ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ದಿನದಲ್ಲಿ ಎರಡು ಬಾರಿ ಎವರೆಸ್ಟ್ ಏರಿದ ಅಂಶು

37 ವರ್ಷದ ಭಾರತದ ಮಹಿಳೆಗೆ ಜಗತ್ತಿನ ಅತೀ ಎತ್ತರದ ಶಿಖರವನ್ನು ಐದು ಸಲ ಏರಿದ ಹಿರಿಮೆ
Last Updated 21 ಮೇ 2017, 19:53 IST
ಅಕ್ಷರ ಗಾತ್ರ

ಇಟಾನಗರ, ಅರುಣಾಚಲ ಪ್ರದೇಶ: ಐದು ದಿನಗಳಲ್ಲಿ ಎರಡು ಬಾರಿ ಮೌಂಟ್‌ ಎವರೆಸ್ಟ್‌ ಶಿಖರ ಏರುವ ಮೂಲಕ ಅರುಣಾಚಲಪ್ರದೇಶದ ಪರ್ವಾತರೋಹಿ ಅಂಶು ಜಮ್‌ಸೆನ್ಪಾ ಹೊಸ ದಾಖಲೆ ಬರೆದಿದ್ದಾರೆ.

37 ವರ್ಷದ ಎರಡು ಮಕ್ಕಳ ತಾಯಿಯಾಗಿರುವ ಅಂಶು ವಿಶ್ವದ ಅತ್ಯಂತ ಎತ್ತರದ ಶಿಖರ ಏರಿ ಈ ಸಾಧನೆ ಮಾಡಿದ ಕೀರ್ತಿಗೆ ಪಾತ್ರರಾದರು.  ಅಂಶು ಇದುವರೆಗೆ ಐದು ಸಲ ಮೌಂಟ್‌ ಎವರೆಸ್ಟ್‌ ಶಿಖರವನ್ನು ಏರಿದ್ದಾರೆ.

‘ನೇಪಾಳದ ಪರ್ವತಾರೋಹಿ ಫುರಿ ಶೆರ್ಪಾ ಜತೆಗೂಡಿ ಈ 16ರಂದು ಬೆಳಿಗ್ಗೆ 8ರ ವೇಳೆ ಶಿಖರದ ತುದಿ ತಲುಪಿದರು’ ಎಂದು ಆಕೆಯ ಪತಿ ಶೆರಿಂಗ್‌ ವಾಂಗೆ ತಿಳಿಸಿದರು. 2011ರಲ್ಲಿ 10 ದಿನಗಳಲ್ಲೇ  ಎರಡು ಸಲ ಅಂಶು ಅವರು ಮೌಂಟ್‌ ಎವರೆಸ್ಟ್‌ ಶಿಖರ ಏರಿದ್ದರು.

ಮಾನವ ಕಳ್ಳಸಾಗಣೆ ವಿರುದ್ಧ ದನಿ: (ಕಠ್ಮಂಡು ವರದಿ): ಮಾನವ ಕಳ್ಳಸಾಗಣೆ ಸಂತ್ರಸ್ತೆಯಾಗಿದ್ದ ಕಾಂಚಿ ಮಾಯಾ ತಮಾಂಗ್ ಅವರು ಎವರೆಸ್ಟ್ ಶಿಖರ ಏರಿ, ಮಾನವ ಕಳ್ಳ ಸಾಗಣೆ ವಿರುದ್ಧ ದನಿ ಎತ್ತಿದ್ದಾರೆ. 8848 ಮೀಟರ್ ಎತ್ತರದ ಪರ್ವತ ಏರುವ ಮೂಲಕ ಕಾಂಚಿ, ತಮಾಂಗ್‌ನ  ಮೊದಲ ಮಹಿಳೆ ಎನಿಸಿದ್ದಾಳೆ.

‘ನಾವು ಮನುಷ್ಯರು, ವಸ್ತುಗಳಲ್ಲ’, ‘ಮಾನವ ಕಳ್ಳಸಾಗಣೆ ವಿರುದ್ಧ ಹೋರಾಟ’ ಎಂಬ ಬರಹವುಳ್ಳ ಬ್ಯಾನರ್‌ ಅನ್ನು ಅವರು ಶಿಖರದ ತುತ್ತತುದಿಯಲ್ಲಿ ಪ್ರದರ್ಶಿಸಿದ್ದಾರೆ.

ಮಹಿಳಾ ಸಬಲೀಕರಣ ಹಾಗೂ ಲಿಂಗ ಸಮಾನತೆ ಜಾಗೃತಿ ಮೂಡಿಸಲು ಎವರೆಸ್ಟ್ ಏರಿದ ಮೊದಲ ಮಹಿಳೆ ಇವರು ಎಂದು ವಿಶ್ವಸಂಸ್ಥೆ ಶ್ಲಾಘಿಸಿದೆ.
ಕಾಂಚಿ ಅವರ ಜತೆ ಪೆಂಬಾ ದೊರ್ಜಿ ಶೆರ್ಪಾ ಅವರು ಸೇರಿದಂತೆ 19 ಮಂದಿ ಈ ಸಾಹಸ ಮಾಡಿದ್ದಾರೆ. ಪೆಂಬಾ ಅವರು ಈವರೆಗೆ 16 ಬಾರಿ ಹಿಮಾಲಯ ಏರಿದ್ದಾರೆ. ಶಿಖರದ ಉತ್ತರ ಭಾಗದಿಂದ 150ಕ್ಕೂ ಅಧಿಕ ಮಂದಿ ಇನ್ನು ಕೆಲವೇ ದಿನಗಳಲ್ಲಿ ತುದಿ ತಲುಪಲಿದ್ದಾರೆ.

ಮಾಜಿ ಭಾರತ ಸುಂದರಿ ಪಾರು: ಎವರೆಸ್ಟ್‌ ಶಿಖರದ ಕ್ಯಾಂಪ್‌ನಲ್ಲಿ ಅನಾರೋಗ್ಯಕ್ಕೆ ತುತ್ತಾದ ಮಾಜಿ ಸುಂದರಿ ಸೇರಿದಂತೆ ಆರು ಮಂದಿಯನ್ನು ಸುರಕ್ಷಿತವಾಗಿ ವಾಪಸ್‌ ಕರೆತರಲಾಗಿದೆ.

ಕ್ಯಾಂಪ್‌ 2ರಲ್ಲಿದ್ದ  ಮಾಜಿ ಭಾರತ ಸುಂದರಿ ಜಮ್ಮು ಮತ್ತು ಕಾಶ್ಮೀರದ 52 ವರ್ಷದ ಸಂಗೀತಾ ಎಸ್‌.ಬಹ್ಲ್‌  ಅವರನ್ನು ಹೆಲಿಕಾಪ್ಟರ್‌ ಮುಖಾಂತರ ಸುರಕ್ಷಿತ ಸ್ಥಳಕ್ಕೆ ಕರೆತರಲಾಯಿತು ಎಂದು ಪರ್ವತಾರೋಹಣ ಆಯೋಜಿಸಿದ್ದ ಸಂಸ್ಥೆಯ ಆಯೋಜಕರು ತಿಳಿಸಿದ್ದಾರೆ.


ಎವರೆಸ್ಟ್‌ ಏರಿದ ನೌಕಾಪಡೆಯ ಪರ್ವತಾರೋಹಿ ತಂಡ
ಹೈದರಾಬಾದ್‌:
ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್‌ ಎವರೆಸ್ಟ್ ಶಿಖರದ ಮೇಲೆ ಭಾನುವಾರ ಬೆಳಿಗ್ಗೆ 7.15ಕ್ಕೆ ನೌಕಾಧ್ವಜವನ್ನು  ಹಾರಿಸುವ ಮೂಲಕ ಭಾರತ ನೌಕಾಸೇನೆ ಪರ್ವತಾರೋಹಿಗಳ ತಂಡ ಹೊಸ ದಾಖಲೆ ಬರೆಯಿತು.

ಪೂರ್ವ ನೌಕಾ ವಲಯದ ಲೆಫ್ಟಿನೆಂಟ್‌ ಶಶಾಂಕ್‌ ತಿವಾರಿ, ಲೆಫ್ಟಿನೆಂಟ್‌ ಅನಂತ್‌ ಕುಕ್ರೆಟಿ, ಲೆಫ್ಟಿನೆಂಟ್‌ ಕಮಾಂಡರ್‌ಗಳಾದ ಮಹಾರಾಣಾ, ಸಿ.ಎಸ್‌. ಯಾದವ್‌ ನೇತೃತ್ವದ ತಂಡವು ಈ ಸಾಧನೆ ಮಾಡಿತು.

ಪ್ರತಿಕೂಲ ಹವಾಮಾನದಿಂದಾಗಿ ತಂಡದಲ್ಲಿದ್ದ ಉಳಿದ ಆರು ಸದಸ್ಯರು ಅರ್ಧದಲ್ಲೇ ಹಿಂತಿರುಗಿದರು. ನೌಕಾ ಪಡೆಯ 12 ಸದಸ್ಯರ ಎರಡು ತಂಡವು ಮೌಂಟ್‌ ಎವರೆಸ್ಟ್ ಏರಲು ತೆರಳಿತ್ತು. ಈ ಪೈಕಿ ಮೊದಲ ತಂಡವು ತುದಿ ಮುಟ್ಟಿದ್ದು, ಮತ್ತೊಂದು ತಂಡವು  ಶಿಖರದ ತುದಿ ಮುಟ್ಟುವ ಹಾದಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT