ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ನಿರ್ಮಾಣಕ್ಕೆ ವೋಲ್ವೊ ಪೇವರ್

Last Updated 21 ಮೇ 2017, 19:32 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ಬಸ್‌ ಮತ್ತು ಟ್ರಕ್‌ನಂತಹ ಬೃಹತ್‌ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ವೋಲ್ವೊ ಕಂಪೆನಿಯು ರಸ್ತೆ ನಿರ್ಮಾಣದ ಹೊಸ ವಾಹನವನ್ನು (ಪೇವರ್‌) ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ನಿರ್ಮಾಣ ವಲಯದ ಬೃಹತ್‌ ಯಂತ್ರೋಪಕರಣ ವಾಹನ ತಯಾರಿಕಾ ವಿಭಾಗವು ಹೊಸಕೋಟೆ ಬಳಿಯ ಘಟಕದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ರಸ್ತೆ ನಿರ್ಮಾಣ ವಾಹನವನ್ನು ಅನಾವರಣಗೊಳಿಸಿತು.

‘ಕಳೆದ ವರ್ಷ ಬಿಡುಗಡೆಯಾಗಿದ್ದ 5.50 ಮತ್ತು 7 ಮೀಟರ್‌ ಸಾಮರ್ಥ್ಯದ ಸಿ ಸರಣಿಯ ಪಿ6820ಸಿ ವಾಹನಗಳಿಗೆ  ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಇದರಿಂದ ಉತ್ತೇಜಿತರಾಗಿ 9 ಮೀಟರ್ ಅಗಲದ ರಸ್ತೆ  ನಿರ್ಮಾಣ ಸಾಮರ್ಥ್ಯದ ಈ ವಾಹನವನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ’ ಎಂದು ಸಂಸ್ಥೆಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಡಿಮಿಟ್ರೋವ್‌ ಕೃಷ್ಣನ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ವಾಹನ ಎರಡು ವರ್ಷಗಳ ಮೊದಲೇ ವಿದೇಶಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಸದ್ಯ ಜರ್ಮನಿಯ ಘಟಕದಲ್ಲಿ ತಯಾರಾದ ಪಿ6820ಸಿ  ಪೇವರ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತದ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕೆಲವು ಮಾರ್ಪಾಡು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಘಟಕದಲ್ಲಿಯೇ ಈ ವಾಹನ ತಯಾರಿಕೆ ಆರಂಭಿಸಲಾಗುವುದು’ ಎಂದರು.

‘ರಸ್ತೆ ಮತ್ತು ಹೆದ್ದಾರಿ ಚಟುವಟಿಕೆ ಗರಿಗೆದರಿದ್ದು  ಈ ವಾಹನಗಳಿಗೆ  ಬೇಡಿಕೆ ಕುದುರಿದೆ. ಅತ್ಯಾಧುನಿಕ ತಂತ್ರಜ್ಞಾನ, ನಿಯಂತ್ರಣ, ಎಂಜಿನ್‌  ಮತ್ತು  ತಯಾರಿಕಾ ಸಾಮರ್ಥ್ಯ ಹೊಂದಿದೆ’ ಎಂದು ಅವರು ತಿಳಿಸಿದರು.

‘ಸದ್ಯ ದೇಶದಲ್ಲಿ ಲಭ್ಯವಿರುವ ಅತ್ಯಾಧುನಿಕ ಹಾಗೂ ಹೆಚ್ಚು ಸಾಮರ್ಥ್ಯದ ರಸ್ತೆ ನಿರ್ಮಾಣ ವಾಹನ ಎಂಬ ಹೆಗ್ಗಳಿಕೆ ಈ ವಾಹನಕ್ಕೆ ಇದೆ’ ಎಂದು ಡಿಮಿಟ್ರೋವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT