ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ಲಾಂ ಸಂಸ್ಕೃತಿ ಹೊಗಳಿದ ಟ್ರಂಪ್

ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಮುಸ್ಲಿಮರಿಗೆ ಕರೆ
Last Updated 21 ಮೇ 2017, 19:30 IST
ಅಕ್ಷರ ಗಾತ್ರ
ರಿಯಾದ್:  ಎರಡು ದಿನಗಳ ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇಸ್ಲಾಮಿಕ್ ಭಯೋತ್ಪಾದನೆ ಬಿಕ್ಕಟ್ಟಿನ ವಿರುದ್ಧ ಹೋರಾಡುವಂತೆ ಮುಸ್ಲಿಮರಿಗೆ ಕರೆ ನೀಡಿದರು. 
 
‘ಇದು ಒಳ್ಳೆಯದು ಹಾಗೂ ಕೆಟ್ಟದ್ದರ ನಡುವಿನ ಹೋರಾಟವೇ ವಿನಃ ಪಶ್ಚಿಮ ಹಾಗೂ ಇಸ್ಲಾಂ ನಡುವಿನ ಹೋರಾಟವಲ್ಲ ’ ಎಂದು ಅವರು ಸ್ಪಷ್ಟಪಡಿಸಿದರು.
 
‘ನೀವು ಪೂಜಿಸುವ ಸ್ಥಳಗಳಿಂದ ನಿಮ್ಮ ದೇಶಗಳಿಂದ ಭಯೋತ್ಪಾದನೆಯನ್ನು ಓಡಿಸಿ’ ಎಂದು ಮುಸ್ಲಿಮ್ ಪ್ರಾಬಲ್ಯದ 50 ದೇಶಗಳ ನಾಯಕರಿಗೆ ಅವರು ಕರೆ ನೀಡಿದರು. 
 
ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಭಯೋತ್ಪಾದನೆಯನ್ನು  ‘ಮೂಲಭೂತ ಇಸ್ಲಾಮಿಕ್ ಭಯೋತ್ಪಾದನೆ’ ಎಂದೇ ಕರೆಯುತ್ತಿದ್ದ ಟ್ರಂಪ್, ಸೌದಿಯಲ್ಲಿ ಮೆದು ಭಾಷೆಯನ್ನು ಬಳಸಿದ್ದು ಕಂಡುಬಂದಿತು. 
 
ಏಳು ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕ ಪ್ರವೇಶದ ಮೇಲೆ ನಿರ್ಬಂಧ ಹೇರಿ ಟೀಕೆ ಎದುರಿಸಿದ್ದ ಬಳಿಕ ಕೈಗೊಂಡ ಮೊದಲ ಪ್ರವಾಸ ಇದಾಗಿತ್ತು. ಚೊಚ್ಚಲ ವಿದೇಶ ಪ್ರವಾಸದಲ್ಲಿ ಮುಸ್ಲಿಮರನ್ನು ಉದ್ದೇಶಿಸಿ  ಮಾತನಾಡಿದ ಟ್ರಂಪ್, ಮುಸ್ಲಿಂ ಜಗತ್ತಿನ ಇತಿಹಾಸ ಹಾಗೂ ಸಂಸ್ಕೃತಿಯನ್ನು ಹೊಗಳಿದರು. ಇಸ್ಲಾಮ್ ಅನ್ನು ‘ಜಗತ್ತಿನ ಅದ್ಭುತ ನಂಬಿಕೆ’ ಎಂದು ಬಣ್ಣಿಸಿದರು. 
 
ಕೊಲ್ಲಿ ದೇಶಗಳ ನಾಯಕರ ಜತೆ ಟ್ರಂಪ್ ಚರ್ಚೆ: ತೈಲ ಸಂಪದ್ಭರಿತ ಕೊಲ್ಲಿ ರಾಷ್ಟ್ರಗಳ ನಾಯಕರ ಜೊತೆ ಟ್ರಂಪ್ ಅವರು ಭಾನುವಾರ ಮಾತುಕತೆ ನಡೆಸಿದರು. ಮಾತುಕತೆಗೂ ಮೊದಲು ಕೊಲ್ಲಿ ದೇಶಗಳ ಸಹಕಾರ ಮಂಡಳಿ (ಜಿಸಿಸಿ) ನಾಯಕರು  ಟ್ರಂಪ್ ಜತೆ ಭಾವಚಿತ್ರ ತೆಗೆಸಿಕೊಂಡರು.
****
ರಕ್ಷಣಾ ಒಪ್ಪಂದಕ್ಕೆ ಸಹಿ
ಸೌದಿ ಅರೇಬಿಯಾಕ್ಕೆ ಎರಡು ದಿನಗಳ ಭೇಟಿ ನೀಡಿರುವ ಟ್ರಂಪ್ ಅವರಿಗೆ ರಿಯಾದ್‌ನಲ್ಲಿ ಶನಿವಾರ ರಾತ್ರಿ ಅದ್ದೂರಿ  ಸ್ವಾಗತ ಸಿಕ್ಕಿತು. ಸಾಂಪ್ರದಾಯಿಕವಾಗಿ ಚಿನ್ನದ ಪದಕ ನೀಡಿ ದೊರೆ ಮಹಮ್ಮದ್ ಬಿನ್ ಅವರು ಟ್ರಂಪ್ ಅವರನ್ನು ಗೌರವಿಸಿದರು.

ದ್ವಿಪಕ್ಷೀಯ ವ್ಯವಹಾರ ವೃದ್ಧಿ ಹಾಗೂ ಸೌದಿ ಅರೇಬಿಯಾದ ರಕ್ಷಣಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ₹6 ಲಕ್ಷ ಕೋಟಿ  ಮೊತ್ತದ ರಕ್ಷಣಾ ಒಪ್ಪಂದಕ್ಕೆ ಅಮೆರಿಕ ಸಹಿ ಹಾಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT