ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾಗಾ’ಕಾರದ ಪರಿಣಾಮ

Last Updated 21 ಮೇ 2017, 19:30 IST
ಅಕ್ಷರ ಗಾತ್ರ
ನಿರಂತರ ಅತ್ಯಾಚಾರಕ್ಕೊಳಗಾಗುತ್ತಿದ್ದ ಯುವತಿಯೊಬ್ಬರು ಆ ವ್ಯಕ್ತಿಯ ಮರ್ಮಾಂಗವನ್ನು ಕತ್ತರಿಸಿದ ಪ್ರಕರಣ ಕೇರಳದಲ್ಲಿ ನಡೆದಿರುವುದು ವರದಿಯಾಗಿದೆ (ಪ್ರ.ವಾ., ಮೇ 21). 
 
‘ಕಾಮಾತುರಾಣಾಂ ನ ಭಯಂ ನ ಲಜ್ಜಾ’ ಎಂಬಂತೆ, ಉಪಟಳ ತಡೆಯಲು ಸಂಕಲನ, ವ್ಯವಕಲನ, ಗುಣಾಕಾರ ಹೀಗೆಲ್ಲಾ  ಲೆಕ್ಕ ಹಾಕಿ ಕೊನೆಗೆ ಈ ಸಮಸ್ಯೆಯ ವರ್ಗಮೂಲವಾದ ಮರ್ಮಾಂಗದ ‘ಭಾಗಾ’ಕಾರವೇ ಸೂಕ್ತವೆನಿಸಿ, ಅದನ್ನು ಕತ್ತರಿಸಿ ಪೊಲೀಸರಿಗೆ ಶರಣಾಗಿದ್ದಾರೆ ಆ ಯುವತಿ. 
 
ಈ ಅಪರೂಪದ ಸಾಹಸಕ್ಕೆ ಮುಖ್ಯಮಂತ್ರಿಗಳಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ ಎಂದು ವರದಿಯಾಗಿದೆ. ಆದರೂ, ಕಾನೂನನ್ನು ಕೈಗೆ ತೆಗೆದುಕೊಂಡ ಕಾರಣ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುವುದು  ನಿಶ್ಚಿತ. ನ್ಯಾಯಾಲಯದಲ್ಲಿ ವಕೀಲರ ಎಂಥೆಂಥ  ಮುಜುಗರದ ಪ್ರಶ್ನೆಗಳನ್ನು ಆ ಯುವತಿ ಎದುರಿಸಬೇಕಾಗುತ್ತದೆಯೋ?
ವೆಂಕಟೇಶ ಮುದಗಲ್, ಕಲಬುರ್ಗಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT