧರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT