ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್: ವೈಶಾಲಿಗೆ ಚಿನ್ನ

Last Updated 21 ಮೇ 2017, 19:30 IST
ಅಕ್ಷರ ಗಾತ್ರ

ಚೆನ್ನೈ:  ಭಾರತದ ಆರ್‌. ವೈಶಾಲಿ ಚೀನಾದಲ್ಲಿ ನಡೆದ ಏಷ್ಯನ್ ಕಾಂಟಿನೆಂಟಲ್ ಬ್ಲಿಟ್ಜ್‌ ಚೆಸ್‌ ಚಾಂಪಿ ಯನ್‌ಷಿಪ್‌ನಲ್ಲಿ ಭಾನುವಾರ ಚಿನ್ನ ಗೆದ್ದುಕೊಂಡಿದ್ದಾರೆ.

ಟೂರ್ನಿಯ ಒಂಬತ್ತು ಸುತ್ತುಗಳಲ್ಲಿ ವೈಶಾಲಿ ಏಳರಲ್ಲಿ ಗೆದ್ದು ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ಅಂತಿಮ ಸುತ್ತಿನಲ್ಲಿ ವೈಶಾಲಿ ಮಂಗೋಲಿಯಾದ ಯುರತ್ಸೇಕ್ ಯುರಿ ನತುಯಾ ವಿರುದ್ಧ ಡ್ರಾ ಮಾಡಿ ಕೊಂಡರು. ಇರಾನ್‌ನ ಸರಸ್‌ದತ್ ಅವ ರಿಗಿಂತ ಅರ್ಧ ಪಾಯಿಂಟ್ಸ್ ಹೆಚ್ಚು ಪಡೆದ ಭಾರತದ ಆಟಗಾರ್ತಿ ಚಿನ್ನ ಜಯಿಸಿದರು.

ಭಾರತದ ಪದ್ಮಿನಿ ರಾವತ್ ಮೂರನೇ ಸ್ಥಾನ ಪಡೆದರು. ಅಂತಿಮ ಸುತ್ತಿನಲ್ಲಿ ಅವರು ಚೀನಾದ ಯುಕ್ಸಿಂಗ್ ಸಂಗ್ ಎದುರು ಗೆದ್ದರು. ಚೆನ್ನೈ ಆಟಗಾರ್ತಿ 2203 ರೇಟಿಂಗ್ ಪಾಯಿಂಟ್ಸ್ ಗಳಿಸಿದ್ದಾರೆ.

ಭಾರತದ ಇತರ ಸ್ಪರ್ಧಿಗಳಾದ ಸೌಮ್ಯಾ ಸ್ವಾಮಿನಾಥನ್ (5.5 ಪಾಯಿಂಟ್ಸ್‌) 12ನೇ ಸ್ಥಾನ, ಮೇರಿ ಆ್ಯನ್ ಗೋಮ್ಸ್‌ ಕ್ಲಾಸಿಕ್ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ತಮಿಳುನಾಡಿನ ಅರವಿಂದ್ ಚಿದಂ ಬರಂ ಏಳು ಪಾಯಿಂಟ್ಸ್‌ಗಳಿಂದ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಏಳು ಪಂದ್ಯ ಗೆದ್ದ ಅವರು ಎರಡರಲ್ಲಿ ಡ್ರಾ ಹಾಗೂ ಒಂದರಲ್ಲಿ ಸೋಲು  ಕಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT