ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀರೆಯುಟ್ಟು ಕಾನ್‌ಗೆ ಹೊರಟರು ಸೋನಂ

Last Updated 21 ಮೇ 2017, 19:30 IST
ಅಕ್ಷರ ಗಾತ್ರ

ಕಾನ್‌ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುವ ಭಾರತೀಯ ನಟಿಯರು ಧರಿಸುವ ಉಡುಗೆ ತೊಡುಗೆಯಿಂದ ಸುದ್ದಿ ಮಾಡುತ್ತಾರೆ. ನಟಿ ಸೋನಂ ಕಪೂರ್‌ ಅವರು ಸೀರೆಯಲ್ಲಿ ಕಾಣಿಸಿಕೊಳ್ಳಲಿರುವುದು ಈಗಿನ ಸುದ್ದಿ.

ಸೋನಂ ಚಿತ್ರೋತ್ಸವದಲ್ಲಿ ಮೊದಲ ಬಾರಿ ಸೀರೆಯುಟ್ಟು ಆಕರ್ಷಣೆಗೆ ಕೇಂದ್ರವಾಗಲು ನಿರ್ಧರಿಸಿದ್ದಾರೆ. ಅದಕ್ಕೆಂದೇ ಕೆನಡಾ ಮೂಲದ ಭಾರತ ಸಂಜಾತ ವಸ್ತ್ರ ವಿನ್ಯಾಸಕಿಯರಾದ ಮೃಗಾ ಕಪಾಡಿಯ ಮತ್ತು ಅಮೃತ್‌ ಕುಮಾರ್‌ ಅವರು ತಮ್ಮ ‘ನಾರ್‌ಬ್ಲಾಕ್‌, ನಾರ್‌ವೈಟ್‌’ ಲೇಬಲ್‌ನಡಿ ಸೋನಂಗಾಗಿ ಸೀರೆಯನ್ನು ವಿನ್ಯಾಸ ಮಾಡಿದ್ದಾರೆ.

ಸ್ಯಾಟಿನ್‌ನಂತಹ ಫ್ಯಾಬ್ರಿಕ್‌ನಲ್ಲಿ ಗುಲಾಬಿ, ನೇರಳೆ, ನೀಲಿ, ಕಂದು, ಹಳದಿ ಮತ್ತು ಹಸಿರು ಬಣ್ಣದ ದೊಡ್ಡ ದೊಡ್ಡ ಹೂವಿನಂತಹ ವಿನ್ಯಾಸವುಳ್ಳ ಸೀರೆಗೆ ಬಿಳಿ  ಬಣ್ಣದ ಲೇಯರ್‌ ಜಾಕೆಟ್‌ ಧರಿಸಲಿದ್ದಾರೆ.

‘ಕಾನ್‌ ಚಿತ್ರೋತ್ಸವದಲ್ಲಿ ನನ್ನ ಅಕ್ಕ ಸೋನಂ ಹೀಗೆ ಕಾಣಿಸಿಕೊಳ್ಳಲಿದ್ದಾಳೆ’ ಎಂಬ ಟಿಪ್ಪಣಿಯುಳ್ಳ ಫೋಟೊ ಇನ್‌ಸ್ಟಾಗ್ರಾಂನಲ್ಲಿ ಮಿಂಚುತ್ತಿದೆ. ಸೋನಂಗೆ ಸ್ಟೈಲಿಸ್ಟ್‌ ಕೂಡಾ ಆಗಿರುವ ಸಹೋದರಿ ರಿಯಾ ಈ ಫೋಟೊ ಅಪ್‌ಲೋಡ್‌ ಮಾಡಿದ್ದಾರೆ. ಲೊರಿಯಲ್‌ ಪ್ಯಾರಿಸ್‌ ಬ್ರ್ಯಾಂಡ್‌ನ ರಾಯಭಾರಿಯಾಗಿ ಸೋನಂ ಕಾನ್‌ ಚಿತ್ರೋತ್ಸವದ ಕೆಂಪು ಹಾಸಿನಲ್ಲಿ ಹೆಜ್ಜೆ ಹಾಕಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT